News Kannada
Saturday, October 01 2022

ಕರ್ನಾಟಕ

ರಿವಾಲ್ವರ್, ಚಿನ್ನಾಭರಣ ಸಹಿತ ಮೂವರ ಬಂಧನ - 1 min read

Photo Credit :

ರಿವಾಲ್ವರ್, ಚಿನ್ನಾಭರಣ ಸಹಿತ ಮೂವರ ಬಂಧನ

ಮಡಿಕೇರಿ: ನಗರದಲ್ಲಿ ನಡೆದ ಎರಡು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಚಿನ್ನಾಭರಣ ಸೇರಿದಂತೆ ಒಂದು ರಿವಾಲ್ವರ್, 3 ಸಜೀವ ಗುಂಡುಗಳು ಹಾಗೂ ಎಸ್ಬಿಬಿಎಲ್ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ವಶ ಪಡಿಸಿಕೊಂಡ ಮಾಲಿನ ಒಟ್ಟು ಮೌಲ್ಯ 18 ಲಕ್ಷ ರೂ.ಗಳೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಪರಾಧ ಪತ್ತೆದಳ ಮತ್ತು ಮಡಿಕೇರಿ ನಗರ ಠಾಣಾಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದರು.

ಮೂಲತಃ ಕೇರಳದ ಇರ್ಟ್ಟಿ ತಾಲ್ಲೂಕಿನ ಉಲಿಕ್ಕಲ್ ಗ್ರಾಮದವನಾದ, ಪ್ರಸ್ತುತ ಸೋಮವಾರಪೇಟೆ ಗಾಂಧಿ ನಗರದಲ್ಲಿ ವಾಸವಿರುವ ಸಲೀಂ( 32), ಸುಂಟಿಕೊಪ್ಪ ಹೋಬಳಿಯ ಗರಗಂದೂರು ಗ್ರಾಮದ ನಿವಾಸಿ ಕೆ. ಶರತ್(25), ಸೋಮವಾರಪೇಟೆ ಗಾಂಧಿ ನಗರದ ನಿವಾಸಿ ಅನಿಲ್ ಕುಮಾರ್(43) ಎಂಬವರು ಬಂಧಿತರು. ಮತ್ತೊಬ್ಬ ಆರೋಪಿ ಸವಿನ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಪ್ರಸಕ್ತ ಸಾಲಿನ ಜುಲೈ 16ರಂದು ಗೋಣಿಕೊಪ್ಪಲಿನ ಪುಷ್ಪಾವತಿ ಎಂಬವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಿಗಳು 164 ಗ್ರಾಂ ಚಿನ್ನ ಹಾಗೂ 15 ಸಾವಿರ ನಗದು ದೋಚಿದ್ದರು. ಇದಾದ 12 ದಿನಗಳ ನಂತರ ಜು.28ರಂದು ಮಡಿಕೇರಿ ನಗರದ ಜಯನಗರ ನಿವಾಸಿ ಕಾರ್ಯಪ್ಪ ಅವರ ಮನೆಯ ಬಾಗಿಲನ್ನು ಮುರಿದು 256 ಗ್ರಾಂ ಚಿನ್ನ 5 ಸಾವಿರ ರೂ. ನಗದು ಹಾಗೂ ರಿವಾಲ್ವರ್ ನೊಂದಿಗೆ 3 ಸಜೀವ ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಸೆ.28 ರಂದು ನಗರದ ರೈಫಲ್ ರೇಂಜ್ ನ ಎನ್.ಯು. ಗೌತಮ್ ಎಂಬವರ ಮನೆಯ ಬಾಗಿಲು ಮುರಿದು 72 ಗ್ರಾಂ ಚಿನ್ನಾಭರಣ ಹಾಗೂ ಒಂದು ಎಸ್ಬಿಬಿಎಲ್ ಕೋವಿಯನ್ನು ಕಳವು ಮಾಡಿದ್ದರು.

ಬಂಧಿತರಿಂದ ಒಂದು ರಿವಾಲ್ವರ್, 3 ಸಜೀವ ಗುಂಡುಗಳು, ಎಸ್ಬಿಬಿಎಲ್ ಬಂದೂಕುಗಳು, ಸುಮಾರು 13.67 ಲಕ್ಷ ಮೌಲ್ಯದ 492 ಗಾಂ. ಚಿನ್ನಾಭರಣ, ಕಳ್ಳತನಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಕಳ್ಳತನದ ಹಣದಿಂದ ಖರೀದಿಸಿದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಎರಡು ತಂಡಗಳಿಗೆ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಇದೇ ಸಂದರ್ಭ 10 ಸಾವಿರ ರೂ. ನಗದು ಬಹುಮಾನ ಘೋಷಿಸಿದರು.

See also  ಬೈಕ್- ಕೆಎಸ್ ಆರ್ ಟಿಸಿ ಬಸ್ ಅಪಘಾತ: ಇಬ್ಬರು ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು