News Kannada
Thursday, October 06 2022

ಕರ್ನಾಟಕ

`ಕನ್ನಡ ಗ್ರಾಮೀಣ ಸೊಡಗಿನ ಭಾಷೆ, ಹೆಮ್ಮೆಯಿಂದ ಸ್ವೀಕರಿಸಿ’ - 1 min read

Photo Credit :

`ಕನ್ನಡ ಗ್ರಾಮೀಣ ಸೊಡಗಿನ ಭಾಷೆ, ಹೆಮ್ಮೆಯಿಂದ ಸ್ವೀಕರಿಸಿ'

ಕಾಸರಗೋಡು: ಗ್ರಾಮೀಣ ಸೊಗಡಿನ ಭಾಷೆ ಕನ್ನಡವಾಗಿದ್ದು, ತನ್ನ ಸಾಹಿತ್ಯಿಕ, ಸಾಂಸ್ಕೃತಿಕ ವೈವಿಧ್ಯತೆಯಿಂದ ಭಾಷೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಕನ್ನಡ ಭಾಷಿಗರಿರುವ ಪ್ರತಿ ಜಿಲ್ಲೆಗೂ ತನ್ನದೆ ಆದ ವೈಶಿಷ್ಟ್ಯಗಳಿವೆ, ಇಂತಹ ವಿಶೇಷತೆಗಳನ್ನು ಹೆಮ್ಮೆಯಿಂದ ಸ್ವೀಕರಿಸಿ ಮುನ್ನಡೆಯಬೇಕಿದೆ ಎಂದು ಕರ್ನಾಟಕ ಸರಕಾರ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮೀ ಬಸವಲಿಂಗರಾಜು ಹೇಳಿದರು.

ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕಯ್ಯಾರು ಡಾನ್ ಬಾಸ್ಕೋ ಶಾಲೆಯಲ್ಲಿ ನಡೆದ ಸಾಹಿತ್ಯ-ಸಾಂಸ್ಕೃತಿಕ ಪಯಣ-5 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು, ಕನ್ನಡದ ನಾಡು ನುಡಿಗೆ ಕೊಡುಗೆ ನೀಡಿದ ಎಲ್ಲ ಮಹನೀಯರ ಸ್ಮರಣೆಯ ಮೂಲಕ ನಶಿಸುತ್ತಿರುವ ಗ್ರಾಮೀಣ ಕಲೆಗಳ, ಜಾನಪದ ಪ್ರಕಾರಗಳ ರಕ್ಷಣೆ ಆಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್ ಮೂಡಿತ್ತಾಯ ಮಾತನಾಡಿ ಕಲೆ ಹಾಗೂ ಸಾಹಿತ್ಯ ವ್ಯಕ್ತಿತ್ವವನ್ನು ಬೆಳೆಸುತ್ತದೆ, ವಿದ್ಯಾರ್ಥಿಗಳು ಎಳವೆಯಲ್ಲಿ ಇಂತಹ ಕಲೆ ಹಾಗೂ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕಿದೆ ಎಂದರು. ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯು ಹಲವು ಕ್ರಿಯಾತ್ಮಕ ವ್ಯಕ್ತಿಗಳನ್ನು ಒಟ್ಟುಗೂಡಿಸಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಬಾಲಪ್ರತಿಭೆಗಳಾದ ತನ್ವಿ ಕೆ.ಟಿ ಕಾಸರಗೋಡು, ಆದರ್ಶ ಯಾದವ್, ಯಜ್ನುಶಾ ಕೆ.ಎಸ್‍ ಅವರನ್ನು ಅಭಿನಂದಿಸಲಾಯಿತು. ಜ್ಯೋತಿಶಿ ಹಾಗೂ ಧಾರ್ಮಿಕ ಮುಂದಾಳು ಕೃಷ್ಣಮೂರ್ತಿ ಪುದುಕೋಳಿ, ಫೈನ್‍ಆರ್ಟ್ಸ್ ನ ಕಲಾವಿದ ಮನೀಷ್‍ ಕೂಡ್ಲು, ಹಿರಿಯ ಕೃಷಿಕ ಬೆಳ್ಳೂರಿನ ಪ್ರಭಾಕರ ಕಲ್ಲೂರಾಯ, ಸಾಹಿತಿ ಹಾಗೂ ಕಸೂತಿ ಪ್ರವೀಣೆ ಶಶಿಕಲಾ ಬಾಯಾರು ಅವರನ್ನು ವೆಂಕಟಲಕ್ಷ್ಮೀ ಬಸವಲಿಂಗರಾಜು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್ ಪಂ. ಸದಸ್ಯ ಪ್ರಸಾದ್‍ ಕಯ್ಯಾರು, ಕೇರಳ ರಾಜ್ಯ ಬ್ಯಾರಿ ಪರಿಷದ್ ಸದಸ್ಯ ಝಡ್. ಎಕಯ್ಯಾರ್, ಕರ್ನಾಟಕ ಜಾನಪದ ಅಕಾಡೆಮಿ ಗಡಿನಾಡ ಘಟಕದ ಅಧ್ಯಕ್ಷ ಅಬ್ದುಲ್‍ ರಹಿಮಾನ್ ಸುಬ್ಬಯ್ಯಕಟ್ಟೆ ಶುಭಾಶಂಸನೆಗೈದರು. ಸಂಧ್ಯಾಗೀತಾ ಬಾಯಾರು, ವಿದ್ಯಾಗನೇಶ್ ಅಣಂಗೂರು, ಸ್ಮಿತಾ ಕಿಶೋರ್, ಅಶ್ವಿನ್ ಯಾದವ್‍ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು, ಅಖಿಲೇಶ್ ಯಾದವ್ ಸ್ವಾಗತಿಸಿದರು, ಕಯ್ಯಾರು ಶಾಲೆಯ ಮುಖ್ಯೋಪಾಧ್ಯಾಯ ಲೂಯಿಸ್ ಮೊಂತೇರೋ ಧನ್ಯವಾದಗೈದರು, ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗಾಗಿ ವ್ಯಂಗ್ಯ ಚಿತ್ರ ಕಮ್ಮಟ ನಡೆಯಿತು, ಸಂಪನ್ಮೂಲ ವ್ಯಕ್ತಿಯಾಗಿ ವಿರಾಜ್‍ ಅಡೂರು ಸಹಕರಿಸಿದರು. ಶಶಿಕಲಾ ಬಾಯಾರು ಅವರ ಕಸೂತಿ ಕಲೆಯ ಪ್ರದರ್ಶನ ಮಾಹಿತಿ ಕಾರ್ಯಕ್ರಮ ನಡೆಯಿತು.

See also  ಪ್ರಸಾದ ಸೇವಿಸಿ ಬಾಲಕ ಮೃತ್ಯು: 17 ಮಂದಿ ಅಸ್ವಸ್ಥ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು