News Kannada
Saturday, October 01 2022

ಕರ್ನಾಟಕ

ಹೊಯ್ಸಳ ಲಿಪಿ ಹೊಂದಿರುವ ವೀರಗಲ್ಲು ಶಾಸನ ಪತ್ತೆ - 1 min read

Photo Credit :

ಹೊಯ್ಸಳ ಲಿಪಿ ಹೊಂದಿರುವ ವೀರಗಲ್ಲು ಶಾಸನ ಪತ್ತೆ

ಚಿಕ್ಕಮಗಳೂರು: ಸುಮಾರು 921 ವರ್ಷಗಳ ಹಳೆಗನ್ನಡ ಹೊಯ್ಸಳ ಲಿಪಿ ಹೊಂದಿರುವ ವೀರಗಲ್ಲು ಶಾಸನವನ್ನು ಜಿಲ್ಲೆಯ ಹವ್ಯಾಸಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಪತ್ತೆ ಹಚ್ಚಿದ್ದಾರೆ.

ಮೂಡಿಗೆರೆ ತಾಲೂಕು ತ್ರಿಪುರದ ರಾಧಾಕೃಷ್ಣ ಅವರ ಕಾಫಿತೋಟದಲ್ಲಿ ಕಳಸದ ಕೃಷಿ ಅಧಿಕಾರಿಯಾಗಿರುವ ಪಾಂಡುರಂಗ ಅವರು ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದಾಗ ಸ್ಥಳೀಯರಾದ ಮಂಜುನಾಥ ಮತ್ತು ಸುಧಾಕರ್ ನೆರವಿನೊಂದಿಗೆ ಪುರಾತನ ಶಿಲಾಶಾಸನ ಸಂಶೋಧಿಸಿದ್ದಾರೆ.

ಕಲ್ಯಾಣ ಚಾಲುಕ್ಯರ ಮಹಾಮಂಡಲೇಶ್ವರ ಹೊಯ್ಸಳ ದೊರೆ ವಿನಿಯಾದಿತ್ಯನ ಕಾಲದ್ದೆನ್ನಲಾದ ಬಳಪದ ಕಲ್ಲಿನಲ್ಲಿ ನಿರ್ಮಿಸಿರುವ ವೀರಗಲ್ಲು ಶಾಸನ ನಾಲ್ಕೂವರೆ ಅಡಿ ಎತ್ತರ ಮತ್ತು ಒಂದು ಮುಕ್ಕಾಲು ಅಡಿ ಅಗಲ ಇದೆ. ಕೋಟೆ ಕಾಳಗದಲ್ಲಿ ಮಡಿದ ವೀರನೊಬ್ಬನ ಸ್ಮರಣಾರ್ಥ ನಿಲ್ಲಿಸಿರುವ ವೀರಗಲ್ಲು ಇದಾಗಿದ್ದು, ಮೂರುಪಟ್ಟೆ ಹೊಂದಿರುವ ಸುಂದರ ಚಿತ್ರಣವಿದೆ. ಕೆಳಗಿನ ಪಟ್ಟಿಕೆಯಲ್ಲಿ ಕೋಟೆ ಕಾಳಗ ಹಾಗೂ ಅಶ್ವರೂಢ ವೀರನ ಚಿತ್ರಣ, 2ನೆಯ ಪಟ್ಟಿಕೆಯಲ್ಲಿ ವೀರನೊಬ್ಬ ಖಡ್ಗಾಘಾತದಿಂದ ಮೃತಹೊಂದಿದ್ದು, ಅವನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯದ ಚಿತ್ರಣವಿದೆ.

ಮೇಲಿನ ಪಟ್ಟಿಕೆಯಲ್ಲಿ ಮೃತವೀರ ಸ್ವರ್ಗದಲ್ಲಿ ಅಪ್ಸರೆಯರೊಂದಿಗೆ ಸಂಗೀತ ಆಸ್ವಾದಿಸುವ ಚಿತ್ರಣವಿದೆ. 13 ಸಾಲಿನ ಹಳೆಗನ್ನಡ ಹೊಯ್ಸಳ ಲಿಪಿಯನ್ನು ಶಾಸನ ಹೊಂದಿದೆ. ಈ ವೀರಗಲ್ಲು ಶಾಸನವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಿರುವ ಪಾಡುರಂಗ ಅವರು, ಇದೇ ಅಕ್ಟೋಬರ್ 28ರಿಂದ 30ರವರೆಗೆ ಕೊಪ್ಪಳದಲ್ಲಿ ನಡೆಯುವ ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಹಿರೇನಲ್ಲೂರಿನಲ್ಲಿ ಸೇಂದ್ರಿಕರ ಕಾಲದ ಜಿಲ್ಲೆಯಲ್ಲೆ ಪ್ರಥಮವೆನ್ನಲಾದ ಶಾಸನ ಪತ್ತೆ ಮಾಡಿರುವ ಪಾಡುರಂಗ, ಜಿಲ್ಲೆಯಲ್ಲಿ ಮತ್ತಷ್ಟು ಶಾಸನಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

See also  ಹಳ್ಳಕ್ಕೆ ಬಿದ್ದು ಮೂರು ವರ್ಷದ ಮಗು ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು