News Kannada
Friday, October 07 2022

ಕರ್ನಾಟಕ

ಯುವಕನ ಹತ್ಯೆ ವಿರುದ್ಧ ಬಿಜೆಪಿ, ಸಂಘಪರಿವಾರ ಉಗ್ರ ಪ್ರತಿಭಟನೆ - 1 min read

Photo Credit :

ಯುವಕನ ಹತ್ಯೆ ವಿರುದ್ಧ ಬಿಜೆಪಿ, ಸಂಘಪರಿವಾರ ಉಗ್ರ ಪ್ರತಿಭಟನೆ

ಕಾರವಾರ: ಹೊನ್ನಾವರದ ಪರೇಶ ಮೇಸ್ತಾ ಸಾವಿನ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ನೀಡಿದ ಬಂದ್ ಕರೆಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಪಡುವಂತಾಯಿತು.

ಕಳೆದ ಕೆಲವು ದಿನಗಳ ಹಿಂದೆ ಹಿಂದು-ಮುಸ್ಲಿಂ ನಡುವೆ ನಡೆದ ಕ್ಲುಲಕ ಕಾರಣಕ್ಕೆ ಹೊನ್ನಾವರ ತಾಲೂಕಿನ ಚಂದಾವರದ ಘಟನೆಯಿಂದಾಗಿ ಅದೇ ತಾಲೂಕಿನ ಪರೇಶ ಮೇಸ್ತಾ ಎನ್ನುವ 21 ವರ್ಷದ ಯುವಕನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ಹಿಂದು ಪರ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.

ಸೋಮವಾರ ಈ ಪ್ರತಿಭಟನೆ ತೀವ್ರವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಐದು ತಾಲೂಕು ಸೇರಿದಂತೆ ಇನ್ನಿತರ ತಾಲೂಕಿನಲ್ಲಿ ಘಟನೆ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಒತ್ತಾಯ ಪೂರ್ವಕವಾಗಿ ಅಂಗಡಿ ಮಳಿಗೆಗಳನ್ನು ಮುಚ್ಚುವಂತೆ ಮಾಡಿದ್ದಾರೆ. ಅಲ್ಲದೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು ಒಂದು ತಾಸುಗಳ ಕಾಲ ತಡೆದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ನಗರದ ಲಂಡನ್ ಬ್ರಿಡ್ಜ್ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಾಕಿ ರಸ್ತೆ ತಡೆ ನಡೆಸಿ ಪ್ರತಿಭಟನೆ ತೀವ್ರಗೊಳಿಸಿದರು. ಸುಮಾರು ಎರಡು ತಾಸಿಗೂ ಹೆಚ್ಚಿನ ಸಮಯ ರಸ್ತೆ ತಡೆಮಾಡಿ ಪ್ರತಿಭಟಿಸಿದರು. ಈ ನಡುವೆ ಬೆಂಕಿ ಆರಿಸಲು ಆಗಮಿಸಿದ್ದ ಅಗ್ನಿಶಾಮಕ ದಳದ ವಾಹನದ ಮುಂಭಾಗದ ಗಾಜಿಗೆ ಕಾರ್ಯಕರ್ತರು ಕಲ್ಲು ಹೊಡೆದು ಗಾಜು ಪುಡಿ ಮಾಡಿದರು.

ಪೊಲೀಸ್ ಸಿಬ್ಬಂದಿ ಕೊರತೆ
ಪ್ರತಿಭಟನೆಯ ಭಾಗವಾಗಿ ಅನೇಕ ಪೊಲೀಸರು ಕುಮಟಾ, ಹೊನ್ನಾವರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸರನ್ನು ನಿಯೋಜಿಸಿದ್ದರು. ಕಾರವಾರದ ಪ್ರತಿಭಟನೆ ತೀವ್ರವಾಗಿ ನಡೆದಿದ್ದರಿಂದ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗದೆ ಇನ್ನಷ್ಟು ಪೊಲೀಸರನ್ನು ಸ್ಥಳಕ್ಕೆ ತರಲಾಯಿತು.
ಟ್ರಾಫಿಕ್ ಜಾಮ್: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು ಎರಡು ತಾಸಿಗೂ ಹೆಚ್ಚಿನ ಸಮಯ ರಸ್ತೆ ತಡೆ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಹಾಗೂ ಸರಕಾರಿ ವಾಹನ ಸವಾರರು ತೊಂದರೆ ಪಡುವಂತಾಯಿತು. ವಿವಿಧ ಕಾರ್ಯದ ನಿಮಿತ್ತ ಗೋವಾ, ಗೋವಾದಿಂದ ಬೇರೆ ಜಿಲ್ಲೆಗೆ ತೆರಳುವವರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ತೀವ್ರ ತೊಂದರೆ ಪಡುವಂತಾಯಿತು. ಮದುವೆಗೆ ತೆರಳಬೇಕಾಗಿದ್ದ ದಿಬ್ಬಣಕ್ಕೂ ಪ್ರತಿಭಟನಾಕಾರರು ಮುಂದೆ ತೆರಳಲು ಅವಕಾಶ ನೀಡದೆ ಇದ್ದರಿಂದ ನಡೆದುಕೊಂಡು ಸಾಗಿದರು. ಸುಮಾರು ಮೂರು ಕಿ.ಮೀನಷ್ಟು ವಾಹನ ರಸ್ತೆಯಲ್ಲೇ ನಿಂತಿದ್ದವು.

ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಕುಮಟಾದಲ್ಲೂ ಪ್ರತಿಭಟನೆ ತೀವ್ರವಾಗಿ ನಡೆಸಿದೆ. ರೊಚ್ಚಿಗೆದ್ದ ಜನರು ಕುಮಟಾ ತಾಲೂಕಿನಲ್ಲಿ ಪೊಲೀಸರ ವಾಹನಗಳಿಗೂ ಹಾನಿ ಮಾಡಿದ್ದಾರೆ.

See also  ಕ್ಯಾಮರಾವನ್ನು ಕೋವಿಯೆಂದು ಭ್ರಮಿಸಿ ಓಡಿದ ಸಾಕಾನೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು