News Kannada
Tuesday, December 06 2022

ಕರ್ನಾಟಕ

ಲವ್ ಜಿಹಾದ್, ಗೋಹತ್ಯೆ ತೊಡೆದು ಹಾಕಲು ಜನರು ಸಂಘಟಿತರಾಗಬೇಕು: ಹರೀಶ್ ಪೂಂಜ

Photo Credit :

ಲವ್ ಜಿಹಾದ್, ಗೋಹತ್ಯೆ ತೊಡೆದು ಹಾಕಲು ಜನರು ಸಂಘಟಿತರಾಗಬೇಕು: ಹರೀಶ್ ಪೂಂಜ

ಬೆಳ್ತಂಗಡಿ: ನಮ್ಮರಾಷ್ಟ್ರ, ಧರ್ಮ, ಅಸ್ಮಿತೆಯನ್ನು ಉಳಿಸಿಕೊಂಡು, ಲವ್ ಜಿಹಾದ್, ಗೋ ಹತ್ಯೆ, ಮತಾಂತರ, ಭಯೋತ್ಪಾದನೆಯಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಜನರೆಲ್ಲ ಸಂಘಟಿತರಾಗ ಬೇಕೆಂದು ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚ ಅಧ್ಯಕ್ಷ ಹರೀಶ್ ಪೂಂಜ ಹೇಳಿದರು.

ಅವರು ದಿಡುಪೆಯ ಬಸ್ ನಿಲ್ದಾಣದ ಬಳಿ ನಡೆದ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನೋತ್ಸವ ಆಚರಣೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಅಂದು ವಿವೇಕಾನಂದರು ದೇಶಕಟ್ಟಲು ನೂರುಯುವಕರನ್ನು ಕೊಡಿ ಎಂದು ಕೇಳಿದ್ದರು. ಇಂದು ನಾವು ಪ್ರತಿ ಗ್ರಾಮಗಳಲ್ಲಿ ನೂರು ಯುವಕರನ್ನು ಒಗ್ಗೂಡಿಸಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದರು.

ಮಲವಂತಿಗೆ ಗ್ರಾ.ಪಂ. ಸದಸ್ಯರಾದ ಕೇಶವ ಕುದ್ಮಾನ್ ಮಾತನಾಡಿ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ, ದಬ್ಬಾಳಿಕೆಯನ್ನು ತಡೆಯಲು ಸಂಘಟಿತರಾಗಿ ಹೋರಾಡಬೇಕೆಂದು ಹೇಳಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ದಿನೇಶ್ ಗೌಡ, ಮಿತ್ತಬಾಗಿಲು ಗ್ರಾ.ಪಂ ಸದಸ್ಯೆ ಕಮಲ, ಜಯವರ್ಮ ಗೌಡ ಕಲ್ಬೆಟ್ಟು, ಅಂಕುಶ್ ಗೌಡ, ಪ್ರಮೋದ್, ಹರೀಶ್ ಎಳನೀರು ಮೊದಲಾದವರು ಉಪಸ್ಥಿತರಿದ್ದರು.

See also  ಸಾರ್ವಜನಿಕರಿಗೆ ತೊಂದರೆ: ಶಾಸಕ ರೇಣುಕಾಚಾರ್ಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು