News Kannada
Thursday, October 06 2022

ಕರ್ನಾಟಕ

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಠಿಣ ಕಾನೂನು ಜಾರಿಯಲ್ಲಿದೆ: ನ್ಯಾಯಾದೀಶೆ ಎಂ.ಎಸ್.ಶಶಿಕಲಾ - 1 min read

Photo Credit :

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಠಿಣ ಕಾನೂನು ಜಾರಿಯಲ್ಲಿದೆ: ನ್ಯಾಯಾದೀಶೆ ಎಂ.ಎಸ್.ಶಶಿಕಲಾ

ಮೂಡಿಗೆರೆ: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅನೇಕ ಕಾನೂನು ಕಾಯಿದೆಗಳು ಜಾರಿಯಲ್ಲಿದ್ದು, ದೌರ್ಜನ್ಯಕೊಳಗಾದ ಮಹಿಳೆಯರು ಇಂತಹ ಕಠಿಣ ಕಾನೂನುಗಳ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಬೇಕೆಂದು ಮೂಡಿಗೆರೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾದೀಶೆ ಎಂ.ಎಸ್.ಶಶಿಕಲಾ ತಿಳಿಸಿದರು.

ಪಟ್ಟಣದ ಡಿಎಸ್ಬಿಜಿ ಪ್ರಥಮ ದರ್ಜೇ ಕಾಲೇಜು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾ ಆಶ್ರಯದಲ್ಲಿ ನಡೆದ ಮಹಿಳೆಯರ ಕಾನೂನು ಮತ್ತು ಹಕ್ಕುಗಳು ಹಾಗೂ ಮಹಿಳಾ ದೌರ್ಜನ್ಯ ತಡೆ ಕಾಯಿದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರೂಣ ಹತ್ಯೆ ಮಾಡುವವರ ವಿರುದ್ಧ 1994ರಲ್ಲಿ ಕಾಯಿದೆ ಜಾರಿಗೆ ಬಂದಿದ್ದರೂ, ಯಶಸ್ಸನ್ನು ಕಾಣಲು ಇಂದಿಗೂ ಸಾಧ್ಯವಾಗಿಲ್ಲ. ಹಿಂದೂ ವಿವಾಹ ನೊಂದಣಿ ಜಾರಿಯಲ್ಲಿದ್ದರೂ ಸಾಕಾರಗೊಳ್ಳುತ್ತಿಲ್ಲ. ಇದು ಕಡ್ಡಾಯಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸುವವರ ಜನ ಹೆಚ್ಚಾಗಿದೆ. ಇದು ಸಮಾಜಕ್ಕೆ ಪೂರಕವಾದ ವಾತಾವರಣವಲ್ಲ ಎಂದರು.

ಅತ್ಯಾಚಾರಕ್ಕೊಳದಾಗ ಸಂತ್ರಸ್ಥೆಗೆ ಸರಕಾರದಿಂದ ಪರಿಹಾರವಿದೆ. ಆದರೆ ಆರೋಪಿಗೆ ಶಿಕ್ಷೆಯಾಗಬೇಕು. ಆಗ ಮಾತ್ರ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಕಾನೂನು ಹೇಳುತ್ತದೆ.  ಬಾಲಕ ಹಾಗೂ ಬಾಲಕೀಯರು ದೌರ್ಜನ್ಯಕ್ಕೊಳಗಾದರೆ ಫೋಸ್ಕೋ ಕಾಯಿದೆಯನ್ನು 2012ರಲ್ಲಿ ಜಾರಿಗೊಳಿಸಲಾಗಿದೆ. ಇಂತಹ ಕಠಿಣ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೆ ಇಲ್ಲ ಎಂದರು.

ವಕೀಲೆ ವಿಶಾಲಾಕ್ಷಿ ಮಾತನಾಡಿ, ಸಮಾಜದಲ್ಲಿ ವರದಕ್ಷಿಣೆ ಎಂಬ ಭೂತದಿಂದ ಯುವತಿಯರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ. ವರದಕ್ಷಿಣೆಗಾಗಿ ನಡೆಯುವ ಕೌಟುಂಬಿಕ ದೌರ್ಜನ್ಯದಿಂದ ಮುಕ್ತಿ ಹೊಂದಲು ಹಲವು ಕಾನೂನು ಕಾಯಿದೆಗಳು ಜಾರಿಯಲ್ಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಗೂ ದೂರು ನೀಡಿ ನ್ಯಾಯ ಪಡೆಯಲು ಅವಕಾಶವಿದೆ. ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯನ್ನು ದೂರವಿಡಬೇಕು. ವಿಧವೆಯರು ಮರು ಮದುವೆಯಾಗಬಾರದೆಂಬ ಗ್ರಾಮೀಣ ಭಾಗದ ಹಿರಿಯರ ಲೆಕ್ಕಾಚಾರ ತಪ್ಪು. ಇದು ಕ್ರೂರ ಪದ್ಧತಿ. ಈ ಪದ್ಧತಿಯಿಂದ ಹೊರ ಬಂದು ವಿದವೆಯರಿಗೂ ಬಾಳು ನೀಡುವಂತೆ ಸಲಹೆ ನೀಡಿದರು.

 

See also  ಮೊಬೀನಾ ಹತ್ಯೆ ಪ್ರಕರಣ ಬಯಲು: ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು