ಚಿತ್ರದುರ್ಗ: ರಾತ್ರಿ ಚಿತ್ರಾನ್ನ ಮತ್ತು ಮಂಡಕ್ಕಿ ಸೇವಿಸಿ ಮಲಗಿದ ಇಬ್ಬರು ಮಕ್ಕಳಿಗೆ ತಡರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ಬೆಳಗ್ಗೆ ಚಿಕಿತ್ಸೆಗಾಗಿ ಆಸ್ಪತ್ರಗೆ ಕರೆದೊಯ್ಯುವ ವೇಳೆ ಮೃತಪಟ್ಟ ಧಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಬೋಜಪ್ಪ, ಲಕ್ಷ್ಮಿದೇವಿ ದಂಪತಿಯ ಮಕ್ಕಳಾದ ವರ್ಷಿಣಿ(3) ಹಾಗೂ ಜಗದೀಶ್(6) ಎಂದು ಗುರುತಿಸಲಾಗಿದೆ. ಮಕ್ಕಳು ರಾತ್ರಿ ಮನೆಯಲ್ಲಿ ಚಿತ್ರಾನ್ನ ಹಾಗು ಮಂಡಕ್ಕಿ ತಿಂಡಿ ತಿಂದು ಮಲಗಿದ್ದಾರೆ. ತಡರಾತ್ರಿ ಮಕ್ಕಳಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಬೇದಿ ಮಾಡಿದ್ದಾರೆ. ಕೂಡಲೇ ಪೋಷಕರು ಮಾತ್ರೆ ಕೊಟ್ಟು ಮಲಗಿಸಿದ್ದಾರೆ. ಬೆಳಗ್ಗೆ ಚಿಕಿತ್ಸೆಗಾಗಿ ಚಳ್ಳಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ.
ಈ ಆಹಾರವನ್ನು ಮಕ್ಕಳ ತಂದೆ, ತಾಯಿ ಹಾಗು ತಂಗಿ ಕೂಡ ಸೇವಿಸಿದ್ದು ಅವರನ್ನು. ಅದೃಷ್ಟವಶಾತ್ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.