ಹಾಸನ: ಕೆಲ ಅರಣ್ಯಾಧಿಕಾರಿಗಳ ಕಿರುಕುಳ ತಾಳಲಾರದೆ ಇಲಾಖೆ ಸಿಬ್ಬಂದಿ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದು, ಸಾವಿಗೆ ಕಾರಣರಾದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನ್ಯಾಯಕೊಡಿಸುವಂತೆ ಮೃತನ ಕುಟುಂಬದವರು ಅರಣ್ಯ ಭವನದ ಮುಂದೆ ಶವವಿಟ್ಟು ಧರಣಿ ನಡೆಸಿದ ಘಟನೆ ನಡೆದಿದೆ.
ಸಕಲೇಶಪುರದ ಸಂಶೋಧನ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಎಸ್. ಮಂಜುನಾಥ್ ಎಂಬುವರು ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಎಸಿಎಫ್ ಅವರನ್ನು ಕರ್ತವ್ಯದ ಹಿನ್ನಲೆಯಲ್ಲಿ ಇಲಾಖೆಯ ಜೀಪಿನಲ್ಲಿ ಮಡಿಕೇರಿಯ ಅರಣ್ಯ ಭವನಕ್ಕೆ ಕರೆದೊಯ್ಯಲಾಯಿತು. ನಂತರ ರಾತ್ರಿ ಅಲ್ಲೆ ಉಳಿದರು. ಗುರುವಾರ ಬೆಳಿಗ್ಗೆ 9.30ರ ಸಮಯದಲ್ಲಿ ಮಂಜುನಾಥ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಕಲೇಶಪುರದ ಅರಣ್ಯ ಇಲಾಖೆಯ ಡಿಸಿಎಫ್ ಅನುಪಮ, ಗಿರೀಶ್ ನಾಯಕ್, ಆರ್.ಎಫ್. ದಯಾನಂದ್, ಚಾಲಕ ಸುರೇಶ್, ತಾರ ಎಂಬುವರೆ ತಮ್ಮ ತಪ್ಪನ್ನು ಮಂಜುನಾಥ್ ಮೇಲೆ ಹೇರಲು ನನಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಾನೆ ಬರೆದ ಡೆತ್ ನೋಟ್ ನಲ್ಲಿ ಎಲ್ಲವನ್ನು ತಿಳಿಸಲಾಗಿದೆ.
ಕುಟುಂಬದವರು ನ್ಯಾಯಕ್ಕೆ ಆಗ್ರಹಿಸಿ ನಗರದ ಅರಣ್ಯಭವನದ ಮುಂದೆ ಗುರುವಾರ ರಾತ್ರಿಯಿಂದಲೇ ಮೃತನ ಶವವನ್ನು ಇಟ್ಟು ರಾತ್ರಿ-ಹಗಲು ಧರಣಿ ಮಾಡುತ್ತಿದ್ದಾರೆ. ತಪ್ಪಿತಸ್ತರಿಗೆ ಸೂಕ್ತ ಕ್ರಮಕೈಗೊಂಡು, ಪರಿಹಾರವಾಗಿ 50 ಲಕ್ಷ ರೂಗಳನ್ನು ನೀಡಬೇಕು. ಆಗೇ ಕುಟುಂಬದ ಓರ್ವರಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಬೇಕು ಎಂದು ಸ್ಥಳದಲ್ಲಿದ್ದ ರೈತ ಮುಖಂಡ ಸುರೇಶ್ ಬಾಬು, ಕನರ್ಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ಎಸ್. ನಿರ್ವಾಣಯ್ಯ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ. ಕಿರುಕುಳ ನೀಡಿ ನನ್ನ ಗಂಡ ಮಂಜುನಾಥ್ ಆತ್ಮಹತ್ಯೆಗೆ ಕಾರಣರಾದ ಡೆತ್ನೋಟ್ನಲ್ಲಿ ಬರೆದ ಅರಣ್ಯ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಿ ನ್ಯಾಯ ಒದಗಿಸಿ ಕೊಡುವಂತೆ ಅರಣ್ಯ ಭವನದ ಮುಂದೆ ತನ್ನ ಗಂಡನ ಶವವಿಟ್ಟು ಧರಣಿ ಮಾಡುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರೂ ಇದುವರೆಗೂ ಯಾವ ಅರಣ್ಯ ಅಧಿಕಾರಿ ಸ್ಥಳಕ್ಕೆ ಬಂದಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.