News Kannada
Tuesday, December 06 2022

ಕರ್ನಾಟಕ

ತೆಂಗಿನ ಮರಕ್ಕಿಂತಲೂ ಎತ್ತರ ಈ ಸೇತುವೆ, ಎಲ್ಲಿದೇ ಗೊತ್ತಾ?

Photo Credit :

ತೆಂಗಿನ ಮರಕ್ಕಿಂತಲೂ ಎತ್ತರ ಈ ಸೇತುವೆ, ಎಲ್ಲಿದೇ ಗೊತ್ತಾ?

ಕಾಸರಗೋಡು: ಹರಿಯುವ ಹೊಳೆಯ ಮೇಲೆ ಇಷ್ಟೊಂದು ಎತ್ತರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಆರೋಗ್ಯ ಮಾತ್ರ ಸಾಲದು, ಧೈರ್ಯ ಕೂಡಾ ಬೇಕು. ಅದಿಲ್ಲದ ಕಾರಣ ಬಂಗಾಳದಿಂದ ತಲುಪಿದ ಇಪ್ಪತ್ತೈದಕ್ಕೂ ಮಿಕ್ಕಿ ಕಾರ್ಮಿಕರು ನೌಕರಿ ಉಪೇಕ್ಷಿಸಿ ತೆರಳಿದ್ದರು.

ಪಿಲ್ಲರ್ನ ಮೇಲಕ್ಕೆ ಏರಿದ ಹಲವರಿಗೆ ಕೆಳಗೆ ಹರಿಯುವ ಹೊಳೆ ನೋಡಿದಾಗ ತಲೆತಿರುಗಲಾರಂಭಿಸಿತು. ಕೊನೆಗೆ ಗುತ್ತಿಗೆದಾರ ಕಾರ್ಮಿಕರಿಗೆ ಇನ್ಶೂರೆನ್ಸ್, ಹೆಲ್ಮೆಟ್, ಬೆಲ್ಟ್ ಮೊದಲಾದ ಸುರಕ್ಷಾ ಉಪಕರಣಗಳನ್ನು ಖಾತ್ರಿಪಡಿಸಿದ ಬಳಿಕ ಸ್ಥಗಿತಗೊಂಡಿದ್ದ ಸೇತುವೆ ನಿರ್ಮಾಣ ಪುನರಾರಂಭಗೊಂಡಿತು.ರಾಜ್ಯದ ಅತೀ ಎತ್ತರ ದ ಸೇತುವೆಗಳಲ್ಲಿ ಒಂದಾದ ಪುಲ್ಲೂರು-ಪೆರಿಯ ಪಂಚಾಯತಿನ ಆಯಂಕ್ಕಡವ್ ಸೇತುವೆ ವಿಶೇಷವಾಗಿದೆ. ಪುಲ್ಲೂರು-ಪೆರಿಯ, ಬೇಡಡ್ಕ ಪಂಚಾಯತಿಗಳನ್ನು ಜೋಡಿಸುವ ವಾವಡ್ಕ ಹೊಳೆ ಗೆ ಅತೀ ಎತ್ತರದಲ್ಲಿ ನಿಮರ್ಿಸುವ ಸೇತುವೆಯ ಕಾಮಗಾರಿ ಪ್ರಗತಿ ಹಂತದಲ್ಲಿದೆ.

120 ಮೀಟರ್ ಉದ್ದದ ಸೇತುವೆಯ ಎತ್ತರ ತಳಮಟ್ಟದಿಂದ 24 ಮೀಟರ್ ಆಗಿದೆ. ಹೊಳೆಬದಿಗಳಲ್ಲಿರುವ ತೆಂಗಿನಮರಗಳಿಗಿಂತ ಸೇತುವೆಯು ಎತ್ತರವಾಗಿದೆ. ಸೇತುವೆಯ ನಾಲ್ಕು ಸ್ಪೋನ್ಗಳಿಗೆ 9.8ಮೀಟರ್ ಅಗಲವಿದೆ. ಇತರ ಸೇತುವೆಗಳಿಗಿಂತ ವಿಭಿನ್ನವಾಗಿ ಸೇತುವೆಯ ಪೈಲ್ಕ್ಯಾಪ್ 15ಮೀಟರ್ ಎತ್ತರದಲ್ಲಿದೆ.
23 ಮೀಟರ್ ಎತ್ತರದಲ್ಲಿ ಪಿಯರ್ ಕ್ಯಾಪ್ ಇದೆ. ಕೊಚ್ಚಿಯ ಪ್ರೊ. ಅರವಿಂದನ್ ಅವರು ಲೋಕೋಪಯೋಗಿ ಇಲಾಖೆಗಾಗಿ ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಸೇತುವೆಯ ವಿನ್ಯಾಸ ಮಾಡಿದ್ದಾರೆ. ಜೋಯಿಂಟ್ ಗಳಿಲ್ಲದ ಸೇತುವೆ ಇದಾಗಿದೆ. ಆದುದರಿಂದ ಸೇತುವೆಯಿಂದ ಮೇಲಕ್ಕೆ ವಾಹನಗಳು ಹಾದು ಹೋಗುವಾಗ ಸಣ್ಣ ಅಲುಗಾಡುವಿಕೆಯೂ ಅನುಭವಕ್ಕೆ ಬರಲಾರದು. ಬೇಡಡ್ಕ ಪಂಚಾಯತಿನ ಪೆರ್ಲಡ್ಕವನ್ನು ಸುಲಭದಲ್ಲಿ ಆಯಂಪಾರೆ-ಪೆರಿಯ ರಸ್ತೆಗೆ ಜೋಡಿಸುವರಸ್ತೆಯಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಅಪ್ರೋಚ್ ರಸ್ತೆಯ ನಿರ್ಮಾಣದೊಂದಿಗೆ ಪೆರಿಯ-ಆಯಂಪಾರೆ ರಸ್ತೆ ಅಭಿವೃದ್ಧಿ, ಕೊಳತ್ತೂರಿಗಿರುವ ಎರಡೂವರೆ ಕಿಲೋಮೀಟರ್ ರಸ್ತೆಯ ನವೀಕರಣ ಯೋಜನೆಯ ಅಂಗವಾಗಿ ನಡೆಯಲಿದೆ.

18ಕೋಟಿ ರೂ. ನಿರ್ಮಾಣ ವೆಚ್ಚ ತಗಲುವ ಸೇತುವೆಯ ಕಾಮಗಾರಿಯನ್ನು ಫೆಬ್ರವರಿಯಲ್ಲಿ ಆರಂಭಿಸಲಾಗಿತ್ತು. ಲೋಕೋಪಯೋಗಿ ಗುತ್ತಿಗೆದಾರನಾದ ಚಟ್ಟಂಚಾಲ್ನ ಟಿ. ಎ. ಅಬ್ದುಲ್ ರಹ್ಮಾನ್ ಅವರ ಜಾಸ್ಮಿನ್ ಕನ್ಸ್ಟ್ರಕ್ಷನ್ ಕಂಪೆನಿ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ.
ಅಕ್ಟೋಬರ್ನಲ್ಲಿ ನಿರ್ಮಾಣ ಪೂರ್ತಿಗೊಳಿಸಲು ಉದ್ದೇಶಿಸಲಾಗಿತ್ತಾದರೂ ನಿರ್ಮಾಣ ಕಾಮಗಾರಿಗಳಿಗೆ ಮಳೆ ಪ್ರತಿಕೂಲವಾಗಿ ಬಾಸಿದೆ. ಇಷ್ಟೊಂದು ಎತ್ತರದಲ್ಲಿ ನಿರ್ಮಾಣ ಸಾಮಾಗ್ರಿಗಳನ್ನು ತಲುಪಿಸಬೇಕಾಗಿರುವುದರಿಂದ ಕಾಮಗಾರಿ ಶೀಘ್ರ ಪೂರ್ತಿಗೊಳಿಸಲು ತೊಂದರೆಯಾಗುತ್ತಿದೆ ಎಂದು ಅಕಾರಿಗಳು ಹೇಳುತ್ತಿದ್ದಾರೆ.

See also  ಮೂಲ ಸೌಲಭ್ಯ ವಂಚಿತ ಗೋವಿಂದನಹಳ್ಳಿ ಪಂಚಕೂಟ ದೇಗುಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು