News Kannada
Monday, September 26 2022

ಕರ್ನಾಟಕ

ಉ.ಕನ್ನಡದಲ್ಲಿ ಗೂಡಂಗಡಿ ತೆರವಿಗೆ ಗ್ರಾಮಸ್ಥರಿಂದ ವಿರೋಧ - 1 min read

Photo Credit :

ಉ.ಕನ್ನಡದಲ್ಲಿ ಗೂಡಂಗಡಿ ತೆರವಿಗೆ ಗ್ರಾಮಸ್ಥರಿಂದ ವಿರೋಧ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮುದಗಾದಲ್ಲಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲು ಮುಂದಾಗಿದ್ದ ತಾಲೂಕಾಡತಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಬದಲು ಮೀನು ಮಾರುಕಟ್ಟೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

ಕಾರವಾರ ತಾಲೂಕಿನ ಬಿಣಗಾ, ಸಂಕ್ರುಭಾಗ, ಅರ್ಗಾ, ಚೆಂಡಿಯಾ, ಅಲಿಗದ್ದಾ, ಕೋಡಾರ, ಅಮದಳ್ಳಿಗಳಿಂದ ನಿರಾಶ್ರಿತರಾದವರಿಗೆ ಸರಕಾರ ಮುದಗಾದಲ್ಲಿ ಪುನರ್ ವಸತಿ ಕಲ್ಪಿಸಿದ್ದು, ಬಹುತೇಕ ಜನರು ಗೂಡಂಗಡಿ ಹಾಗೂ ಮೀನು ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇದೀಗ ಈ ಜಾಗದಲ್ಲಿ ಸಭಾಭವನ ನಿರ್ಮಾಣ ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿ ಉದ್ದೇಶಿಸಿದ್ದು, ಜಾಗವನ್ನು ಬಿಟ್ಟುಕೊಡಲು ಆದೇಶಿಸಿದೆ. ಅದರಂತೆ ಸೋಮವಾರ ಮುದಗಾ ಸ್ಥಳಕ್ಕೆ ಗೂಡಂಗಡಿಗಳನ್ನು ತೆರವುಗೊಳಿಸಲು ತಾಲ್ಲೂಕಡಳಿತ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ್ದು, ಗೂಡಂಗಡಿಗಳ ತೆರವಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಮುದಗಾ ಭಾಗದಲ್ಲಿ ಸಮುದಾಯ ಭವನದ ಅವಶ್ಯಕತೆ ಇಲ್ಲ. ಈಗಾಗಲೇ ಇಲ್ಲಿನ ಆಂಜನೇಯ ದೇವಸ್ಥಾನದ ಬಳಿ ಸಭಾಭವನದವಿದ್ದು, ಅಲ್ಲಿ ಬೇಕಾದಷ್ಟು ಸ್ಥಳಾವಕಾಶವಿದೆ. ಅದನ್ನು ಅಭಿವೃದ್ಧಿ ಪಡಿಸಬೇಕು. ಅದನ್ನು ಬಿಟ್ಟು ಗೂಡಂಗಡಿಗಳನ್ನು ತೆರವುಗೊಳಿಸುವುದರಿಂದ ಈ ಭಾಗದ ಜನರ ಜೀವನ ಕಷ್ಟವಾಗಲಿದೆ. ಇದರ ಬದಲು ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಬೇಕು. ಇಲ್ಲವೇ ಗೂಡಂಗಡಿಯನ್ನು ಮುಂದುವರೆಸಲು ಅವಕಾಶ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಈಗಾಗಲೇ ಈ ಹಿಂದಿನ ಜಿಲ್ಲಾಧಿಕಾರಿ ಉಜ್ವಲ್ಕುಮಾರ ಘೋಷ್ ಸ್ಥಳ ಪರಿಶೀಲನೆ ನಡೆಸಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ನಂತರ ಮೀನು ಮಾರುಕಟ್ಟೆ ಸ್ಥಾಪನೆ ಪ್ರಸ್ತಾವನೆ ಅರ್ಧಕ್ಕೆ ನಿಂತಿದೆ. ಈಗಲಾದರೂ ಮೀನು ಮಾರುಕಟ್ಟೆ ಒಳಗೊಂಡು ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿದರೆ ಗೂಡಂಗಡಿಯವರಿಗೂ, ಮೀನು ಮಾರಾಟಗಾರ ಮಹಿಳೆಯರಿಗೂ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದ್ದಾರೆ. ಕೊನೆಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳಲ್ಲಿ ಮನವಿ ಮಾಡಿದ ಸ್ಥಳಿಯರು ಇನ್ನು ಕೆಲ ದಿನಗಳ ಸಮಯವಕಾಶ ನೀಡುವಂತೆ ಕೋರಿದ್ದು, ಅದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ಪರಿಣಾಮ ತೆರವು ಕಾರ್ಯ ಸ್ಥಗೀತಗೊಂಡಿದೆ.

ಉದಯ ತಾಣಡೇಲ್, ಪ್ರಜ್ವಲ್ ಶೇಟ್, ವಿಜಯ್ ಹರಿಕಂತ್ರ, ಚಂದ್ರಕಾಂತ ದುರ್ಗೇಕರ್, ತೇಕು ದುರ್ಗೇಕರ್, ಪರ್ಸು ಹರಿಕಂತ್ರ, ಸುನೀಲ್ ಮಾಜಾಳಿಕರ್, ಚಂದ್ರಕಾಂತ ದುರ್ಗೇಕರ್, ಗಂಗೆ, ಸತೀಶ ಸುರ್ಗೇಕರ್ ಇದ್ದರು.

See also  ತ್ರಿವಳಿ ಶಿಶುಗಳಿಗೆ ಜನ್ಮ ನೀಡಿ ತಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು