News Kannada
Saturday, November 26 2022

ಕರ್ನಾಟಕ

ಭಯ ಹುಟ್ಟಿಸುತ್ತಿರುವ ಕಾಡುಹಂದಿಗಳು! - 1 min read

Photo Credit :

ಭಯ ಹುಟ್ಟಿಸುತ್ತಿರುವ ಕಾಡುಹಂದಿಗಳು!

ಚಾಮರಾಜನಗರ: ಬಂಡೀಪುರ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆ, ಚಿರತೆ, ಹುಲಿಗಳ ಭಯದಲ್ಲಿ ಬದುಕುತ್ತಿದ್ದ ಗ್ರಾಮಸ್ಥರು ಇದೀಗ ಕಾಡು ಹಂದಿಗಳಿಗೆ ಹೆದರಿಕೊಂಡು ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ನಡುವೆ ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ ಗ್ರಾಮದ ರಾಜಪ್ಪ(70) ಎಂಬುವರ ಮೇಲೆ ದಾಳಿ ಮಾಡಿದ ಕಾಡು ಹಂದಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಪ್ಪ ಅವರು ಎಂದಿನಂತೆ ಸಂಜೆ ವೇಳೆಯಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಏಕಾಏಕಿ ಕಾಡುಹಂದಿ ದಾಳಿ ಮಾಡಿದ್ದು ಪರಿಣಾಮ ಕಾಲು ಮತ್ತು ಮುಖಕ್ಕೆ ತೀವ್ರ ಗಾಯವಾಗಿದೆ. ಸದ್ಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯಿಂದ ಗ್ರಾಮದಲ್ಲಿ ಭಯ ಆರಂಭವಾಗಿದೆ. ತಮ್ಮ ಜಮೀನಿಗೆ ತೆರಳಿ ಕೆಲಸ ಮಾಡಲು ರೈತರು ಹೆದರುತ್ತಿದ್ದಾರೆ. ಯಾವಾಗ ಕಾಡು ಹಂದಿಗಳು ದಾಳಿ ಮಾಡಿ ಬಿಡುತ್ತವೆಯೋ ಎಂಬ ಆತಂಕ ಕಾಡತೊಡಗಿದೆ. ಅರಣ್ಯದಲ್ಲಿ ಗೆಡ್ಡೆಗೆಣಸು, ಇನ್ನಿತರ ಆಹಾರ ತಿಂದು ಬದುಕುವ ಹಂದಿಗಳು ಫಸಲು ಹುಡುಕಿಕೊಂಡು ನಾಡಿನತ್ತ ಬರಲು ಆರಂಭಿಸಿದ್ದು, ರೈತರ ಭಯವಿಲ್ಲದೆ ಅವರ ಮೇಲೆಯೇ ದಾಳಿ ಮಾಡುತ್ತಿದ್ದು, ಭಯದ ವಾತಾವರಣ ನಿರ್ಮಾಣ ಮಾಡಿವೆ. ಕೂಡಲೇ ಅರಣ್ಯ ಇಲಾಖೆ ಕಾಡುಹಂದಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾಗಿದೆ ಎಂಬುದು ರೈತರ ಆಗ್ರಹವಾಗಿದೆ
ಈಗಾಗಲೇ ಚಾಮರಾಜನಗರದಲ್ಲಿ ಹಲವು ಮಂದಿ ಕಾಡುಹಂದಿಗಳ ದಾಳಿಗೊಳಗಾಗಿ ಆಸ್ಪತ್ರೆಗೆ ಸೇರಿದ್ದರೆ, ಕೆಲವರು ಸಾವನ್ನಪ್ಪಿದ್ದಾರೆ. ಜಮೀನುಗಳಲ್ಲಿ ಕೆಲಸ ಮಾಡುವವರ ಹಾಗೂ ಕುರಿ, ದನಗಳನ್ನು ಮೇಯಿಸುವವರ ಮೇಲೆ ದಾಳಿ ಮಾಡುವ ಕಾಡು ಹಂದಿಗಳು ಅವರ ಸಾವಿಗೂ ಕಾರಣವಾಗುತ್ತಿವೆ.
ಮೊದಲೆಲ್ಲ ರಾತ್ರಿ ವೇಳೆಯಲ್ಲಿ ಜಮೀನಿಗೆ ನುಗ್ಗಿ ಫಸಲು ಹಾಳು ಮಾಡುತ್ತಿದ್ದ ಕಾಡುಹಂದಿಗಳು ಇದೀಗ ರಾಜಾರೋಷವಾಗಿ ಹಗಲು ಹೊತ್ತಿನಲ್ಲೇ ಜಮೀನಿಗೆ ನಗ್ಗುತ್ತಿರುವುದಲ್ಲದೆ, ಅವುಗಳನ್ನು ಓಡಿಸಲು ಹೋದರೆ ರೈತರ ಮೇಲೆಯೇ ದಾಳಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

See also  ಅತ್ತಿಗೆರೆಯಲ್ಲಿ 14ನೇ ಶತಮಾನದ ತಾಮ್ರ ಶಾಸನ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು