News Kannada
Thursday, September 29 2022

ಕರ್ನಾಟಕ

ದಸರಾ ಸಂದರ್ಭ ಯುವಕನ ಕೊಲೆ: ಆರೋಪಿಗಳ ಸೆರೆ - 1 min read

Photo Credit :

ದಸರಾ ಸಂದರ್ಭ ಯುವಕನ ಕೊಲೆ: ಆರೋಪಿಗಳ ಸೆರೆ

ಮಡಿಕೇರಿ: ಮಡಿಕೇರಿ ನಗರ ದಸರಾ ಆಚರಣೆ ಸಂದರ್ಭ ನಡೆದ ಚಂದ್ರಶೇಖರ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಗಣಪತಿ ಬೀದಿಯ ನಿವಾಸಿ ಮೊಬೈಲ್ ಟೆಕ್ನೀಷಿಯನ್ ಅಬ್ದುಲ್ ರೋಷನ್ ರೆಹಮಾನ್(32), ಮಹದೇವಪೇಟೆಯ ನಿವಾಸಿ ಕಾರು ಚಾಲಕ ಮೊಹಮ್ಮದ್ ರಾಶಿದ್(34) ಮತ್ತು ಮಖಾನ್ ಗಲ್ಲಿ ನಿವಾಸಿ ಆಟೋ ಚಾಲಕ ನಜೀರ್ (28) ಎಂಬುವರು ಬಂಧಿತ ಆರೋಪಿಗಳು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಪಿ. ರಾಜೇಂದ್ರ ಪ್ರಸಾದ್, ಹತ್ಯಾ ಪ್ರಕರಣದ ಕುರಿತು ಮಾಹಿತಿ ನೀಡಿದರು.

ಮಾಹಿತಿ ಆಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಸಂದರ್ಭ ಅಕ್ಟೋಬರ್ 4ರಂದು ಬೆಳಗ್ಗೆ 5.30 ಗಂಟೆಗೆ ಕುಶಾಲನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಅಬ್ದುಲ್ ರೋಷನ್ ರೆಹಮಾನ್ ಇರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ವೇಳೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದರೆಂದು ಎಸ್ಪಿ ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು.

ಮೃತ ಚಂದ್ರಶೇಖರ್ ಕಳೆದ ಹಲವಾರು ವರ್ಷಗಳಿಂದ ತನ್ನ ಸ್ನೇಹಿತನಾಗಿದ್ದರೂ ತಾಯಿಗೆ ಬೈಯುತ್ತಿದ್ದ. ಇದನ್ನೇ ಕಾರಣವಾಗಿಸಿಕೊಂಡು ಆತನ ಮೇಲೆ ದ್ವೇಷ ಸಾಧಿಸಿ ದಸರಾ ದಿನ ಜನ ಜಂಗುಳಿಯಲ್ಲಿ ಕೊಲೆ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲವೆಂದು ಸಂಚು ರೂಪಿಸಿ ಹತ್ಯೆ ಮಾಡಿರುವುದಾಗಿ ರೋಷನ್ ತಿಳಿಸಿರುವುದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ಹೇಳಿದರು.

See also  ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು