News Kannada
Saturday, October 01 2022

ಕರ್ನಾಟಕ

ಮೊದಲ ಬಾರಿಗೆ ದಿ ಗೋಲ್ಡನ್ ಚಾರಿಯಟಿಯ ಸುವರ್ಣ ರಥದಲ್ಲಿ ಮೈಸೂರಿಗೆ ಆಗಮಿಸಿದ 20 ಜನ ಪ್ರವಾಸಿಗರು…ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಪ್ರವಾಸಿಗರು - 1 min read

Photo Credit :

ಮೊದಲ ಬಾರಿಗೆ ದಿ ಗೋಲ್ಡನ್ ಚಾರಿಯಟಿಯ ಸುವರ್ಣ ರಥದಲ್ಲಿ ಮೈಸೂರಿಗೆ ಆಗಮಿಸಿದ 20 ಜನ ಪ್ರವಾಸಿಗರು...ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಪ್ರವಾಸಿಗರು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲ್ಲೆಯಲ್ಲಿ ದಿ ಗೋಲ್ಡನ್ ಚಾರಿಯಟಿಯ ಸುವರ್ಣ ರಥ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಬೆಂಗಳೂರಿನಿಂದ ಮೈಸೂರಿಗೆ ಒಂದು ದಿನದ ಪ್ಯಾಕೇಜ್ ಟ್ರಿಪ್ ಆಯೋಜಿಸಿದ್ದು 20 ಪ್ರವಾಸಿಗರು ಇಂದು ಮೈಸೂರಿಗೆ ಬಂದಿಳಿದರು.

ಒಂದು ದಿನದ ಪ್ರವಾಸಕ್ಕಾಗಿ ದಿ ಗೋಲ್ಡನ್ ಚಾರಿಯಟಿಯ ಸುವರ್ಣ ರಥ ಬೆಂಗಳೂರಿನಿಂದ ಶನಿವಾರ ರಾತ್ರಿ 8:30 ಕ್ಕೆ ಪ್ರಯಾಣ ಆರಂಭಿಸಿ ಮೈಸೂರಿಗೆ ಇಂದು ಬೆಳಗ್ಗೆ 8:30 ಕ್ಕೆ ಆಗಮಿಸಿದ 20 ಪ್ರವಾಸಿಗರು ಮೊದಲ ದಸರಾ ಮಹೋತ್ಸವ ವಿಶೇಷ ಪ್ಯಾಕೇಜ್ನಲ್ಲಿ ನಗರಕ್ಕೆ ಆಗಮಿಸಿದರು. ಇವರಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಾಂಪ್ರದಾಯಿಕವಾಗಿ ತಿಲಕ ಇಟ್ಟು, ಮಲ್ಲಿಗೆ ಹೂವು, ಗುಲಾಬಿ ಕೊಟ್ಟು ಜಾನಪದ ಕಲೆಗಳಾದ ವೀರಗಾಸೆ ಮತ್ತು ಕಂಸಾಳೆಯೊಂದಿಗೆ ಅಶೋಕಪುರಂ ರೈಲು ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಮೈಸೂರಿಗೆ ಆಗಮಿಸಿದ ಪ್ರವಾಸಿಗರು ಜಾನಪದ ತಂಡಗಳೊಂದಿಗೆ ನೃತ್ಯ ಮಾಡಿ ಆನಂದಿಸಿದರು.

ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಕುಮಾರ್ ಪುಷ್ಕರ್, ದಸರಾ ವಿಶೇಷಾಧಿಕಾರಿ ಡಿ. ರಂದೀಪ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೆಶಕ ಹೆಚ್.ಪಿ.ಜನಾರ್ದನ್ ಅವರುಗಳು ಪ್ರವಾಸಿಗರಿಗೆ ಗೋಲ್ಡ್ ಕಾರ್ಡ್ ನೀಡಿ ಸಂಸ್ಕ್ರತಿಕ ರಾಜಧಾನಿ ಮೈಸೂರಿಗೆ ಹೆಮ್ಮಯ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸ್ವಾಗತ ಕೋರಿದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಪ್ರವಾಸಿಗರ ಪುರೋಷತ್ತಮ್, ನಾನು ದಸರಾ ಮಹೋತ್ಸಕ್ಕೆ ಮೈಸೂರಿಗೆ ಪತ್ನಿಯನ್ನು ಕರೆದುಕೊಂಡು ಬರಲು ನಿರ್ಧರಿಸಿದ್ದೆ ಆದರೆ ಹೇಳಿರಲಿಲ್ಲ. ನಾವು ಪ್ರವಾಸಕ್ಕೆ ಹೋಗುತ್ತಿದ್ದೆ ರೈಲಿನಲ್ಲಿ ಎಂದಷ್ಟೆ ಹೇಳಿದ್ದೆ. ರಾತ್ರಿ ಯಶವಂತಪುರದಲ್ಲಿ ನನ್ನ ಪತ್ನಿಗೆ ಆಶ್ಚರ್ಯವಾಯಿತು ನಾನು ಅಲ್ಲೆ ಹೇಳಿದ್ದು ನಾವು ಈ ಸುವರ್ಣ ರಥದಲ್ಲಿ ಮೈಸೂರಿಗೆ ದಸರಾ ಮಹೋತ್ಸವಕ್ಕೆ, ಜಗದ್ವಿಖ್ಯಾತ ಅರಮನೆ ನೋಡಲು ಹೋಗುತ್ತಿದ್ದೆ ಎಂದು ಅವರು ಬಹಳ ಖುಷಿ ಪಟ್ಟರು. ಸುವರ್ಣ ರಥದ ಸಿಬ್ಬಂದಿ ಬಹಳ ವಿಜೃಂಬಣೆಯಿಂದ ಬರಮಾಡಿಕೊಂಡರು, ಕರ್ನಾಟಕದ ಪ್ರವಾಸೋದ್ಯಮದ ಅಧ್ಬುತ, ನಾವು ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದೆವು, ರೈಲಿನ ಆಥಿತ್ಯ ಮನಮೋಹಕ ನಾವು ಥ್ರಿಲ್ ಆಗಿದ್ದೆವೆ” ಎಂದು ಪುರುಷೋತ್ತಮ್ ಹಾಗೂ ಸ್ವರ್ಣಗೀತ ತಮ್ಮ ಅನುಭವ ಹಂಚಿಕೊಂಡರು.

ಇನ್ನೂ ಕುಟುಂಬ ಸಮೇತ ಅಮೇರಿಕಾದಿಂದ ಬಂದಿರುವ ಕಿಶೋರ್ ಮಾತನಾಡಿ, ನಾವು ಮೂರು ತಲೆಮಾರುಗಳು ಈ ಪ್ರವಾಸವನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ 75 ವರ್ಷದ ಸತ್ಯನಾರಾಯಣ್ ಹಾಗೂ ನನ್ನ ಮಗ 7 ವರ್ಷದ ಅರ್ಜುನ್ ನಾವೆಲ್ಲರೂ ಫೈಸ್ಟಾರ್ ಲಕ್ಸುರಿ ಜರ್ನಿ ಮಾಡಿದೆವು. ಮೈಸೂರು ದಸರಾ ಬಗ್ಗೆ ಕೇಳಿದ್ದೆವು, ನೋಡಲೇಬೇಕು ಎಂದು ನಿಶ್ಚಿಯಿಸಿದಾಗ ವೆಬ್ ಸೈಟ್ ಮೂಲಕ ಬುಕ್ ಮಾಡಿ ಪ್ರವಾಸ ಆರಂಭಿಸಿದೆವು ಇದು ಮರೆಯಲಾಗದ ಅವಿಸ್ಮರಣೀಯ ಅನುಭವ ಎಂದು ತಮ್ಮ ಖುಷಿ ಹಂಚಿದರು.

ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಕುಮಾರ್ ಪುಷ್ಕರ್ ಮಾತನಾಡಿ ಕಳೆದ ಬಾರಿ ದಸರೆಯಲ್ಲಿ ಐದು ಟ್ರಿಪ್ ಮಾಡಬೇಕಿತ್ತು ಆದರೆ ಸಾದ್ಯವಾಗಲಿಲ್ಲ. ಈ ಬಾರಿ ಎರಡು ದಿನಗಳ ಪ್ರವಾಸ ಆಯೋಜಿಸಿದ್ದೇವೆ. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವತ್ತು 20 ಪ್ರವಾಸಿಗರು ಬಂದಿದ್ದಾರೆ. ಮುಂದಿನ ವಾರ ಅಂದರೆ ಸೆಪ್ಟಂಬರ್ 29 ರಂದು 80 ಜನ ಪ್ರವಾಸಿಗರು ಸುವರ್ಣ ರಥ ಪ್ರವಾಸಕ್ಕೆ ಟಿಕೇಟ್ ಖರೀದಿಸಿದ್ದಾರೆ ರೂ 25,000 ಒಬ್ಬರಿಗೆ ಆಗಲಿದೆ. ಅವರೆಲ್ಲರೂ ದಸರಾ ಮಹೋತ್ಸವ ವಿಜಯದಶಮಿ ಮೆರವಣಿಗೆ ನೋಡಲಿದ್ದಾರೆ. ಈ ಅಭೂತಪೂರ್ವ ಪ್ರತಿಕ್ರಯೆ ನಮಗೆ ಮುಂದೆ ಕಿರು ಪ್ಯಾಕೇಜ್ಗಳನ್ನು ಆಯೋಜಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

See also  ಭದ್ರಾ ಯೋಜನೆಯ ಕುಡಿಯುವ ನೀರು ಶೀಘ್ರದಲ್ಲೇ ಬರಲಿದೆ: ಎಂ. ಮಾದಪ್ಪ

ದಸರಾ ವಿಶೇಷಾಧಿಕಾರಿಗಳಾದ ಡಿ.ರಂದೀಪ್ ಮಾತನಾಡಿ ಅರಮನೆ ನಗರಿಗೆ ಆತ್ಮೀಯ ಸ್ವಾಗತ ಕೊರಿದ್ದೇವೆ, ಗೋಲ್ಡ್ ಕಾರ್ಡ್ ವಿತರಿಸಿದೆವು. ಪ್ರವಾಸಿಗರು ಇಂದು ಶ್ರೀರಂಗಪಟ್ಟಣ, ಚಾಮುಂಡಿ ಬೆಟ್ಟ, ಮಧ್ಯಾಹ್ನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಊಟ ಸವಿಯಲಿದ್ದಾರೆ ಹಾಗೂ ಇತರ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಸಂಜೆ ಅರಮನೆಯ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ವಿಶೇಷವಾದ ಪ್ರವೇಶಾವಕಾಶ ಮತ್ತು ಆಸನ ವ್ಯವಸ್ಥೆಗಳನ್ನು ಎಲ್ಲಡೆ ಮಾಡಲಾಗಿದೆ ಎಂದು ತಿಳಿಸಿದರು.

ದಿ ಗೋಲ್ಡನ್ ಚಾರಿಯಟಿಯ ಸುವರ್ಣ ರಥದ ವಿಶೇಷತೆ:
ಇದು ಕಾರ್ನಟಕ ಸರ್ಕಾರದ ಮಹತ್ವಾಕಾಂಕ್ಷೆಯ ವಿಲಾಸಿ ಪ್ರವಾಸ ಯೋಜನೆ. ಕರ್ನಾಟಕದಲ್ಲಿ ಏಳು ದಿನಗಳ ಪ್ರವಾಸ ಯೋಜನೆ ಮತ್ತು ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿಗೆ ಪ್ಯಾಕೇಜ್ಗಳಿವೆ. 44 ಮೈಸೂರು, ಹಳೆಬೀಡು ಮತ್ತು ಬೇಲೂರು ವಾಸ್ತು ಶೈಲಿಯ ಕೊಠಡಿಗಳಿವೆ. ಜಿಮ್, ಸ್ಪಾ ಮತ್ತು ಸುಂದರ ವಿಲಾಸಿ ವಾತಾವರಣ ರಥದಲ್ಲಿದೆ ಎಂದು ಸುವರ್ಣ ರಥದ ಜೆನೆರಲ್ ಮ್ಯಾನೇಜರ್ ಅಭಿಜಯ್ ವೆರ್ಮ ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು