News Kannada
Wednesday, October 05 2022

ಕರ್ನಾಟಕ

ಕೊಡಗಿನಲ್ಲಿ ಕಾವೇರಿ ನದಿ ಸಂರಕ್ಷಣೆಗೆ ಡಿಸಿ ಸೂಚನೆ - 1 min read

Photo Credit :

ಕೊಡಗಿನಲ್ಲಿ ಕಾವೇರಿ ನದಿ ಸಂರಕ್ಷಣೆಗೆ ಡಿಸಿ ಸೂಚನೆ

ಮಡಿಕೇರಿ: ಕೊಡಗಿನಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ತ್ಯಾಜ್ಯ ನೀರು ಸೇರ್ಪಡೆಯಾಗಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ದೂರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪರಿಸರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾವೇರಿ ನದಿ ನೀರಿನ ಸಂರಕ್ಷಣೆ ಸಂಬಂಧ ಸಭೆ ನಡೆಸಿದ ಅವರು ಕಾವೇರಿ ನದಿ ಜಿಲ್ಲೆಯಲ್ಲಿ ಸುಮಾರು 84 ಕಿ.ಮೀ.ನಷ್ಟು ಹರಿಯುತ್ತಿದ್ದು, ಹಲವೆಡೆ ನದಿ ಸ್ವಚ್ಛತೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದ್ದು ಇದನ್ನು ತಡೆಗಟ್ಟುವಂತೆ ಅಧಿಕಾರಿಗಳಿಗೆ ಹೇಳಿದರಲ್ಲದೆ, ಬಲಮುರಿಯಲ್ಲಿ ನದಿಯಲ್ಲಿ ವಾಹನಗಳನ್ನು ತೊಳೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪಿಡಿಒ ಅವರಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು, ಹಾರಂಗಿ ಹಿನ್ನೀರಿಗೆ ಕಾಫಿ ತ್ಯಾಜ್ಯವನ್ನು ಬಿಡುತ್ತಿರುವ ದೂರು ಕೇಳಿ ಬಂದಿದ್ದು, ಪರಿಸರ ಅಧಿಕಾರಿಯವರು ಸ್ಥಳ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಬೇಕು, ಜಿಲ್ಲೆಯಲ್ಲಿ ಹೆಚ್ಚು ಶುಂಠಿ ತೊಳೆಯುವ ಘಟಕಗಳನ್ನು ಪರಿಶೀಲಿಸಿ ಶುಂಠಿ ತೊಳೆದ ತ್ಯಾಜ್ಯದ ನೀರನ್ನು ನದಿಗೆ ಬಿಡದಂತೆ ನೋಡಿಕೊಳ್ಳಬೇಕು. ನದಿ ತಟದಲ್ಲಿ ಬರುವಂತಹ ಪಟ್ಟಣ ಗ್ರಾಮಗಳಲ್ಲಿ ಸಾರ್ವಜನಿಕರ ಸಂಪರ್ಕ ಸಭೆಯನ್ನು ಕರೆದು ಅಹವಾಲುಗಳನ್ನು ಸ್ವೀಕರಿಸಿ ನದಿಯ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸೂಕ್ತ ಸಹಕಾರವನ್ನು ಸಾರ್ವಜನಿಕರಿಂದ ಪಡೆದು ನದಿಗೆ ತ್ಯಾಜ್ಯವನ್ನು ಬಿಡದಂತೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಪಿಡಿಒಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಸ್ವಚ್ಛ ಭಾರತ ಯೋಜನೆಯಡಿ ಬರುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅವರಿಗೆ ಸೂಕ್ತ ಸಲಹೆಗಳನ್ನು ನೀಡುವಂತೆ ನದಿ ಸ್ವಚ್ಛತಾ ಆಂದೋಲನಕ್ಕೆ ಸಂಬಂಧಿಸಿದ ವಿವರಗಳನ್ನು ಅವರೊಂದಿಗೆ ಹಂಚಿಕೊಂಡು ಅವರ ಸಹಕಾರವನ್ನು ಪಡೆಯುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಅವರಿಗೆ ತಿಳಿಸಿದರು.

ಯಾವ ಯಾವ ಪಂಚಾಯಿತಿಗಳಲ್ಲಿ ನದಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂಬುದರ ಬಗ್ಗೆ ಪಟ್ಟಿ ಮಾಡಿ ಸಂಬಂಧಿಸಿದ ಪಿಡಿಓ ಅವರೊಂದಿಗೆ ಕೈಜೋಡಿಸಿ ಸ್ವಚ್ಛತೆ ಕೆಲಸವನ್ನು ಮಾಡುವಂತಾಗಬೇಕು. ಸ್ವಚ್ಛ ಭಾರತ ಅಭಿಯಾನದಲ್ಲಿ ಎಲ್ಲರೂ ಮುತುವರ್ಜಿ ವಹಿಸಿ ಎಲ್ಲರ ಸಹಕಾರದಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕರಿಗೆ ಸಲಹೆ ನೀಡಿದರು.

See also  ಕ್ಯಾರಂಟೈನ್ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ: ಡಿಸಿ ಸಜಿತ್ ಬಾಬು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು