News Kannada
Thursday, September 29 2022

ಕರ್ನಾಟಕ

ಚಿಕ್ಕಾರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ: ಭತ್ತ ನಾಶ - 1 min read

Photo Credit :

ಚಿಕ್ಕಾರ ಗ್ರಾಮದಲ್ಲಿ  ಕಾಡಾನೆಗಳ ಹಾವಳಿ: ಭತ್ತ ನಾಶ

ಸೋಮವಾರಪೇಟೆ:  ಭತ್ತದ ಕಣಕ್ಕೆ ಲಗ್ಗೆ ಹಾಕಿದ ಕಾಡಾನೆಗಳು, ಸಂಗ್ರಹಿಸಿಟ್ಟಿದ್ದ ಭತ್ತವನ್ನು ತಿಂದಿರುವ ಘಟನೆ ಶನಿವಾರ ರಾತ್ರಿ ಸಮೀಪದ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಾರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಮಹಿಳೆ ಕುಸುಮ ಎಂಬುವರ ಕಣದಲ್ಲಿ ಬಡಿದ ಭತ್ತವನ್ನು ಮೂಟೆಗಳಲ್ಲಿ ಕಟ್ಟಿ ಇಡಲಾಗಿತ್ತು. ಶನಿವಾರ ಮದ್ಯರಾತ್ರಿ ಮಾಲಂಬಿ ಮೀಸಲು ಅರಣ್ಯದಿಂದ ಆಹಾರ ಅರಸುತ್ತ ಗ್ರಾಮ ಸೇರಿದ ಕಾಡಾನೆಗಳಿಗೆ ಭರ್ಜರಿ ಬೇಟೆಯೆ ಸಿಕ್ಕಿದೆ.

ಕಣದಲ್ಲಿದ್ದ 25 ಚೀಲಗಳನ್ನು ಎಳೆದಾಡಿ ಸುಮಾರು 10ಕ್ವಿಂಟಾಲ್ ಭತ್ತವನ್ನು ತಿಂದಿವೆ. ಭತ್ತ ನಾಟಿ ಮಾಡಿದ ದಿನದಿಂದಲೂ ಬೆಳೆಯ ರಕ್ಷಣೆಗೆ ಹೆಚ್ಚಿನ ಆಸಕ್ತಿ ವಹಿಸಲಾಗಿತ್ತು. ಅಕಾಲಿಕ ಮಳೆ, ಕಾಡು ಪ್ರಾಣಿಗಳು ತಿಂದು ಉಳಿದ ಫಸಲನ್ನು ಕಣಕ್ಕೆ ತಂದು ಸಂಗ್ರಹಿಸಿಡಲಾಗಿತ್ತು. ಈಗ ಕಾಡಾನೆಗಳ ಅದನ್ನು ತಿಂದಿವೆ. ಕೈಗೆ ಬಂದ ತುತ್ತು ಬಾಯಿಯೆ ಬರಲಿಲ್ಲ ಎಂದು ರೈತಮಹಿಳೆ ಕುಸುಮ ನೋವು ತೋಡಿಕೊಂಡರು. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಮನವಿ ಮಾಡಿದರು.

ಕಾಡಾನೆಗಳ ಪೀಡಿತ ಪ್ರದೇಶದಲ್ಲಿ ಕೂಗೂರು ಗ್ರಾಮದಿಂದ ಅಬ್ಬೂರುಕಟ್ಟೆ ವರಗೆ 8 ಕಿ.ಮೀ. ವ್ಯಾಪ್ತಿಯಲ್ಲಿ ಆನೆ ಕಂದಕ ನಿಮರ್ಿಸಲಾಗಿದೆ. ಮಾದಗಿತ್ತಿಕೆರೆ, ಎಮ್ಮೆಗುಂಡಿ ಸಮೀಪದ ಕಂದಕವನ್ನು ದಾಟಿ ಕಾಡಾನೆಗಳು ಗ್ರಾಮಕ್ಕೆ ನುಸುಳಿ ಫಸಲು ನಷ್ಟಪಡಿಸುತ್ತಿವೆ. ಆದರೆ ಅರಣ್ಯ ಇಲಾಖೆಯಿಂದ ಸೂಕ್ತ ಸಮಯದಲ್ಲಿ ಫಸಲು ನಷ್ಟದ ಪರಿಹಾರ ಸಿಗುತ್ತಿಲ್ಲ.

ರೈತರು ಬದುಕುವುದಾದರೂ ಹೇಗೆ ಎಂದು ಗೌಡಳ್ಳಿ ಗ್ರಾಪಂ ಸದಸ್ಯ ಹೇಮಂತ್ ಹೇಳಿದರು.  ಕೂಡ ಕಂದಕ ದುರಸ್ತಿ ಪಡಿಸಲು ಇಲಾಖೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೂಗೂರು ಬೆಟ್ಟ, ಕಾಟಿಕಲ್ಲು ಬೆಟ್ಟದಲ್ಲಿ ಕಲ್ಲುಬಂಡೆಗಳಿದ್ದು, ಆನೆ ಕಂದಕ ನಿಮರ್ಿಸಲು ಅಸಾಧ್ಯವಾಗಿದೆ. ಹಿಟಾಚಿ ತೆರಳುತ್ತಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ, ಕಾಡಾನೆ ಹಾವಳಿ ತಡೆಗಟ್ಟಲು ಕ್ರಮಕೈಗೊಳ್ಳಲಿದ್ದಾರೆ. ಕಾಡಾನೆಗಳು ಭತ್ತ ತಿಂದಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಗಣೇಶ್ ಹೇಳಿದರು.

See also  ದೊಡ್ಡಪೇಟೆಯಲ್ಲಿ ನಡೆದ ಜೀವನ್ ಕೊಲೆ ಪ್ರಕರಣ; ಏಳು ಜನ ಆರೋಪಿಗಳ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು