News Kannada
Sunday, September 25 2022

ಕರ್ನಾಟಕ

ಕಾಸರಗೋಡಿನಲ್ಲಿ ಭಾರೀ ಮಳೆಗೆ ಅಪಾರ ನಷ್ಟ - 1 min read

Photo Credit :

ಕಾಸರಗೋಡಿನಲ್ಲಿ ಭಾರೀ ಮಳೆಗೆ ಅಪಾರ ನಷ್ಟ

ಕಾಸರಗೋಡು: ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಗುಡುಗು ಮಿಂಚಿನ ಆರ್ಭಟಕ್ಕೆ ಅಪಾರ ನಷ್ಟ ಉಂಟಾಗಿದೆ. ಇಲೆಕ್ಟ್ರಾನಿಕ್ಸ್ ವಸ್ತುಗಳು ಉರಿದಿದೆ. ಮಲ್ಲ ಚಾತಪ್ಪಾಡಿಯಲ್ಲಿ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ.

ಚಾತಪ್ಪಾಡಿಯ ರಾಜೀವಿ ( ೫೦) , ಪುತ್ರ ರಜೀಶ್ ( ೨೮) , ಪತ್ನಿ ಮೋಳಿಷಾ ( ೨೦) ಗಾಯಗೊಂಡಿದ್ದಾರೆ. ಸರೋಜಿನಿ ಎಂಬವರ ಮನೆಗೂ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿದ್ದು , ಗೋಡೆ ಬಿರುಕು ಬಿಟ್ಟಿದೆ. ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಸಮೀಪದ ಅಬೂಬಕ್ಕರ್ ಎಂಬವರ ಮನೆಗೂ ಸಿಡಿಲು ಬಡಿದು ಹಾನಿ ಉಂಟಾಗಿದೆ.

ನೆಕ್ರಾಜೆ ಕೋಳಾರಿ ಎಂಬಲ್ಲಿ ಮೋಹನ್ ರವರ ಮನೆಯ ಗೋಡೆ ಬಿರುಕು ಬಿಟ್ಟಿದ್ದು , ವಿದ್ಯುತ್ ಉಪಕರಣ ಉರಿದಿದೆ. ಮಾನ್ಯ ಚುಕ್ಕಿನಡ್ಕ ದ ಸರಸ್ವತಿ ರವರ ಮನೆಯ ವಿದ್ಯುತ್ ಉಪಕರಣಗಳು ಉರಿದಿದೆ. ಕಳೆದ ಎರಡು ದಿನಗಳಿಂದ ಮಳೆ , ಗುಡುಗು ಮಿಂಚಿನಿಂದ ಲಕ್ಷಾಂತರ ರೂ . ಗಳ ನಾಶ ನಷ್ಟ ಉಂಟಾಗಿದೆ.

 

See also  ಮಡಿಕೇರಿ ರಸ್ತೆ ಅವ್ಯವಸ್ಥೆ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು