News Kannada
Wednesday, September 28 2022

ಕರ್ನಾಟಕ

ಸಕ್ಕರೆ ರೂಪದಲ್ಲಿ ಮರಳು ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದರು! - 1 min read

Photo Credit :

ಸಕ್ಕರೆ ರೂಪದಲ್ಲಿ ಮರಳು ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದರು!

ಕಾಸರಗೋಡು: ಮರಳು ಸಾಗಾಟಕ್ಕೆ ಹಲವು ತಂತ್ರಗಳನ್ನು ಹೆಣೆಯುವ ಮಾಫಿಯಾ ಇದೀಗ ಸಕ್ಕರೆ ರೂಪದಲ್ಲಿ ಮರಳು ಸಾಗಾಟ ಮಾಡಿ ಸಿಕ್ಕಿಬಿದ್ದ ಘಟನೆ ತ್ರಿಕ್ಕರಿಪುರದಲ್ಲಿ ನಡೆದಿದೆ.

ಮಂಗಳೂರಿನಿಂದ ಕಣ್ಣೂರು ಕಡೆಗೆ ಬರುತ್ತಿದ್ದ ಲಾರಿಯನ್ನು ಚಂದೇರ ಠಾಣಾ ಪೊಲೀಸರು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಮಿನಿ ಕಂಟೈನರ್ ನಲ್ಲಿ ಸಕ್ಕರೆಯಂತೆ ಬಿಳಿ ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ಮೇಲ್ನೋಟಕ್ಕೆ ಸಕ್ಕರೆಯಂತೆ ಗೋಚರಿಸುತ್ತಿತ್ತು.

ಒಟ್ಟು 154 ಗೋಣಿಗಳಲ್ಲಿ ಮರಳು ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು.

ಲಾರಿ ಚಾಲಕ ಮಂಗಳೂರಿನ ಅಬ್ದುಲ್ ರಹಮಾನ್ (28) ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

See also  ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಬಂದ ಜಿಂಕೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು