News Kannada
Thursday, September 29 2022

ಕರ್ನಾಟಕ

ಜೀವದ ಹಂಗನ್ನು ಬಿಟ್ಟು ಪ್ರಾಣಿಗಳನ್ನು ರಕ್ಷಿಸುತ್ತಾರೆ ಈ ಗೆಳೆಯರು… - 1 min read

Photo Credit :

ಜೀವದ ಹಂಗನ್ನು ಬಿಟ್ಟು ಪ್ರಾಣಿಗಳನ್ನು ರಕ್ಷಿಸುತ್ತಾರೆ ಈ ಗೆಳೆಯರು...

ಕಾರವಾರ:ನಾಡಿನತ್ತ ಬಂದು ಅಪಾಯಕ್ಕೆ ಸಿಲುಕುವ ಕಾಡುಪ್ರಾಣಿಗಳನ್ನು ರಕ್ಷಣೆ ಮಾಡಿ ಉಪಚರಿಸಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡುವ ಜೊತೆಗೆ ಜನರಲ್ಲಿ ಪ್ರಾಣಿಗಳ ಮಹತ್ವವನ್ನು ಅರಿತು ಮೂಡಿಸುವ ಕೆಲಸವನ್ನು ಸಮಾನ ಮನಸ್ಕರು ಸ್ವಯಂ ಸೇವಾ ಸಂಸ್ಥೆಯೊಂದು ಸದ್ದಿಲ್ಲದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯಂಥ ಪ್ರದೇಶಗಳನ್ನು ಹೊಂದಿರುವ ಜಿಲ್ಲೆಯಲ್ಲಿ ದಟ್ಟಾರಣ್ಯಗಳಿದ್ದು ಇವುಗಳಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳು ನೆಲೆಯೂರಿವೆ. ಇಂಥ ಪರಿಸ್ಥಿತಿಯಲ್ಲಿ ನಾಡಿನತ್ತ ಬಂದು ಅಪಾಯಕ್ಕೆ ಸಿಲುಕುವ ಪ್ರಾಣಿ ಸಂಕುಲಗಳ ರಕ್ಷಣೆಗಾಗಿಯೇ ಪ್ರಾಣಿ ಪ್ರಿಯ ಗೆಳೆಯರ ಬಳಗವೊಂದು ಸಂಕಷ್ಟದಲ್ಲಿರುವ ಪ್ರಾಣಿಗಳಿಗೆ ನೆರವಾಗಿ ಸಮಾಜದಲ್ಲಿ ಕಾಡು ಪ್ರಾಣಿಗಳ ಕುರಿತು ಜನಜಾಗೃತಿ ಮೂಡಿಸುತ್ತಿದೆ.

ಪ್ರಾಣಿಗಳ ರಕ್ಷಣೆಗೆ ತಂಡಕಟ್ಟಿಕೊಂಡರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನೆಲೆಸಿದ ಉರಗ ಪ್ರೇಮಿಗಳಾದ ಯಲ್ಲಾ ನಾಯಕ ಹಮಾಣಿ, ನಾಗರಾಜ್ ಶೇಟ್, ಸಿ. ಆರ್. ನಾಯಕ, ಅಶೋಕ್ ನಾಯ್ಕ ಹಾಗೂ ಮಹೇಶ ನಾಯ್ಕರ ಸಮಾನ ಮನಸ್ಕರ ತಂಡ ವೈಯ್ಯಕ್ತಿಕ ನೆಲೆಯಲ್ಲೆ ಪ್ರಾಣಿಗಳ ಸೇವೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿದೆ. ಈ ಪ್ರಾಣಿ ಪ್ರಿಯರ ತಂಡ ಅಂಕೋಲಾ, ಹೊನ್ನಾವರ, ಕುಮಟಾ, ಜೊಯಿಡಾ, ಹಳಿಯಾಳ ಮುಂತಾದ ತಾಲೂಕುಗಳಲ್ಲಿ ಪ್ರಾಣಿಗಳ ರಕ್ಷಣೆಗೆ ವಿವಿಧ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಅಪಾಯಕ್ಕೆ ಸಿಲುಕಿಕೊಳ್ಳುವ ಪ್ರಾಣಿಗಳ ಬಗ್ಗೆ ಸ್ನೇಹಿತರು ಅಥವಾ ದೂರವಾಣಿ ಮೂಲಕ ಮಾಹಿತಿ ಪಡೆದು ಕಾರ್ಯಾಚರಣೆಗೆ ಮುಂದಾಗುತ್ತಿದ್ದಾರೆ.

ಹಿಂದೆ ಇವರ ಕಾರ್ಯ ಕೇವಲ ತಮ್ಮ ತಾಲೂಕಿಗೆ ಸೀಮಿತವಾಗಿತ್ತು. ಇದರಿಂದ ತೃಪ್ತಿ ಕಾಣದ ಇವರು ಕಾಡು ಪ್ರಾಣಿಗಳ ರಕ್ಷಣೆಗೆ ಜಿಲ್ಲೆಯಾದ್ಯಂತ ಎಲ್ಲ ಕಡೆ ಹೋಗಿ ಒಂದು ತಂಡ ರಚಿಸಿಕೊಂಡು, ಆ ಮೂಲಕ ಜನಜಾಗೃತಿಯ ಜೊತೆಗೆ ಕಾಡು ಪ್ರಾಣಿಗಳ ಸಂರಕ್ಷಣೆಯೂ ಆಗಬೇಕು ಎಂಬ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಘವನ್ನು ರಚಿಸಿಕೊಂಡರು.

ರಕ್ಷಣೆಗೆ ಧಾವಿಸುವ ತಂಡ: ಜಿಲ್ಲೆಯ ಯಾವುದೇ ಭಾಗದಲ್ಲಿ ಕಾಡು ಪ್ರಾಣಿಗಳು ಅಪಾಯಕ್ಕೆ ಸಿಲುಕಿದರೆ ಈ ಸ್ನೇಹಿತರ ತಂಡ ನೆರವಿಗೆ ತೆರಳುತ್ತಾರೆ. ಅಪಾಯಕಾರಿ ವಿಷ ಸರ್ಪಗಳನ್ನು ಹಿಡಿದು ಪುನಃ ಸುರಕ್ಷಿತವಾಗಿ ಕಾಡಿಗೆ ಬಿಡುತ್ತಾರೆ. ಇವರಲ್ಲಿ ಅನೇಕರು ಸಾವಿರಾರು ಹಾವುಗಳನ್ನು ಹಿಡಿದು ದಾಖಲೆ ಮಾಡಿದವರು ಇದ್ದಾರೆ.
ಗೋವಾದ ಅಮತ್ರ್ಯಸೇನ್ ಎಂಬ ಉರಗ ತಜ್ಞರಿಂದ ಕಾಳಿಂಗ ಸರ್ಪದಂತಹ ವಿಷಕಾರಿ ಸರ್ಪಗಳನ್ನು ಹಿಡಿಯುವುದರ ಕುರಿತು ತರಬೇತಿ ಪಡೆದವರಿದ್ದಾರೆ.

ಜನವಸತಿ ಪ್ರದೇಶದಲ್ಲಿ ವಿಷಕಾರಿ ಹಾವುಗಳು ಬಂದು ಸೇರಿದರೆ ಪ್ರಾಣದ ಹಂಗು ತೊರೆದು ಸಲೀಸಾಗಿ ಹಿಡಿಯುತ್ತಾರೆ. ಅದರಂತೆ ಬಾವಿಯಲ್ಲಿ ಬಿದ್ದ ಕಾಡು ಪ್ರಾಣಿಗಳನ್ನು, ಜನರಿಗೆ ಉಪಟಳ ಕೊಡುವ ಪ್ರಾಣಿಗಳನ್ನು ಹಿಡಿದು ಕಾಡಿಗೆ ಮರಳಿ ಬಿಡುತ್ತಾರೆ. ಜಿಲ್ಲೆಯ ಮೂಲೆ ಮೂಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ ತೆರಳಿ, ಸ್ವಯಂ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಗಾಯಗೊಂಡ ಹಾವುಗಳಿಗೆ ಅಥವಾ ಪ್ರಾಣಿಗಳಿಗೆ ಗಾಯವಾದರೆ ಇವರೇ ಚಿಕಿತ್ಸೆ ನೀಡಿ ಅವುಗಳ ಆರೈಕೆ ಮಾಡಿ ಮತ್ತೆ ಕಾಡಿಗೆ ಬಿಡುತ್ತಾರೆ. ಅರವಳಿಕೆ ಬಳಸದೇ, ಕೇವಲ ಬಲೆ ಬಳಸಿ ಬಾವಿಯಲ್ಲಿ ಬಿದ್ದ ಚಿರತೆ ಹಾಗೂ ಇತರೆ ಪ್ರಾಣಿಗಳನ್ನು ಹಿಡಿದು ರಕ್ಷಿಸುತ್ತಾರೆ. ಜನರ ಆತಂಕ ನಿವಾರಿಸುವಲ್ಲಿ ಮತ್ತು ಪ್ರಾಣಿಗಳ ಜೀವ ಉಳಿಸುವಲ್ಲಿ ತಂಡ ಕಟ್ಟಿಕೊಂಡು ಬರುವ ಸಂಘದ ಕಾರ್ಯಕ್ಕೆ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಅಭಿಪ್ರಾಯವಿದೆ. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಪ್ರಾಣಿಗಳ ರಕ್ಷಣೆಗೆ ಮುಂದಾಗುವ ಇಂಥ ಪ್ರಾಣಿಗಳ ರಕ್ಷಣಾ ಸಂಘದ ಕಾರ್ಯ ಮಾತ್ರ ಶ್ಲಾಘನೀಯವಾಗಿದೆ.

See also  ಪ್ರತಾಪ್ ಸಿಂಹರನ್ನು ಗೆಲ್ಲಿಸಿದ್ದೆ ಕೊಡಗಿನ ದುರಂತ: ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಗರಂ

ಉತ್ತರ ಕನ್ನಡ ಜಿಲ್ಲೆಯು ದಟ್ಟ ಅರಣ್ಯ ಪ್ರದೇಶದಲ್ಲಿ ಅನೇಕ ಜೀವ ವೈವಿಧ್ಯತೆಯಿಂದ ಕೂಡಿದ ನಾಡು. ಅವುಗಳಲ್ಲಿ ಹುಲಿ, ಚಿರತೆ, ಕರಡಿ, ಕಪ್ಪು ಹುಲಿ, ಕತ್ತೆ ಕಿರುಬ, ಸೀಳುನಾಯಿ, ತೋಳ ಹಾಗೂ ಇನ್ನಿತರ ಮಾಂಸಾಗಾರ ಪ್ರಾಣಿಗಳಾದರೆ ವಿಶೇಷವಾಗಿ ಜಿಂಕೆ, ಕಡವೆ, ಕಾಡೆಮ್ಮೆ, ಕೃಷ್ಣಮೃಗ, ಆನೆ ಮುಂತಾದ ವಿವಿಧ ಬಗೆಯ ಜೀವಿಗಳು ಇವೆ. ಅಲ್ಲದೆ ನಾಗರಹಾವು, ಹೆಬ್ಬಾವು, ಕಾಳಿಂಗ ಸೇರಿದಂತೆ ವಿವಿಧ ಜಾತಿಗೆ ಸೇರಿದ ಮುಂತಾದ ಸರಿಸೃಪಗಳಿವೆ. ಇಂಥ ಪ್ರಾಣಿಗಳು ಅಪಾಯಕ್ಕೆ ಸಿಲುಕಿದರೆ ಅವುಗಳನ್ನು ರಕ್ಷಣೆಗೆ ಪ್ರಾಣದ ಹಂಗು ತೊರೆದು, ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿಯುತ್ತಿರುವುದು ವಿಶೇಷ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು