News Kannada
Friday, October 07 2022

ಕರ್ನಾಟಕ

ಜನರಿಲ್ಲದ ಕಡೆ ಇಂದಿರಾ ಕ್ಯಾಂಟೀನ್ ತೆರೆಯಬೇಡಿ ಸ್ವಾಮಿ! - 1 min read

Photo Credit :

ಜನರಿಲ್ಲದ ಕಡೆ ಇಂದಿರಾ ಕ್ಯಾಂಟೀನ್ ತೆರೆಯಬೇಡಿ ಸ್ವಾಮಿ!

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ತೆರೆಯಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ ನ್ನು ಜನೋಪಯೋಗಿ ಸ್ಥಳದಲ್ಲಿ ತೆರೆಯಬೇಕು ಎಂದು ಶಂಕರಪುರ ಮತ್ತು ಲಕ್ಷ್ನೀಶ ನಗರ ನಿವಾಸಿಗಳ ವೇದಿಕೆಯ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ತೆರೆಯಲು ಉದ್ದೇಶಿಸಿರುವ ಕ್ರಮ ಸ್ವಾಗತಾರ್ಹ. ಕ್ಯಾಂಟೀನ್ ತೆರೆಯಲು ಉತ್ತಮ ಸ್ಥಳ ಗುರುತಿಸುವುದು ಸೂಕ್ತ. ಕ್ಯಾಂಟೀನ್ ತೆರೆಯಲು ಅಜಾದ್ ಪಾರ್ಕ್ ನಲ್ಲಿರುವ ಪಿಡಬ್ಲ್ಯೂಡಿ ಕಚೇರಿ ಆವರಣ ಸೂಕ್ತವಾಗಿದೆ. ಈ ಕಚೇರಿಯು ಆವರಣ ತುಂಬಾ ವಿಶಾಲವಾಗಿದ್ದು, ಅಂಬೇಡ್ಕರ್ ರಸ್ತೆಗೆ ಹೊಂದಿಕೊಂಡಿರುತ್ತದೆ. ಈ ಕಚೇರಿಯು ಒಂದು ಕಟ್ಟಡದ ಭಾಗ ಅಂಬೇಡ್ಕರ್ ರಸ್ತೆಗೆ ಹೊದಿಕೊಂಡಂತೆ ಖಾಲಿ ಇರುತ್ತದೆ ಎಂದು ತಿಳಿಸಿದ್ದಾರೆ.

ಈ ಭಾಗದ ಆವರಣ ಗೋಡೆ ತೆರವುಗೊಳಿಸಿ ಅಂಬೇಡ್ಕರ್ ರಸ್ತೆಗೆ ಹೊಂದಿಕೊಂಡಂತೆ ಪ್ರಾರಂಭಿಸಬಹುದು. ಇಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇದೆ. ಆವರಣ ಪಕ್ಕದಲ್ಲಿ ಚರಂಡಿ ಹಾಗೂ ಒಳ ಚರಂಡಿ ಇರುವುದರಿಂದ ತುಂಬಾ ಅನುಕೂಲವಾಗುತ್ತದೆ. ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆ, ಜಿಲ್ಲಾ ಆಡಳಿತ ಕಚೇರಿ ಇದ್ದು ಜನರಿಗೆ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಿಂದ ಬರುವ ಕಾರ್ಮಿಕ ವರ್ಗದವರು ಹಾಗೂ ಕಟ್ಟಡ ಕಾರ್ಮಿಕರು, ಬಡ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ನಿಂದ ಲಾಭವಾಗಲಿದೆ. ಈ ಸ್ಥಳವು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಸಂತೆ ಮೈದಾನ, ಇವುಗಳಿಗೆ ಸಮೀಪವಿರುವುದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

See also  ಸಚಿವ ಅನಂತಕುಮಾರ್ ಹೆಗಡೆಗೆ ನಿರೀಕ್ಷಣಾ ಜಾಮೀನು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು