News Kannada
Friday, September 30 2022

ಕರ್ನಾಟಕ

ನಿದ್ದೆ ಮಾಡುವುದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ: ಪ್ರತಾಪ್ ಸಿಂಹ ವ್ಯಂಗ್ಯ - 1 min read

Photo Credit :

ನಿದ್ದೆ ಮಾಡುವುದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ: ಪ್ರತಾಪ್ ಸಿಂಹ ವ್ಯಂಗ್ಯ

ಸೋಮವಾರಪೇಟೆ: ಅಧಿಕಾರದಲ್ಲಿ ಉಳಿಯಲು ಹೈಕಮಾಂಡನ್ನು ಓಲೈಸಿದ್ದು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ನಿದ್ರೆ ಮಾಡಿದ್ದೇ ಸಿದ್ದು ಸರ್ಕಾರದ ಸಾಧನೆ ಎಂದು ಸಂಸದ ಪ್ರತಾತ್ ಸಿಂಹ ಟೀಕಿಸಿದರು.

ಗರ್ವಾಲೆಯಲ್ಲಿ ಬಿಜೆಪಿ ಸ್ಥಾನೀಯ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವುದು ಬಿಟ್ಟರೆ ಬೇರೆ ಯಾವುದೇ ಸಾಧನೆಗಳನ್ನು ರಾಜ್ಯ ಸರ್ಕಾರ ಮಾಡಿಲ್ಲ. ಯಾವ ಆಧಾರದ ಮೇಲೆ ಮತ್ತೆ ಚುನಾವಣೆಯನ್ನು ಎದುರಿಸುತ್ತಾರೆ ಎಂದು ಸಂಸದರು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ಮನೆ ಮನೆಗೆ ತೆರಳುವ ಮೊದಲೇ ಪ್ರಧಾನಿ ಮೋದಿ ಜನರ ಮನದೊಳಗೆ ತಲುಪಿಯಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಗೆ ಈಗಾಗಲೇ ದೂರಸಂಪರ್ಕ ಇಲಾಖೆ 58 ಟವರ್ ಗಳಿಗೆ ಅನುಮೋದನೆ ನೀಡಿದೆ. ಇನ್ನು 75 ಟವರ್ ಗಳನ್ನು ಸದ್ಯದಲ್ಲಿಯೇ ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲಿನ ನೆಟ್ ವರ್ಕ್ ಸಮಸ್ಯೆಗೆ ಇತಿಶ್ರೀ ಹಾಡಲಾಗುವುದು. ಆ ಪೈಕಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಒಂದು ಟವರ್ ಅಳವಡಿಸಲಾಗುವುದು ಎಂದರು.

ಕೊಡಗಿನಲ್ಲಿ ಇಬ್ಬರೂ ಶಾಸಕರು ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಸೈನಿಕ ಶಾಲೆ, ಕೆಂದ್ರೀಯ ವಿದ್ಯಾಲಯ ಸೇರಿದಂತೆ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಇಬ್ಬರೂ ಶಾಸಕರಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರುಗಳನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಡಬೇಕೆಂದು ಈ ಸಂದರ್ಭ ಮನವಿ ಮಾಡಿದರು.

ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕೊಡಗಿನ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಕುರಿತು ಚರ್ಚಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯುವ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು, ಜಿಪಂ ವ್ಯಾಪ್ತಿಗೆ ಒಳಪಡದ ಗೋಣಿಕೊಪ್ಪಲುವಿನ ಎಪಿಎಂಸಿ ಪ್ರಕರಣದ ಬಗ್ಗೆ ಮಾತನಾಡಿದ್ದು ಎಷ್ಟು ಸರಿ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಲೋಕಾಯುಕ್ತವನ್ನು ತೆಗೆದು ಎಸಿಬಿ ರಚನೆ ಮಾಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭ ಹೊರತು ರಾಜ್ಯದ ಜನತೆಗೆ ಅಲ್ಲ ಎಂದ ಅವರು, ಎಸಿಬಿ ಅಂದರೆ ಅಪ್ಪಟ ಕಾಂಗ್ರೆಸ್ ಬ್ಯೂರೋ ಎಂದರು. ಇತ್ತೀಚೆಗೆ ಮಾತೃಪೂರ್ಣ ಎಂಬ ರಾಜ್ಯ ಸರ್ಕಾರದ ಯೋಜನೆ ಸಂಪೂರ್ಣ ವಿಫಲವಾಗಿದೆ. ಇಂತಹ ಯೋಜನೆಗಳಿಂದ ಹಣವನ್ನು ಲೂಟಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಕೊಡಗಿನವರೇ ಆದ ಸಚಿವ ಕೆ.ಜೆ.ಜಾರ್ಜ್ ಅವರಿಂದ ಬಹಳಷ್ಟು ನಿರೀಕ್ಷ ಇಟ್ಟುಕೊಂಡಿದ್ದೆವು. ಆದರೆ ಕೊಡಗಿನ ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದೇ ಅವರ ಸಾಧನೆ ಎಂದು ಟೀಕಿಸಿದರು.

ಜನ ಸಾಮಾನ್ಯರ ಪ್ರಕರಣವನ್ನು ಸಿಓಡಿ ಕೈಗೆತ್ತಿಕೊಂಡರೆ 3 ವರ್ಷವಾದರೂ ತನಿಖೆ ಮುಗಿಯುವುದಿಲ್ಲ. ಆದರೆ ಡಿವೈಎಸ್ಪಿ ಗಣಪತಿ ಪ್ರಕರಣ ಹಾಗೂ ಸಚಿವ ಮೇಟಿ ಪ್ರಕರಣವನ್ನು ಕೇವಲ 2 ತಿಂಗಳಲ್ಲಿ ಮುಗಿಸಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದು ಎಷ್ಟು ಸರಿ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 775 ಅತ್ಯಾಚಾರ ಪ್ರಕರಣಗಳ ದಾಖಲಾಗಿವೆ. ಆಗಸ್ಟ್ ಒಂದು ತಿಂಗಳಲ್ಲಿಯೇ 44 ಕೊಲೆಗಳು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಇದೇನು ಜಂಗಲ್ ರಾಜ್ಯನಾ? ಎಂದು ವ್ಯಂಗ್ಯವಾಡಿದರು.

See also  ತುಳು ಅಕಾಡೆಮಿಯಲ್ಲಿ ಸ್ಥಾನ ನೀಡಲು ಒತ್ತಾಯ

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಮಡಿಕೇರಿ ಬಿಜೆಪಿ ಕ್ಷೇತ್ರಿಯ ಸಮಿತಿ ಅಧ್ಯಕ್ಷ ಎಂ.ಎನ್.ಕೊಮಾರಪ್ಪ, ಗರ್ವಾಲೆ ಗ್ರಾಪಂ ಅಧ್ಯಕ್ಷ ಸುಭಾಷ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗಣೇಶ್, ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಉಪಸ್ಥಿತರಿದ್ದರು. ಸ್ಥಾನೀಯ ಸಮಿತಿ ಅಧ್ಯಕ್ಷ ಈರಪ್ಪ ಅಧ್ಯಕ್ಷತೆ ವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು