News Kannada
Friday, September 30 2022

ಕರ್ನಾಟಕ

ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ವಿದ್ಯಾರ್ಥಿನಿ ಸಾವು - 1 min read

Photo Credit :

ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ವಿದ್ಯಾರ್ಥಿನಿ ಸಾವು

ಕಾರವಾರ: ಎಲ್ಲ ವ್ಯವಸ್ಥೆಗಳಿರುವ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಲಭಿಸದೆ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಂಭವಿಸಿದೆ.

ಯಲ್ಲಾಪುರ ತಾಲೂಕಿನ ಗೋರ್ಸಗದ್ದೆ ಗ್ರಾಮದ 21 ವರ್ಷದ ರಾಜೇಶ್ವರಿ ನಾಯ್ಕ ಮೃತಪಟ್ಟ ವಿದ್ಯಾರ್ಥಿನಿ. ಶಿವಮೊಗ್ಗದಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ರಾಜೇಶ್ವರಿ ಕ್ಷಯ ರೋಗದಿಂದ ಬಳಲುತ್ತಿದ್ದಳು. ಇದರಿಂದಾಗಿ ರಾಜೇಶ್ವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು.

ಪಾಲಕರು ತಮ್ಮ ಮಗಳನ್ನು ಊರಿಗೆ ಕರೆದು ತಂದು ಆಮ್ಲಜನಕ ಹಾಕಿಸಬೇಕು ಎಂದು ಸಮೀಪದ ಮಂಚಿಕೇರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ತೆರಳಿದ್ದರು. ಆದರೆ ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿ ಇಲ್ಲದೆ ಬಾಗಿಲು ಹಾಕಿದ ಪರಿಣಾಮ ಬೇರೆ ಆಸ್ಪತ್ರೆಗೆ ಹೋಗುವ ಸ್ಥಿತಿ ಉದ್ಬವಿಸಿತ್ತು. ಬೇರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ವಿದ್ಯಾರ್ಥಿನಿ ರಾಜೇಶ್ವರಿ ಮೃತಪಟ್ಟಿದ್ದಾಳೆ.

ಆಸ್ಪತ್ರೆಯ ವೈದ್ಯರು, ನರ್ಸ್, ಔಷಧಿ ಕೊಡುವವರು, ಪ್ರಯೋಗಾಲಯದ ಸಿಬ್ಬಂದಿ, ಆಕ್ಸಿಜನ್ ಹಾಕುವ ಸಿಬ್ಬಂದಿ ಯಾರು ಇಲ್ಲ. ವಾರದಲ್ಲಿ ಒಂದೆರಡು ದಿನ ಬೇರೆ ಆಸ್ಪತ್ರೆಯಿಂದ ವೈದ್ಯರು ಬಂದರೆ ಒಬ್ಬರು ನರ್ಸ್ ಹಾಗೂ ಜವಾನ ಮಾತ್ರ ಆಸ್ಪತ್ರೆಯಲ್ಲಿ ಇದ್ದ ಎನ್ನುವುದು ಪಾಲಕರ ಆರೋಪವಾಗಿದೆ. ಯಲ್ಲಾಪುರದ ಮಂಚಿಕೇರಿ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿಗಳನ್ನು ನೇಮಿಸಲಿ. ತಮ್ಮ ಮಗಳು ರಾಜೇಶ್ವರಿ ಬಂದ ಸ್ಥಿತಿ ಬೇರೆ ಯಾರಿಗೂ ಬರದಿರಲಿ ಎನ್ನುವುದು ಪಾಲಕರ ಆಗ್ರಹವಾಗಿದೆ.

See also  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೊನಾ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು