News Kannada
Saturday, September 24 2022

ಕರ್ನಾಟಕ

ಅಪಘಾತದಲ್ಲಿ ಗ್ಯಾಸ್ ಟ್ಯಾಂಕರ್ ಕಂದಕಕ್ಕೆ: ಆತಂಕದಲ್ಲಿ ಜನರು - 1 min read

Photo Credit :

ಅಪಘಾತದಲ್ಲಿ ಗ್ಯಾಸ್ ಟ್ಯಾಂಕರ್ ಕಂದಕಕ್ಕೆ: ಆತಂಕದಲ್ಲಿ ಜನರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನಿಲ ತುಂಬಿದ ಟ್ಯಾಂಕರ್ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಪರಿಣಾಮ ಚಾಲಕ ಗಾಯಗೊಂಡು ಟ್ಯಾಂಕರ್ ರಸ್ತೆ ಬದಿಯ ಕಂದಕಕ್ಕೆ ಇಳಿದು ಆತಂಕ ಸೃಷ್ಟಿಸಿದೆ.

ಮಂಗಳೂರಿನಿಂದ ಗೋವಾ ಕಡೆಗೆ ಸಾಗುತ್ತಿದ್ದ ಭಾರತ್ ಗ್ಯಾಸ್ ಕಂಪನಿಯ ಟ್ಯಾಂಕರ್ ಬರ್ಗಿ ಗ್ರಾಮ ಪಂಚಾಯತ್ ರಾಷ್ಡ್ರೀಯ ಹೆದ್ದಾರಿ 66ರಲ್ಲಿ ಘಟನೆ ಸಂಭವಿಸಿದೆ. ಗ್ಯಾಸ್ ಟ್ಯಾಂಕರ್ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಕಂಗಾಲಾಗಿದ್ದರು.

ಕಳೆದ 2015ರಲ್ಲಿ ಬರ್ಗಿ ಘಟ್ಟದಲ್ಲಿ ಎಚ್ ಪಿ ಕಂಪನಿಗೆ ಸೇರಿದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಅನಿಲ ಸೋರಿಕೆಯಿಂದ ಬೆಂಕಿ ತಗುಲಿ 13 ಮಂದಿ ಮೃತಪಟ್ಟಿದ್ದರು. ಜೊತೆಗೆ ಸಾಕಷ್ಟು ಆಸ್ತಿ ಪಾಸ್ತಿ, ಮರಗಿಡಗಳು ಸುಟ್ಟು ಭಸ್ಮವಾಗಿದ್ದವು. ಮಂಗಳವಾರ ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಜನರಿಗೆ ಹಿಂದೆ ನಡೆದ ಘಟನೆ ನೆನಸಿಪಿದೆ. ತಕ್ಷಣ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮದ ದಳ ಸಿಬ್ಬಂದಿಗಳು ಬಂದು ಸಂಚಾರ ಸ್ಥಿತಿಯನ್ನು ಸುಗಮಗೊಳಿಸಿದರು. ಘಟನೆಯಲ್ಲಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

See also  ಜಾಧವ್ ಗೆ ಬೆಂಬಲ ಸೂಚಿಸಿದ ಕುಡಾ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು