News Kannada
Sunday, November 27 2022

ಕರ್ನಾಟಕ

ವಿಕಲಚೇತನರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ, ಹುದ್ದೆಗಳ ಸಮಾನ ಹಂಚಿಕೆ ಒತ್ತಾಯ - 1 min read

Photo Credit :

ವಿಕಲಚೇತನರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ, ಹುದ್ದೆಗಳ ಸಮಾನ ಹಂಚಿಕೆ ಒತ್ತಾಯ

ಚಿಕ್ಕಮಗಳೂರು: ವಿಕಲಚೇತನರಿಗೆ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು, ವಿಕಲಚೇತನ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ನಗರದ ಶಿಕ್ಷಕರ ಸದನದಲ್ಲಿ ರಾಜ್ಯ ಮಟ್ಟದ ವಿಕಲಚೇತನ ನೌಕರರ ಸಮ್ಮೇಳನ ಹಾಗೂ ವಿಕಲಚೇತನರಿಗೆ ವಿವಿಧ ವಿಕಲತೆಗೆ ಅನುಗುಣವಾಗಿ ಹುದ್ದೆಗಳನ್ನು ಹಂಚಿಕೆ ಮಾಡಬೇಕು ಹಾಗೂ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ರಾಜ್ಯ ಮಟ್ಟದ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಕಲಚೇತನರ ಇಲಾಖೆಯು ಮಹಿಳಾ ಮತ್ತು ಮಕ್ಕಳು ಅಭಿವೃದ್ದಿ ಹಾಗೂ ಹಿರಿಯ ನಾಗರಿಕರನ್ನು ಒಳಗೊಂಡ ಇಲಾಖೆಯಾಗಿದೆ.

ಇದರಿಂದ ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಅವರಿಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನವನ್ನು ಹರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಕಲವೇತನರಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿದರೆ ಮಾತ್ರ ವಿಕಲಚೇತನರ ಸಮಗ್ರ ಅಭಿವೃದ್ದಿಯನ್ನು ಕಾಣಲು ಸಾಧ್ಯವಾಗುತ್ತದೆ.

ಸಮಾನ ರೀತಿಯಲ್ಲಿ ಹುದ್ದೆಗಳ ಹಂಚಿಕೆ: ಈಚೆಗೆ ಲೋಕಸೇವಾ ಆಯೋಗದಿಂದ ನಡೆಸಲಾದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನೇಮಕ, ಉಪನ್ಯಾಸಕರ ನೇಮಕ, ಕೆಎಎಸ್ ನೇಮಕಾತಿಯು ಸೇರಿದಂತೆ ಅನೇಕ ನೇಮಕಾತಿಯಲ್ಲಿ ಚಲನೆಯ ನ್ಯೂನತೆಯುಳ್ಳ ವಿಕಲಚೇತನ ಅಭ್ಯರ್ಥಿಗಳಿಗೆ ಸಮಾನವಾದ ಹುದ್ದೆಗಳನ್ನು ಹಂಚಿಕೆ ಮಾಡಿರುವುದಿಲ್ಲ.

ವಿವಿಧ ವಿಕಲತೆಗೆ ಅನುಸಾರವಾಗಿ ವಿಕಲಚೇತನರಿಗೆ ಸಮಾನ ಹುದ್ದೆಗಳನ್ನು ಹಂಚಿಕೆ ಮಾಡದೇ ಕೇವಲ ಅಂಧ ಅಭ್ಯರ್ಥಿಗಳಿಗೆ ಮಾತ್ರ ಹೆಚ್ಚಿನ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಇತರೆ ವಿಕಲಚೇನರಿಗೆ ಅನ್ಯಾಯವಾಗುತ್ತಿದೆ. ನೇಮಕಾತಿ ಸಮಯದಲ್ಲಿ ವಿವಿಧ ವಿಕಲಚೇತನರಿಗೆ ಸಮಾನವಾದ ರೀತಿಯಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಬೇಕು.

ಬಡ್ತಿ ಮಿಸಲಾತಿ ಆದೇಶ ಜಾರಿಗೆ ಒತ್ತಾಯ: ಸುಪ್ರೀಂಕೋರ್ಟನ ಆದೇಶದಂತೆ ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ 3 ರಷ್ಟು ಬಡ್ತಿ ಮೀಸಲಾತಿಯನ್ನು ಜಾರಿಗೊಳಿಸುವಂತೆ ಆದೇಶ ಮಾಡಿ 2 ವರುಷ ಕಳೆದರು ಕೂಡಾ ಆದೇಶ ಜಾರಿಗೆ ಮಾಡಿಲ್ಲ. ಈಗಾಗಲೇ ಅನೇಕ ಇಲಾಖೆಗಳಲ್ಲಿ ಬಡ್ತಿ ನೀಡುವುದರಿಂದ ಈ ಸೌಲಭ್ಯದಿಂದ ವಿಕಲಚೇತನ ನೌಕರರು ವಂಚಿತರಾಗುತ್ತಿದ್ದು, ಆದೇಶ ಶೀಘ್ರವೇ ಜಾರಿಗಳಿಸಬೇಕು.

 

See also  ಹೆಲ್ಮೆಟ್ ಹಾಕಿದವರಿಗೆ ಹೂಹಾರದ ಗೌರವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು