News Kannada
Tuesday, December 06 2022

ಕರ್ನಾಟಕ

ಮುಳ್ಳಯ್ಯನಗಿರಿ ಶೋಲಾ ಕಾಡು ಒತ್ತುವರಿ- ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

Photo Credit :

ಮುಳ್ಳಯ್ಯನಗಿರಿ ಶೋಲಾ ಕಾಡು ಒತ್ತುವರಿ- ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಕಂಡುಬರುವ ಶೋಲಾ ಅರಣ್ಯಗಳು ಇತ್ತೀಚೆಗೆ ಅಕ್ರಮ ಒತ್ತುವರಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮೌನವಹಿಸಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಿರೇಕೊಳಲೇ, ಚಿಕ್ಕೋಳಲೇ, ಕಬ್ಬಿನಳ್ಳಿ, ಚನ್ನಗೊಂಡನಹಳ್ಳಿ ಮತ್ತು ಮುಳ್ಳಯ್ಯನಗಿರಿ ತಪ್ಪಲಿನ ಗ್ರಾಮಸ್ಥರು ಮತ್ತು ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಒಕ್ಕಲುಗಳ ಭಕ್ತಾದಿಗಳು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಅರಣ್ಯ ಒತ್ತುವರಿ ಮೂಲಕ ಹೊಸದಾಗಿ ತೋಟಗಳನ್ನು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಹಿರೇಕೊಳಲೆ ಗ್ರಾಮದ ಸ.ರ್ವೆ ನಂ. 33, 476 475 ಅಕ್ರಮವಾಗಿ ಶೋಲಾ ಕಾಡನ್ನು ಕಡಿದುಹಾಕಿ ಔಷಧಿ ಸಸ್ಯಗಳನ್ನು ಮತ್ತು ಅಲ್ಲಿನ ಅರಣ್ಯ ಸಂಕೀರ್ಣತೆಯನ್ನು ಸಂಪೂರ್ಣವಾಗಿ ನಾಶಮಾಡಿ ಕಾಫಿ ತೋಟ ಮಾಡುತ್ತ ಕಾಫಿ ಗಿಡಗಳನ್ನು ಮತ್ತು ಹಾಲುವಾಣ, ಸಿಲ್ವರ್ ಗಿಡಗಳನ್ನು ನೆಡಲಾಗುತ್ತಿದೆ. ಕಳೆದ ಒಂದು ವಾರದಿಂದ ನೂರಾರು ಎಕ್ಕರೆ ಶೋಲಾ ಅರಣ್ಯವನ್ನೆಲ್ಲ ತೆರವುಗೊಳಿಸುತ್ತ ನಾಶಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಗೌರಿಹಳ್ಳ, ಯಗಚಿ, ಹಿರೇಕೊಳಲೆ ಜಲಮೂಲ ಹೀಗೆ ಅನೇಕ ನೀರಿನ ಮೂಲಗಳು ಇಲ್ಲಿನ ಶೋಲಾ ಅರಣ್ಯದಲ್ಲಿ ಹುಟ್ಟುತ್ತವೆ. ಸಾವಿರಾರು ಎಕ್ಕರೆ ಕೃಷಿಭೂಮಿಗೆ ನೀರು ಒದಗಿಸುತ್ತಿವೆ. ಹಿರೇಕೊಳಲೆ ಮತ್ತು ರಾಮೇಶ್ವರ ಕೆರೆಗಳಿಗೂ ಕೂಡ ಈ ಶೋಲಾ ಕಾಡುಗಳು ಮುಖಾಂತರವೇ ನೀರು ಹರಿದುಬರುವುದು. ಈಗ ಒತ್ತುವರಿ ಮತ್ತು ನಾಶವಾಗುತ್ತಿರುವ ಕಾಡಿನ ನೀರಿನ ತೊರೆ ಹಿರೇಕೊಳಲೆ ಕೆರೆಗೆ ಮೂಲವಾಗಿದೆ. ಭವಿಷ್ಯದಲ್ಲಿ ಕೆಳಭಾಗದ ಗ್ರಾಮಗಳಿಗೆ ನೀರಿನ ಅಭಾವ ಉಂಟಾಗುವುದು ಖಚಿತ ಎಂದಿದ್ದಾರೆ.

ಸಧ್ಯ ನಡೆಯುತ್ತಿರುವ ಒತ್ತುವರಿ ವಿರುದ್ದ ಕಾನೂನು ಕ್ರಮ ಕೈಗೊಂಡು ನೀರಿನ ಮೂಲವಾದ ಮುಳ್ಳಯ್ಯನಗಿರಿ ಶ್ರೇಣಿಯ ಶೋಲಾ ಮತ್ತು ಹುಲ್ಲುಗಾವಲನ್ನು ರಕ್ಷಿಸಬೇಕು. ಪ್ರಭಾವಿಗಳಿಗೆ ಅಕ್ರಮವಾಗಿ ಬಗರ್ಹುಕುಂ ಹೆಸರಿನಲ್ಲಿ ಶೋಲಾ ಅರಣ್ಯ ಸೇರಿದಂತೆ ಅಮೂಲ್ಯ ಹುಲ್ಲುಗಾವಲನ್ನು ಮಂಜೂರಾತಿ ಮಾಡುವುದನ್ನು ಜಿಲ್ಲಾಢಳಿತ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಅಕ್ರಮ ಭೂ ಮಂಜೂರಾತಿ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಮುಳ್ಳೆಗೌಡ ಕಬ್ಬಿನಳ್ಳಿ, ಸೀತಾಳ್ ಮಲ್ಲಿಕಾರ್ಜುನ್, ಚಂದ್ರೇಗೌಡ ಚಿಕ್ಕೋಳಲೇ, ಸಚಿನ್ ಬಿ.ಕೆ ಹೇಳಿಕೆಯಲ್ಲಿ ಎಚ್ಚರಿಸಿದ್ಧಾರೆ.

 

See also  ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ: ಸಚಿವ ಎನ್. ಮಹೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು