News Kannada
Tuesday, September 27 2022

ಕರ್ನಾಟಕ

ವರದಿಗಾರನ ಮೇಲೆ ಹಲ್ಲೆ: ಪತ್ರಕರ್ತರಿಂದ ಪ್ರತಿಭಟನೆ - 1 min read

Photo Credit :

ವರದಿಗಾರನ ಮೇಲೆ ಹಲ್ಲೆ: ಪತ್ರಕರ್ತರಿಂದ ಪ್ರತಿಭಟನೆ

ಮಡಿಕೇರಿ: ತುಮಕೂರಿನಲ್ಲಿ ಕೆಲ ದಿನಗಳ ಹಿಂದೆ ಸುದ್ದಿ ವಾಹಿನಿಯೊಂದರ ವರದಿಗಾರನ ಮೇಲೆ ಕೆಲವು ರಾಜಕಾರಣಿಗಳು ಉದ್ದೇಶಪೂರ್ವಕವಾಗಿ ನಡೆಸಿರುವ ಹಲ್ಲೆ ಪ್ರಕರಣವನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಗರದ ಗಾಂಧಿ ಮಂಟಪದಲ್ಲಿ ಪತ್ರಕರ್ತರಿಂದ ಪ್ರತಿಭಟನೆ ನಡೆಯಿತು.

ಅಕ್ರಮ ಮರಳು ಗಣಿಗಾರಿಕೆ ಕುರಿತು ವರದಿ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿನ ಸುದ್ದಿವಾಹಿನಿಯ ವರದಿಗಾರ ವಾಗೀಶ್ ಎಂಬವರ ಮೇಲೆ ಕೆಲ ರಾಜಕಾರಣಿಗಳು ಗುಂಪುಗೂಡಿ ಹಲ್ಲೆ ನಡೆಸುವ ಮೂಲಕ, ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನು ಉಂಟುಮಾಡಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು.

ಸಮಾಜದ ಲೋಪದೋಷಗಳನ್ನು ತೋರಿಸುವ ಮೂಲಕ, ಸಮಾಜಕ್ಕೆ ಸರಿದಾರಿಯನ್ನು ತೋರುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ. ಇಂತಹ ಸಂದರ್ಭ ವರದಿ ಮಾಡುವವರನ್ನೇ ಗುರಿಯಾಗಿಸಿಕೊಂಡು ಹಲ್ಲೆ ಮಾಡಿ, ಅವರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನ ನಡೆಸಿರುವುದನ್ನು ತೀವ್ರವಾಗಿ ಖಂಡಿಸುವುದಲ್ಲದೆ, ಅಹಿತಕರ ಘಟನೆಗೆ ಕಾರಣರಾದವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಆನಂದ್ ಕೊಡಗು, ಸವಿತಾ ರೈ, ಬೊಳ್ಳಜ್ಜಿರ ಅಯ್ಯಪ್ಪ, ಗೋಪಾಲ್ ಸೋಮಯ್ಯ, ಸುಬ್ರಮಣಿ ಸಿದ್ದಾಪುರ ಸೇರಿದಂತೆ ಹಲವಾರು ಪತ್ರಕರ್ತರು ಪಾಲ್ಗೊಂಡರು.

See also  ಕೊಡಗು ರಿಲೀಫ್ ಸೆಲ್‍ನಿಂದ ಸಂತ್ರಸ್ತರಿಗೆ ನೆರವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು