ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮದ ಕಾವೇರಿ ನದಿ ದಡದಲ್ಲಿ ಸುಮಾರು ಸಾವಿರ ವರ್ಷಗಳ ಹಿಂದಿನ ಕಲ್ಲು ವೃತ್ತ ಸಮಾಧಿಗಳು ಹಾಗೂ ಗ್ರಾನೈಟ್ ಕಲ್ಲಿನ ಮೇಲೆ ಕೊರೆದಿರುವ ಗೂಳಿಯಾಕಾರದ ಶಿಲ್ಪ ಪತ್ತೆಯಾಗಿದೆ.
ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕಆಳುವಾರ ಇತಿಹಾಸ ವಿಭಾಗದ ಉಪನ್ಯಾಸಕರಾದ ಹೆಚ್.ಆರ್.ಆರುಣ್ಕುಮಾರ್ ಹಾಗೂ ವಿದ್ಯಾರ್ಥಿಗಳಾದ ಮಮತಾ, ರಕ್ಷಿತಾ ಅವರ ಸಹಕಾರದೊಂದಿಗೆ ಕ್ಷೇತ್ರ ಕಾರ್ಯ ಶೋಧಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮ ಪಂಚಾಯಿತಿಯಿಂದ ಒಂದು ಕಿ.ಮೀ. ದೂರದಲ್ಲಿರುವ ಪಾಂಡವರ ಗುಡಿ ಗುಡ್ಡದ ಭೂಭಾಗದಲ್ಲಿ 65 ಅಡಿ (20 ಬೃಹತ್ ಗುಂಡುಗಳು) ಸುತ್ತಳತೆಯಿರುವ ಎರಡು ವೃತ್ತಗಳಿರುವ ಕಲ್ಲುವೃತ್ತ ಸಮಾಧಿ, ಪಕ್ಕದಲ್ಲೇ ಸುಮಾರು 30 ಅಡಿ ಎತ್ತರವಿರುವ ಗುಡ್ಡದ ಮೇಲೆ 44 ಅಡಿ (20 ಬೃಹತ್ ಗುಂಡುಗಳು) ಸುತ್ತಳತೆಯಿರುವ ಹಾಗೂ ಮಧ್ಯಭಾಗದಲ್ಲಿ ಚಿಕ್ಕ ಚಕ್ಕ ಕಲ್ಲುಗಳಿಂದ ತುಂಬಿದ ಸಮಾಧಿ ಹಾಗೆಯೇ 57 ಅಡಿ (25 ಬೃಹತ್ ಗುಂಡುಗಳು) ಸುತ್ತಳತೆಯಿರುವ ಸಮಾಧಿ ಹಾಗೂ ನೆಲೆಯಲ್ಲಿ ಕರ್ನಾಟಕದಲ್ಲೇ ಅಪರೂಪದ 85 ಅಡಿ (30 ಬೃಹತ್ ಗುಂಡುಗಳು) ಸುತ್ತಳತೆಯಿರುವ ಎರಡು ವೃತ್ತಗಳ ಸಮಾಧಿ ಶೋಧನೆ ವೇಳೆ ಕಂಡು ಬಂದಿದೆ.
ಈ ಸಮಾಧಿಗಳನ್ನು ಬೃಹತ್ ಗಾತ್ರದ ಗುಂಡುಗಳನ್ನು ಬಳಸಿ ಇಳಿಜಾರಾದ, ಗುಡ್ಡದ ಮೇಲೆ 85, 65, 57, 44 ಅಡಿ ವಿಸ್ತೀರ್ಣದ ಒಂದು, ಎರಡು ವೃತ್ತದ ಕಲ್ಲು ವೃತ್ತ ಸಮಾಧಿಗಳಿರುವುದು ಕನರ್ಾಟಕದ ಭೂಭಾಗದಲ್ಲಿ ಅಪರೂಪವವಂತೆ. ಈ ರೀತಿಯ ದೊಡ್ಡಮಟ್ಟದ ವಿಶಾಲವಾದ ಕಲ್ಲುವೃತ್ತ ಸಮಾಧಿಗಳು ಚಿತ್ರದುರ್ಗ ಜಿಲ್ಲೆ ಮರಡಿಹಳ್ಳಿ ಗುಡ್ಡದ ಇಳಿಜಾರಾದ ಪ್ರದೇಶದಲ್ಲಿ ನೂರಾರು ಪತ್ತೆಯಾಗಿದ್ದರೆ, ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಆಯಿರಳ್ಳಿ ನೆಲೆಯಲ್ಲಿ ಬೃಹದಾಕಾರದ ಸಮಾಧಿಗಳು ಶೋಧವಾಗಿವೆ. ಹಾಗೇಯೇ ಕನರ್ಾಟಕದ ಬಳ್ಳಾರಿ, ಆಂಧ್ರಪ್ರದೇಶದ ರಾಯದುರ್ಗ ಮತ್ತು ಅನಂತಪುರ ಪ್ರದೇಶಗಳಲ್ಲಿ ನೂರಾರು ಶಿಲಾಗೋರಿಗಳು ಪತ್ತೆಯಾಗಿವೆ. ಗ್ರಾನೈಟ್ ಕಲ್ಲಿನ ಮೇಲೆ ಕೊರೆದಿರುವ ಅಪರೂಪದ ಗೂಳಿಯಾಕಾರದ ಶಿಲ್ಪವಿದ್ದು, ನೈಸಗರ್ಿಕ ವಿಕೋಪಕ್ಕೆ ತುತ್ತಾಗಿ ವಿನಾಶದ ಅಂಚಿಗೆ ತಲುಪಿರುವುದನ್ನು ಕಾಣಬಹುದಾಗಿದೆ.