News Kannada
Sunday, September 25 2022

ಕರ್ನಾಟಕ

ಹುಬ್ಬಳ್ಳಿಯಲ್ಲಿ ಚಾಲಕಿ ಕಳ್ಳಿಯರ ಬಂಧನ - 1 min read

Photo Credit :

ಹುಬ್ಬಳ್ಳಿಯಲ್ಲಿ ಚಾಲಕಿ ಕಳ್ಳಿಯರ ಬಂಧನ

ಕಾರವಾರ: ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿದ ಮೂವರು ಚಾಲಕಿ ಮಹಿಳೆಯರನ್ನು ಕಾರವಾರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹಳೇ ಹುಬ್ಬಳ್ಳಿಯ ಶಿಲ್ಪಾ, ರೇಣುಕಾ ಹಾಗೂ ಗಂಗವ್ವ ಬಂಧಿತ ಮಹಿಳೆಯರು. ಹಾವೇರಿ ಪ್ರಕರಣವೊಂದರಲ್ಲಿ ಈ ಮಹಿಳೆಯರು ಬಂಧಿತರಾಗಿದ್ದ ಅವರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲಾಗಿದೆ. ಕಾರವಾರದಲ್ಲಿ ಕಳ್ಳತನವಾದ ಅಂಗಡಿಗೆ ತೆರಳಿ ಪಂಚನಾಮೆ ನಡೆಸಲಾಗಿದ್ದು ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ.

ಹಾವೇರಿ, ಬೈಲಹೊಂಗಲ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಮೂವರ ವಿರುದ್ಧ ಪ್ರಕರಣಗಳಿವೆ. ಕಳೆದ ಆಗಷ್ಟ್ ೩೧ರಂದು ನಗರದ ಡಾ. ಕಮಲಾಕರ್ ರಸ್ತೆಯಲ್ಲಿರುವ ಮಂಗೇಶ ಕುಡ್ತಲಕರ್ ಅವರಿಗೆ ಸೇರಿದ ಕನ್ಯಾಕುಮಾರಿ ಜುವೆಲ್ಲರ್ಸ್ನ ಶೇಟರ್ ಮರಿದು ೧೫ ಸಾವಿರ ರೂ. ಬೆಳ್ಳಿ ಸಾಮಗ್ರಿಗಳನ್ನು ಕಳುವು ಮಾಡಿದ್ದರು.

ಬಂಗಾರ ಎಂದು ತಿಳಿದು ಸಾಕಷ್ಟು ಆಭರಣಗಳನ್ನು ಇವರು ಕಳವು ಮಾಡಿದ್ದರು. ಆದರೆ ಅವು ನಕಲಿಯಾಗಿದ್ದವು. ಬೆರಳಚ್ಚಿನ ಆಧಾರದ ಮೇಲೆ ಸಿಪಿಐ ಶಿವಕುಮಾರ್, ಪಿಎಸ್ಐ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

See also  ಅರಣ್ಯ ಇಲಾಖೆಯಲ್ಲಿ ನವೀಕರಣ ಕಾಮಗಾರಿಯಲ್ಲಿ ಗೋಲ್ಮಾಲ್?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು