News Kannada
Sunday, November 27 2022

ಕರ್ನಾಟಕ

ಚಾಮರಾಜನಗರದಲ್ಲಿ ಆಕರ್ಷಿಸಿದ ಕೆಸರುಗದ್ದೆ ಓಟ - 1 min read

Photo Credit :

ಚಾಮರಾಜನಗರದಲ್ಲಿ ಆಕರ್ಷಿಸಿದ ಕೆಸರುಗದ್ದೆ ಓಟ

ಚಾಮರಾಜನಗರ: ಕೇವಲ ಮಲೆನಾಡು, ಕರಾವಳಿಯಲ್ಲಿ ನಡೆಯುತ್ತಿದ್ದ ಕೆಸರುಗದ್ದೆ ಕ್ರೀಡಾಕೂಟ ಈಗ ಬಯಲು ಸೀಮೆಗೂ ಆವರಿಸಿದ್ದು, ಚಾಮರಾಜನಗರದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟ ಕ್ರೀಡಾಪ್ರೇಮಿಗಳ ಮನಸೊರೆಗೊಂಡಿತು. ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ- ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಚನ್ನಿಪುರದಮೋಳೆ, ಮೂಡ್ಲುಮೋಳೆ, ಜಾಲಹಳ್ಳಿಹುಂಡಿ ಆನಂದ್ ಸಿದ್ದಶೆಟ್ಟಿ ಜಮೀನಿನಲ್ಲಿ ಏರ್ಪಡಿಸಿದ್ದ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಕಬ್ಬಡ್ಡಿ ಪಂದ್ಯಾವಳಿ, ಕಪ್ಪೆಕುಪ್ಪಳಿಸುವಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಗಮನಸೆಳೆದರು.

ಕ್ರೀಡಾಕೂಟಕ್ಕೂ ಮುನ್ನ ಕೆಸರುಗದ್ದೆಯಲ್ಲಿ ಭೂಮಿ ಪೂಜೇ ಶ್ರೀಕೃಷ್ಣಪೂಜೆ ಆರತಿ, ಅಷ್ಟೋತ್ತರ ಪರಾಯಣ ಹರೇಕೃಷ್ಣ ಮಂತ್ರ ಜಪ ನಡೆಯಿತು ಬಳಿಕ ಕ್ರೀಡಾಕೂಟಕ್ಕೆ ಬಾವುಟ ಬೀಸುವ ಮೂಲಕ ಬಿ.ಎಸ್ವಿ ವೆಂಕಟನಾಗಪ್ಪಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಶ್ರೀಕೃಷ್ಣ ಪ್ರತಿಷ್ಠಾನ ನೂತನ ರೀತಿಯಲ್ಲಿ ಕ್ರೀಡೆ, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಿದೆ. ಕ್ರೀಡೆಯಿಂದ ಯುವಕರಲ್ಲಿ ಸ್ಪೂರ್ತಿ, ನವಚೈತನ್ಯ, ಏಕತೆ, ರಾಷ್ಟ್ರೀಯತೆಯ ಭಾವನೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಶ್ರೀಕೃಷ್ಣ ಪ್ರತಿಷ್ಠಾನ ಅಧ್ಯಕ್ಷರಾದ ಸುರೇಶ್,ಎನ್ ಋಗ್ವೇದಿ ಮಾತನಾಡಿ ಯುವಕರಿಗೆ ಧಾರ್ಮಿಕ ಶಕ್ತಿಯನ್ನು ತುಂಬಬೇಕು ಕ್ರೀಡೆ, ಕಲೆ ಸ್ಪರ್ಧೆಗಳ ಮೂಲಕ ದೇಶಿಯ ರೂಢಿ ಸಂಪ್ರಾದಯ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಜವಬ್ದಾರಿ. ಕೆಸರುಗದ್ದೆ ಓಟದಿಂದ ಉತ್ತಮ ಆರೋಗ್ಯ, ದೇಹ ದೃಢತೆ ಶಿಸ್ತು, ಶಕ್ತಿ ಧೈರ್ಯ ಮತ್ತು ಸನ್ಮಾರ್ಗದ ಗುಣಗಳು ಬೆಳೆಯುತ್ತದೆ ಎಂದರು.ಇದೇ ವೇಳೆ ಕೃಷ್ಣ ಪ್ರತಿಷ್ಠಾನ ವತಿಯಿಂದ ಚೆನ್ನಿಪುರರಮೋಳೆ ಮೂಡ್ಲುಮೋಳೆಯ ಸಿದ್ದಶೆಟ್ಟಿ, ಮಹದೇವಶೆಟ್ಟಿ ಚಂದ್ರಶೇಕರ, ರಾಜಪ್ಪ, ಆನಂದ್ ಸನ್ಮಾನಿಸಿ ಗೌರವಿಸಲಾಯಿತು.

See also  ಉರುಸ್ ಸಮಿತಿ ಕಚೇರಿ ಮುಚ್ಚಲು ಯತ್ನಿಸಿದ ನಾಲ್ವರು ಸಂಘ ಪರಿವಾರ ಕಾರ್ಯಕರ್ತರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು