News Kannada
Friday, October 07 2022

ಕರ್ನಾಟಕ

ಓಣಂನಲ್ಲಿ ಅತಿಥಿಯಾಗಿ ಬಂದರೂ ವಾನರರೂ..ಅನ್ನ, ಹಣ್ಣು, ಸಿಹಿ ತಿಂದು ಸಂಭ್ರಮಿಸಿದರು - 1 min read

Photo Credit :

ಓಣಂನಲ್ಲಿ ಅತಿಥಿಯಾಗಿ ಬಂದರೂ ವಾನರರೂ..ಅನ್ನ, ಹಣ್ಣು, ಸಿಹಿ ತಿಂದು ಸಂಭ್ರಮಿಸಿದರು

ಕಾಸರಗೋಡು: ಓಣಂ ಹಬ್ಬದ ಸವಿಯೂಟ ಮಾನವರಿಗೆ ಮಾತ್ರವಲ್ಲ ವಾನರರಿಗೂ ಭೋಜನ ವ್ಯವಸ್ಥೆ ಕಲ್ಪಿಸುವ ಮೂಲಕ ಕಾಸರಗೋಡು ತ್ರಿಕ್ಕರಿಪುರ ಇಡಯಿಲ್ ಕ್ಕಾಡ್ ನ ಸಂಘ ಈ ಬಾರಿಯೂ ಓಣಂ ಸದ್ಯ ಆಯೋಜಿಸುವ ಮೂಲಕ ಗಮನ ಸೆಳೆಯಿತು. ಹೊಟ್ಟೆ ತುಂಬಿಸಿಕೊಂಡ ವಾನರರು ಸಂತಸಪಟ್ಟವು.

ಇಡಯಿಲ್ ಕ್ಕಾಡ್ ನವೋದಯ ವಾಚನಾಲಯ ಮತ್ತು ಗ್ರಂಥಾಲಯ ಅಧೀನತೆಯ ಬಾಲವೇದಿ ಕಾರ್ಯಕರ್ತರು ವಾನರಿಗೆ ಈ ಭೋಜನ ಆಯೋಜಿಸಿದ್ದರು. ಓಣಂ ಹಬ್ಬದ ಹಿನ್ನಲೆಯಲ್ಲಿ ಕೋತಿಗಳಿಗೆ ಈ ವೈಶಿಷ್ಟ ಔತಣ ವ್ಯವಸ್ಥೆ ಮಾಡಲಾಗಿತ್ತು. ಸೌಲಭ್ಯಕ್ಕೂ ಕೊರತೆ ಇರಲಿಲ್ಲ. ಮೇಜು, ಬೆಂಚಿನ ವ್ಯವಸ್ಥೆ, ಬಾಳೆಲೆ ಹಾಕಿ ಅನ್ನ, ಹಣ್ಣು ಹಂಪಲು ಬಡಿಸಲಾಯಿತು. ಕ್ಯಾರೆಟ್, ಮುಳ್ಳು ಸೌತೆ, ಟೊಮೆಟೊ, ಕಬ್ಬು, ಕಲ್ಲಂಗಡಿ, ಪೇರಳೆ, ಪಪ್ಪಾಯ ಹೀಗೆ 25 ರಷ್ಟು ಬಗೆಯ ಆಹಾರ ಖಾದ್ಯಗಳು, ಜೊತೆಗೆ ಕುಡಿಯಲು ಗ್ಲಾಸಿನಲ್ಲಿ ನೀರು ಕೂಡಾ ಸಜ್ಜುಗೊಳಿಸಲಾಗಿತ್ತು. ಆದರೆ ಎಲ್ಲಾ ಆಹಾರ ವಸ್ತುಗಳು ಉಪ್ಪು ರಹಿತವಾಗಿತ್ತು.

ಮಕ್ಕಳು ಬಾಳೆಲೆಯಲ್ಲಿ ಬಡಿಸಿದ ಕೂಡಲೇ ವಾನರಿಗೆ ದಿನಂಪ್ರತಿ ಆಹಾರ ನೀಡುತ್ತಿರುವ ಪರಿಸರದ ಮಾಣಿಕ್ಯ ಎಂಬ ಮಹಿಳೆ ಪಪ್ಪಿ ಎಂದು ಕರೆಯುತ್ತಿದ್ದಂತೆ ಮರದ ರೆಂಬೆಗಳಿಂದ ಧಾವಿಸಿ ಬಂದ ವಾನರು ಸಿಕ್ಕಿದ್ದು ಲಾಭವೆಂಬಂತೆ ಆಹಾರ ಸೇವಿಸಿ ಖುಷಿ ಪಟ್ಟುಕೊಂಡರು. ನೂರಾರು ಮಂದಿ ಸ್ಥಳಕ್ಕೆ ತಲುಪಿದ್ದರು. ಮೊದಲು ಮಂಗಗಳು ಬರಲು ಹಿಂದೆ ಸರಿದರೂ ಬಳಿಕ ಒಂದೊಂದಾಗಿ ಮಂಗಗಳು ಬಂದು ಆಹಾರ ಭಕ್ಷಿಸಿದವು . ಓಣಂ ಸವಿಯೂಟವನ್ನು ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಸೇವಿಸುವ ಮೂಲಕ ಸಂಭ್ರಮಿಸಿದವು.

ಜಿಲ್ಲಾ ಪಂಚಾಯತ್ ಸದಸ್ಯೆ ಪಿ .ಸಿ ಸುಬೈದಾ, ವಿ .ಕೆ ಕರುಣಾಕರನ್ , ಪಿ . ವಿ ಪ್ರಭಾಕರನ್, ಪಿ. ವೇಣುಗೋಪಾಲ್ , ಬಾಬು ಮೊದಲಾದವು ಉಪಸ್ಥಿತರಿದ್ದರು

 

See also  ರೈತರ ಸಾಲದ ಮಾಹಿತಿ ವಾರದೊಳಗೆ ಸಲ್ಲಿಸಿ: ಡಿಸಿ ಕೆ.ಎ. ದಯಾನಂದ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು