News Kannada
Thursday, September 29 2022

ಕರ್ನಾಟಕ

ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ: ಸದಾನಂದ ಗೌಡ - 1 min read

Photo Credit :

ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ: ಸದಾನಂದ ಗೌಡ

ಕಾಸರಗೋಡು: ಕೃಷಿ ವಲಯದ ಸಮಗ್ರವಾದ ಪ್ರಗತಿ ಕೇಂದ್ರ ಸರಕಾರದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಪ್ರೋತ್ಸಾಹ ನೀಡುತ್ತಿದೆ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದರು.

ಅವರು ಸೋಮವಾರ ಕಾಸರಗೋಡು ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರ (ಸಿಪಿಸಿಆರ್ ಐ ) ನಲ್ಲಿ ಕಿಸಾನ್ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕರಾವಳಿಯ ಪ್ರಮುಖ ಬೆಳೆಯಾದ ಅಡಿಕೆ, ತೆಂಗು, ಕಾಳುಮೆಣಸು ಹಾಗೂ ಇತರ ಮುಖ್ಯ ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಘೋಷಿಸಿದೆ. ಬೆಲೆ ಇಳಿಕೆಯಾಗದಂತೆ ಕ್ರಮ ತೆಗೆದುಕೊಂಡಿದ್ದು, ಕೃಷಿಕರಿಗೆ ಉತ್ತೇಜನ ನೀಡುವ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುವ ಅಗತ್ಯ ಎಂದು ಹೇಳಿದರು.

ಸಂಸದ ಪಿ. ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಸಿಆರ್ ಐನ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅಂಚೆ ಚೀಟಿಯನ್ನು ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಅಂಚೆ ಇಲಾಖೆಯ ಕೋಜಿಕ್ಕೋಡ್ ವಲಯ ಮುಖ್ಯಸ್ಥ ಎಸ್. ಎಫ್. ಎಚ್ ರಿಜ್ವಿ ಬಿಡುಗಡೆಗೊಳಿಸಿದರು.

ಬೆಳೆಗಳ ಮಾಹಿತಿ ಕುರಿತ ಐದು ಪುಸ್ತಕ ಹಾಗೂ ಸಿಪಿಸಿಆರ್ ಐನ ನೂತನ ಉತ್ಪನ್ನಗಳನ್ನು ಕೇಂದ್ರ ಸಚಿವರು ಬಿಡುಗಡೆಗೊಳಿಸಿದರು.

ಉತ್ತಮ ಕೃಷಿಕರಾದ ಸಿಬಿ ಜೋಸೆಫ್, ಬಂಟ್ವಾಳದ ರಾಮಕಿಶೋರ್ ಮತ್ತು ಸುಳ್ಯದ ವಿಶ್ವನಾಥ ರಾವ್ ಅವರನ್ನು ಸಚಿವರು ಸನ್ಮಾನಿಸಿದರು.

ಶಾಸಕ ಎನ್. ಎ. ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ .ಸಿ ಬಶೀರ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ. ಎ. ಜಲೀಲ್, ಐ ಸಿ ಎ ಆರ್ ನಿರ್ದೇಶಕ ಡಾ . ಎ. ಕೆ ಸಿಂಗ್, ಸಿಪಿಸಿ ಆರ್ ಐ ನಿರ್ದೇಶಕ ಡಾ . ಪಿ ಚೌಡಪ್ಪ, ಕೃಷಿ ಅಧಿಕಾರಿ ಟಿ . ಆರ್ ಉಷಾದೇವಿ, ಡಾ. ಮನೋಜ್ ಕುಮಾರ್, ಡಾ. ಸಿ. ತಂಬಾನ್ ಮೊದಲಾದವರು ಮಾತನಾಡಿದರು.

See also  ಶ್ರೀರಾಮಚಂದ್ರಾಪುರ ಮಠದಿಂದ ಕೊಡಗಿನಲ್ಲಿ ಜಾನುವಾರುಗಳಿಗೆ ಮೇವು ವಿತರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು