News Kannada
Saturday, October 01 2022

ಕರ್ನಾಟಕ

ಬಿಸಿಲ ಬೇಗೆಗೆ ತಂಪು ಸೂಸುವ ಹೊಂಗೆ ಮರಗಳು - 1 min read

Photo Credit :

ಬಿಸಿಲ ಬೇಗೆಗೆ ತಂಪು ಸೂಸುವ ಹೊಂಗೆ ಮರಗಳು

ಯಳಂದೂರು: ಬಿಸಿಲ ಬೇಗೆಗೆ ಬೇಸತ್ತ ಜನ ನೆರಳು ಹುಡುಕುವುದು ಸಾಮಾನ್ಯವಾಗಿದೆ. ಹೀಗಿರುವಾಗ ಹೊಂಗೆ ಮರದ ನೆರಳು ಸಿಕ್ಕಿದರಂತೂ ಸ್ವರ್ಗವೇ ಕೈಗೆ ಸಿಕ್ಕ ಅನುಭವವಾಗಿ ಬಿಡುತ್ತದೆ.

ಸಾಮಾನ್ಯವಾಗಿ ಬಯಲು ಪ್ರದೇಶದ ಹೆಚ್ಚಿನ ಜನರನ್ನು ಬಿಸಿಲಿನಿಂದ ರಕ್ಷಿಸುವುದು ಹೊಂಗೆ ಮರದ ನೆರಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಸಿಲ ಬೇಗೆಗೆ ಹೊಂಗೆ ಮರದ ನೆರಳಲ್ಲಿ ಕುಳಿತೋ? ಮಲಗಿಯೋ? ಒಟ್ಟಾರೆ ಮೈಯೊಡ್ಡಿ ಬಿಸಿಲ ಬೇಗೆಗೆ ರಿಲ್ಯಾಕ್ಸ್ ಆಗಲು ಹವಣಿಸುತ್ತಿರುವ ಜನರನ್ನು ಕಾಣಬಹುದು. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಅರಳಿಕಟ್ಟೆಯಲ್ಲಿರುವ ಹೊಂಗೆ, ಅರಳಿ ಮರ, ಆಲದ ಮರಗಳು  ಸೊಂಪಾಗಿ ಬೆಳೆದು ದಾರಿ ಹೋಕರಿಗೆ ತಂಪು ನೀಡುತ್ತಿದೆ.

ಕಂದಹಳ್ಳಿ ಮಹದೇಶ್ವರ ದೇವಾಲಯದಿಂದ ಅಂಬಳೆ ಗ್ರಾಮದವರೆಗೆ ಸುಮಾರು 1 ಕಿ.ಮೀ ದೂರದವರೆಗೆ ರಸ್ತೆ ಬದಿಯಲ್ಲಿ ಹೊಂಗೆ, ಅರಳಿ, ಆಲದ ಮರ ನೆಟ್ಟಿರುವುದರಿಂದ ಅವು ಇವತ್ತು ಹುಲುಸಾಗಿ ಬೆಳೆದು ನೆರಳು ನೀಡುತ್ತಾ ತಂಪು ಗಾಳಿ ಬೀಸುತ್ತಾ ದಾರಿ ಹೋಕರಿಗೆ ತಂಪಿನ ವಾತಾವರಣವನ್ನು ನೀಡಿದೆ. ಹೊಲಗದ್ದೆಯಲ್ಲಿ ದುಡಿಯುವ ರೈತರು, ಕಾರ್ಮಿಕರು ಮಧ್ಯಾಹ್ನ ಸಂಜೆ ಹೊತ್ತು ಈ ಮರಗಳ ಅಡಿಯಲ್ಲಿ ಮಲಗಿ, ಕುಳಿತು ವಿಶ್ರಾಂತಿ ಪಡೆಯುತ್ತಾರೆ. ಈ ಮರಗಳನ್ನು ಸುಮಾರು 40 ವರ್ಷಗಳ ಹಿಂದೆ ನೆಟ್ಟು ಬೆಳೆಸಲಾಗಿದ್ದು, ಇವುಗಳ ಕೆಳಗೆ ಜನ ವಿಶ್ರಾಂತಿ ಪಡೆಯುವುದು ಮಾತ್ರವಲ್ಲದೆ, ಟೀ ಅಂಗಡಿ, ಹೋಟೆಲ್ ಇಟ್ಟು ವ್ಯಾಪಾರ ಮಾಡುವ ಮೂಲಕ ಹೊಟ್ಟೆಹೊರೆದು ಕೊಳ್ಳುತ್ತಿದ್ದಾರೆ.

ಅದು ಏನೇ ಇರಲಿ ಕಳೆದ ನಲುವತ್ತು ವರ್ಷಗಳ ಹಿಂದೆ ಬೆಂಗಾಡಾಗಿದ್ದ ಜಾಗದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದ್ದರಿಂದ ಇಂದು ತಂಪಾದ ವಾತಾವರಣ ನಿರ್ಮಾಣವಾಗಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ.

See also  ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ: ಮಡಿಕೇರಿಯಲ್ಲಿ ಆರೋಗ್ಯ ಸಿಬ್ಬಂದಿಗಳ ಮುಷ್ಕರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು