ಮಂಡ್ಯ: ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ನಗರದ ಹೊಸಹಳ್ಳಿ ನಿವಾಸಿ ಮಹದೇವಸ್ವಾಮಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಮಹದೇವಸ್ವಾಮಿ, ನಾಮಫಲಕಗಳನ್ನು ಪ್ರದರ್ಶಿಸಿ ಹೋರಾಟ ನಡೆಸುತ್ತಾ ನ್ಯಾಯ ಕೇಳುತ್ತಿದ್ದಾರೆ.
ಮಕ್ಕಳನ್ನು ಮಾರಾಟ ಮಾಡುವ ವಿಚಾರವಾಗಿ ಪತ್ನಿಯ ಪೋಷಕರು ನೀಡಿದ ಮಾನಸಿಕ ಹಿಂಸೆಯಿಂದ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಒತ್ತಾಯಿಸುತ್ತಿರುವ ಅವರು, ನನಗೆ ಮೂರು ಗಂಡು ಮಕ್ಕಳಿದ್ದು, ಆ ಮಕ್ಕಳನ್ನು ಮಾರಾಟ ಮಾಡುವಂತೆ ಪತ್ನಿಯ ಪೋಷಕರು ಇನ್ನಿಲ್ಲದಂತೆ ಪೀಡಿಸಿದರು. ಇದಕ್ಕೆ ನಾನು ಮತ್ತು ನನ್ನ ಪತ್ನಿ ಒಪ್ಪಿರಲಿಲ್ಲ. ಮಕ್ಕಳ ಮಾರಾಟಕ್ಕೆ ಇವರು ನೀಡುತ್ತಿದ್ದ ಹಿಂಸೆ ತಾಳಲಾರದೆ ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಆರೋಪಿಸಿದರು.
ಪತ್ನಿಯ ಆತ್ಮಹತ್ಯೆಯಿಂದ ನನ್ನ ಕುಟುಂಬಕ್ಕೆ ಅವಮಾನವಾಗಿದೆ. ಅದು ಮಾತ್ರವಲ್ಲದೇ ನನಗೆ ಮತ್ತು ನನ್ನ ಮೂವರು ಗಂಡು ಮಕ್ಕಳಿಗೆ ಪತ್ನಿಯ ಪೋಷಕರಿಂದ ಜೀವಬೆದರಿಕೆ ಇದೆ. ಪೊಲೀಸರು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಹೆಂಡತಿ ಸಾವಿನಿಂದ ನನಗೆ ಹಾಗೂ ಮಕ್ಕಳಿಗೆ ಅನ್ಯಾಯವಾಗಿದೆ. ಸಾವಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನನ್ನ ಬಳಿ ಇದ್ದು, ಸೂಕ್ತ ನ್ಯಾಯ ದೊರಕಿಸುವಂತೆ ಒತ್ತಾಯಿಸಿದರು.