News Kannada
Wednesday, November 30 2022

ಕರ್ನಾಟಕ

ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ಮಿನಿಬಸ್ ಸೇವೆ! - 1 min read

Photo Credit :

ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ಮಿನಿಬಸ್ ಸೇವೆ!

ಗುಂಡ್ಲುಪೇಟೆ: ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೂ ಇಲ್ಲಿಗೆ ತೆರಳಲು ಸಾರಿಗೆ ವ್ಯವಸ್ಥೆಯದ್ದೇ ಸಮಸ್ಯೆಯಾಗಿತ್ತು. ಆದರೆ ಇದೀಗ ಸಾರಿಗೆ ಸಂಸ್ಥೆ ಮಿನಿ ಬಸ್ ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಿದೆ. ಈಗಾಗಲೇ ಸೇವೆ ಆರಂಭವಾಗಿದ್ದು, ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು ನೆಮ್ಮದಿಯಾಗಿ ತೆರಳಬಹುದಾಗಿದೆ. ಈ ಹಿಂದೆ ಕೆಎಸ್ಆರ್ಟಿಸಿಯ ಮಾಮೂಲಿ ಬಸ್ಗಳು ಇಲ್ಲಿಗೆ ಸಂಚರಿಸುತ್ತಿದ್ದವಾದರೂ ತಿರುವು ಮತ್ತು ಕಡಿದಾದ ರಸ್ತೆಯಾಗಿರುವ ಕಾರಣ ಬಸ್ನ್ನು ಚಾಲನೆ ಮಾಡುವುದು ಚಾಲಕರಿಗೆ ಸವಾಲ್ ಆಗಿತ್ತು. ಬಹಳಷ್ಟು ಸಾರಿ ಚಾಲಕನ ನಿಯಂತ್ರಣ ತಪ್ಪಿ ಅವಘಡಗಳು ಸಂಭವಿಸಿದ್ದವು.

ಇದನ್ನು ಮನಗಂಡು ಇದೀಗ ಸಾರಿಗೆ ಸಂಸ್ಥೆಯು ಮಿನಿಬಸ್ಗಳ ವ್ಯವಸ್ಥೆಯನ್ನು ಮಾಡಿದ್ದು ಪ್ರವಾಸಿಗರು ನೆಮ್ಮದಿಯುಸಿರು ಬಿಡುವಂತಾಗಿದೆ. ಬಂಡೀಪುರ ಹುಲಿಯೋಜನೆಯ ಪರಿಸರ ಸೂಕ್ಷ್ಮವಲಯದಲ್ಲಿರುವ ಕಾರಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವಾಸಿಗರು ಸರ್ಕಾರಿ ಬಸ್ಸನ್ನೇ ಅವಲಂಭಿಸಬೇಕಾಗಿದೆ. ಇನ್ನು ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಸಾಮಾನ್ಯ ಸಾರಿಗೆ ಬಸ್ಸುಗಳು ಕಿರಿದಾದ ರಸ್ತೆಯಲ್ಲಿ ಬೆಟ್ಟವನ್ನೇರಲು ಪ್ರಯಾಸಪಡುತ್ತವೆ. ಚಾಲಕರು ಸ್ವಲ್ಪ ನಿಯಂತ್ರಣ ತಪ್ಪಿದರೂ ಅನಾಹುತ ತಪ್ಪಿದಲ್ಲ. ಇಲ್ಲಿ ಆಗುತ್ತಿದ್ದ ಸಮಸ್ಯೆಳ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದವಲ್ಲದೆ, ಸಂಚಾರಕ್ಕೆ ಅನುಕೂಲವಾಗುವಂತೆ ಮಿನಿಬಸ್ಗಳ ಸೇವೆ ಕಲ್ಪಿಸುವಂತೆ ಮನವಿಗಳು ಕೂಡ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯು ಈ ಮಾರ್ಗದಲ್ಲಿ ಸಂಚರಿಸಲು ಮಂಡ್ಯ ಸಾರಿಗೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ 5 ಬಸ್ಸುಗಳನ್ನು ಒದಗಿಸಿದ್ದು ಅವು ಈಗ ಸಂಚರಿಸುತ್ತಿವೆ.

ಸಾಮಾನ್ಯ ದಿನಗಳಲ್ಲಿ 2, ರಜೆ ಹಾಗೂ ಪ್ರಯಾಣಿಕರು ಹೆಚ್ಚಾಗಿರುವ ದಿನಗಳಲ್ಲಿ 5 ಬಸ್ಸುಗಳು ಸಂಚಾರ ಮಾಡುತ್ತಿವೆ. ಬಂಡೀಪುರಕ್ಕೆ ತೆರಳುವ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಇಂಗಿತ ವ್ಯಕ್ತಪಡಿಸುತ್ತಾರೆ. ಬೆಟ್ಟವು ನಾಸ್ತಿಕ ಆಸ್ತಿಕರೆನ್ನದೆ ಎಲ್ಲರನ್ನು ತನ್ನತ್ತ ಸೆಳೆಯು ಕಾರಣ ಪ್ರವಾಸಿಗರು ಇತ್ತ ಆಗಾಗ್ಗೆ ತೆರಳುತ್ತಿರುತ್ತಾರೆ.
ಸಾರಿಗೆ ಸಂಸ್ಥೆ ಮಿನಿ ಬಸ್ಗಳನ್ನು ಸಂಚಾರಕ್ಕೆ ಒದಗಿಸಿ ಅನುಕೂಲ ಮಾಡಿಕೊಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಕಡಿದಾದ ಏರು, ಇಳಿ ಜಾರು ರಸ್ತೆಯಲ್ಲಿ ಬೃಹತ್ ಬಸ್ಗಳು ತೆರಳುವುದು ಕಷ್ಟವೇ. ಈ ಹಿಂದೆ ಮಾಮೂಲಿ ಬಸ್ಗಳೇ ಇಲ್ಲಿಗೆ ತೆರಳುತ್ತಿದ್ದವು. ಕಳೆದ ಕೆಲವು ತಿಂಗಳ ಹಿಂದೆ ಮೇಲಿಂದ ಮೇಲೆ ಇಲ್ಲಿ ಅವಘಡಗಳು ಸಂಭವಿಸಿದ ಕಾರಣ ಬಸ್ನಲ್ಲಿ ತೆರಳಲು ಜನರು ಭಯ ಪಡುವಂತಾಗಿತ್ತು

See also  ಬಂಡೀಪುರ ವ್ಯಾಪ್ತಿಯಲ್ಲಿ ತಮಿಳುನಾಡಿನ ಪುಂಡಾನೆಯ ದಾಂಧಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು