News Kannada
Sunday, October 02 2022

ಕರ್ನಾಟಕ

ಸಂಘರ್ಷಕ್ಕೆ ಕಡಿವಾಣ ಹಾಕಲು ಕೆ.ನಿಡುಗಣೆ ಗ್ರಾ.ಪಂ. ಒತ್ತಾಯ - 1 min read

Photo Credit :

ಸಂಘರ್ಷಕ್ಕೆ ಕಡಿವಾಣ ಹಾಕಲು ಕೆ.ನಿಡುಗಣೆ ಗ್ರಾ.ಪಂ. ಒತ್ತಾಯ

ಮಡಿಕೇರಿ: ಪ್ರವಾಸಿ ತಾಣ ಮಾಂದಲ್ ಪಟ್ಟಿ ವ್ಯಾಪ್ತಿಯಲ್ಲಿ ಜೀಪು ಚಾಲಕರ ನಡುವೆ ನಡೆಯುತ್ತಿರುವ ಸಂಘರ್ಷಕ್ಕೂ ಕೆ.ನಿಡುಗಣೆ ಗ್ರಾ.ಪಂ.ಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿರುವ ಪಂಚಾಯ್ತಿ ಪ್ರತಿನಿಧಿಗಳು, ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರಾದ ಡೀನ್ ಬೋಪಣ್ಣ ಮಾನವೀಯ ದೃಷ್ಟಿಯಿಂದ ಜೀಪ್ ಚಾಲಕರಿಗೆ ಮಾಂದಲ್ಪಟ್ಟಿ ವ್ಯಾಪ್ತಿಯಲ್ಲಿ ಜೀಪ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಯ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.

ಕೆ.ನಿಡುಗಣೆ ಗ್ರಾ.ಪಂ. ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ ಎಂದು ಪಕ್ಕದ ಗಾಳಿಬೀಡು ಗ್ರಾಮಸ್ಥರು ಮಾಡಿರುವ ಆರೋಪ ಖಂಡನೀಯವೆಂದರು. ಕೆ.ನಿಡುಗಾಣೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 125 ಕ್ಕೂ ಅಧಿಕ ಜೀಪ್ ಗಳು ಸಂಚರಿಸುತ್ತಿದ್ದು, ಕೆಲವು ಚಾಲಕರಿಂದ ಮಾತ್ರ ಸಮಸ್ಯೆ ಉದ್ಭವವಾಗಿದೆ ಎಂದು ತಿಳಿಸಿದರು. ಸಾರಿಗೆ ಅಧಿಕಾರಿಗಳು ಬಿಳಿ ಫಲಕ ಮತ್ತು ಹಳದಿ ಫಲಕ ಎನ್ನುವ ತಾರತಮ್ಯವನ್ನು ತೋರದೆ ಜಿಲ್ಲೆಯ ಎಲ್ಲಾ ಭಾಗಗಳಿಗೆ ಒಂದೇ ರೀತಿಯ ನಿಯಮವನ್ನು ಜಾರಿಗೊಳಿಸಬೇಕೆಂದು ಡೀನ್ ಬೋಪಣ್ಣ ಒತ್ತಾಯಿಸಿದರು.

ಮತ್ತೊಂದು ಪ್ರವಾಸಿ ತಾಣ ಅಬ್ಬಿಪಾಲ್ಸ್ ಗೆ ತೆರಳುವ ಹಾದಿಯಲ್ಲಿ ಎರಡು ಮಿನಿ ಬಸ್ ಗಳು ಪ್ರವಾಸಿಗರನ್ನು ಕರೆದೊಯ್ಯುವ ಕಾಯಕದಲ್ಲಿ ತೊಡಗಿವೆ. ಈ ಬಸ್ಸುಗಳು ಪ್ರವಾಸಿಗರಿಂದ ದುಬಾರಿ ಶುಲ್ಕವನ್ನು ವಸೂಲಿ ಮಾಡುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಬಸ್ ಸಂಚಾರವನ್ನು ಸ್ಥಗಿತಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಗ್ರಾ.ಪಂ ಅಧ್ಯಕ್ಷರಾದ ರೀಟಾ ಮುತ್ತಣ್ಣ ಮಾತನಾಡಿ ನಗರಸಭೆಯ ಯುಜಿಡಿ ಯೋಜನೆಯಡಿ ಚರಂಡಿ ನಿರ್ಮಿಸುವ ಕಾಮಗಾರಿ ಕೆ.ನಿಡುಗಣೆ ಗ್ರಾ.ಪಂ. ರಸ್ತೆಗಳಲ್ಲೂ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕೆಂದರು.

ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ ಮಾತನಾಡಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಿ 5 ರಿಂದ 15 ಸೆಂಟ್ಸ್ ಜಾಗದಲ್ಲಿ ಗ್ರಾಮದ ಜನ ಮನೆ ನಿರ್ಮಿಸಿಕೊಳ್ಳಲು ಎನ್ಒಸಿ ನೀಡುವ ಸಂದರ್ಭ ತಕರಾರು ತೆಗೆಯುತ್ತಿದೆ. ಆದರೆ ದೊಡ್ಡ ಜಮೀನಿನಲ್ಲಿ ನಡೆಯುವ ಕಾಮಗಾರಿಗಳಿಗೆ ಸುಲಭವಾಗಿ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು. ಸಾಮಾನ್ಯ ವರ್ಗದ ಮಂದಿ ಮನೆಗಳನ್ನು ನಿರ್ಮಿಸಿಕೊಳ್ಳುವ ಸಂದರ್ಭ ಪ್ರಾಧಿಕಾರ ಅಗತ್ಯ ಸಹಕಾರ ನೀಡಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಜಾಜಿ ಸತೀಶ್ ಹಾಗೂ ಸದಸ್ಯರಾದ ಆನಂದ್ ಉಪಸ್ಥಿತರಿದ್ದರು.

See also  ಕೊಡಲಿಯಿಂದ ಕೊಚ್ಚಿ ವೃದ್ಧೆಯ ಕೊಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು