News Kannada
Wednesday, October 05 2022

ಕರ್ನಾಟಕ

ಹನೂರಲ್ಲಿ ಒಂದೇ ದಿನ ಹದಿಮೂರು ಜಾನುವಾರು ಸಾವು - 1 min read

Photo Credit :

ಹನೂರಲ್ಲಿ ಒಂದೇ ದಿನ ಹದಿಮೂರು ಜಾನುವಾರು ಸಾವು

ಹನೂರು: ಒಂದೇ ದಿನ ಸುಮಾರು ಹದಿಮೂರು ಜಾನುವಾರು ಮೃತಪಟ್ಟ ಘಟನೆ ಸಮೀಪದ ಕೆ.ವಿ.ಎನ್. ದೊಡ್ಡಿಗ್ರಾಮದಲ್ಲಿ ನಡೆದಿದ್ದು, ಇವುಗಳ ಸಾವಿಗೆ ಮೆಕ್ಕೆ ಜೋಳದ ಎಳೆ ಪೈರು ಸೇವಿಸಿರುವುದೇ ಕಾರಣವಾಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

ಸತ್ತಿರುವ ಜಾನುವಾರುಗಳು ಪೈಕಿ ನಾಗರಾಜು ಅವರ ಐದು, ಮಾದೇಶ ಎಂಬುವರ ಎಂಟು ಸೇರಿದ್ದು, ಒಟ್ಟು ಹದಿಮೂರು ಜಾನುವಾರುಗಳು ಸಾವನ್ನಪ್ಪಿದ್ದರಿಂದ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ. ಈ ಹಸುಗಳು ಮೆಕ್ಕೆ ಜೋಳದ ಎಳೆ ಪೈರುಗಳನ್ನು ಸೇವಿಸಿದ್ದರಿಂದ ಸಾವನ್ನಪ್ಪಿರಬಹುದೆಂದು ಒಬ್ಬರು ಹೇಳಿದರೆ ಮತ್ತೊಬ್ಬರು ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರಬಹುದೆಂದು ಹೇಳುತ್ತಿದ್ದಾರೆ. ಇದೀಗ ಸತ್ತಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆಯನ್ನು  ಪಶು ವೈದ್ಯಾಧಿಕಾರಿಗಳು ನಡೆಸಿದ್ದು, ಅದರ ವರದಿ ಬಂದ ಬಳಿಕವಷ್ಟೆ ಸಾವಿಗೆ ನೈಜ ಕಾರಣ ತಿಳಿದು ಬರಬೇಕಿದೆ.

ಮಳೆ ಇಲ್ಲದ ಕಾರಣ ಮೇವಿನ ಅಭಾವದಿಂದ ಜಾನುವಾರುಗಳನ್ನು ಕಳೆದೊಂದು ವರ್ಷದಿಂದ ಜಾಗರೆ ಅರಣ್ಯ ಪ್ರದೇಶದಲ್ಲಿ ಮೇಯಿಸಲಾಗುತ್ತಿತ್ತು. ಇತ್ತೀಚೆಗೆ ಗೋಶಾಲೆಯನ್ನು ತೆರೆದಿರುವ ಕಾರಣ ಒಂದು ವಾರದ ಹಿಂದೆ ಜಾನುವಾರುಗಳನ್ನು ಇಲ್ಲಿಗೆ ಕರೆತಂದಿದ್ದೆವು. ಆದರೆ ನಾವು ಸಾಕಿದ ಜಾನುವಾರುಗಳು ಹೀಗೆ ಸತ್ತಿರುವುದು ನಮಗೆ ಅಘಾತವಾಗಿದೆ ಎಂದು ಜಾನುವಾರುಗಳನ್ನು ಕಳೆದುಕೊಂಡ ನಾಗರಾಜು ಅವರು ಅಳಲು ತೋಡಿಕೊಂಡಿದ್ದಾರೆ.

ಗೋಶಾಲೆಗೆ ಹೊಡೆದುಕೊಂಡು ಹೋಗಿದ್ದ ಜಾನುವಾರುಗಳು ಮತ್ತೆ ಮನೆಗೆ ಬರುವ ಸಂದರ್ಭದಲ್ಲಿ ಗೋಪಾಲಕರ ನಿರ್ಲಕ್ಷ್ಯದಿಂದ (ಹಸಿರು ಮೇವು ಸಿಗುವುದು ಅಪರೂಪವಾಗಿದ್ದು) ಮಕ್ಕೆ ಜೋಳ ಬೆಳೆದಿದ್ದ ಜಮೀನಿಗೆ ನುಗ್ಗಿ ಅವಸರವಸರವಾಗಿ ಹಸಿರು ಮೇವನ್ನು ತಿನ್ನಿಸಿದ ಪರಿಣಾಮ ದೇಹದ ಮೇಲೆ ವೃತ್ತಿರಿಕ್ತ ಪರಿಣಾಮ ಬೀರಿ ಸಾವನ್ನಪ್ಪಿರಬಹುದೆಂಬ ಮಾತುಗಳು ಕೇಳಿ ಬರುತ್ತಿದೆ.

ಈ ಬಗ್ಗೆ ಜಾನುವಾರುಗಳನ್ನು ಕಳೆದುಕೊಂಡ ಮಾಲೀಕ ಮಾದೇಶ ಮಾತನಾಡಿ ಕಳೆದ ರಾತ್ರಿ ಬಿದ್ದಿದ್ದ ಮಳೆಯ ಕಾರಣ ಕೆಂಪು ಮಿಶ್ರಿತ ನೀರನ್ನು ಕುಡಿದಿರುವ ಪರಿಣಾಮ ಹೀಗಾಗಿದೆ ಎಂದು ಹೇಳಿದ್ದಾರೆ.

ಒಂದೇ ದಿನದಲ್ಲಿ ಹದಿಮೂರು ಜಾನುವಾರುಗಳು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತ ಮುತ್ತ ಗ್ರಾಮಸ್ಥರು ಶಾಸಕ ನರೇಂದ್ರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ತಹಸೀಲ್ದಾರ್ ಕಾಮಾಕ್ಷಮ್ಮ ಭೆೇಟಿ ನೀಡಿ ಜಾನುವಾರುಗಳನ್ನು ಕಳೆದುಕೊಂಡ ಮಾಲಿಕರಿಗೆ ಸಾಂತ್ವನ ಹೇಳಿದರು.

ಒಂದೇ ಸ್ಥಳದಲ್ಲಿ ಕರುಗಳು ಸೇರಿದಂತೆ 13 ಜಾನುವಾರುಗಳು ಸತ್ತು ಬಿದ್ದಿರುವ ದೃಶ್ಯ ನೋಡುಗರ ಮನಕಲಕುವಂತಿದ್ದು, ಜಾನುವಾರುಗಳ ಅಂತ್ಯಕ್ರಿಯೆ ಸಾಮೂಹಿಕವಾಗಿ  ನೆರವೇರಿಸಲಾಯಿತು.

See also  ರಿಯಾಯಿತಿ ದರದ ಆಕ್ಸಿಮೀಟರ್‌ಗಾಗಿ ಉದ್ದನೆ ಸಾಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು