News Kannada
Wednesday, December 07 2022

ಕರ್ನಾಟಕ

ಸೋಮವಾರಪೇಟೆ ಜೀವನ್ ಪ್ರತಿನಿಧಿಸಿದ್ದ ತಂಡಕ್ಕೆ ಸ್ವರ್ಣ ಪದಕ

Photo Credit :

ಸೋಮವಾರಪೇಟೆ ಜೀವನ್ ಪ್ರತಿನಿಧಿಸಿದ್ದ ತಂಡಕ್ಕೆ ಸ್ವರ್ಣ ಪದಕ

ಸೋಮವಾರಪೇಟೆ: ಇಂಡೋನೇಷಿಯಾದ ಜಕಾರ್ತದಲ್ಲಿ ಫೆ.11ರಿಂದ 15ರ ವರೆಗೆ ನಡೆದ 18ನೇ ಇನ್ವಿಟೇಷನ್ ಏಷಿಯನ್ ಗೇಮ್ಸ್ ಚಾಂಪಿಯನ್ಶಿಪ್ ನ ರಿಲೇ ವಿಭಾಗದಲ್ಲಿ ಸೋಮವಾರಪೇಟೆಯ ಜೀವನ್ ಪ್ರತಿನಿಧಿಸಿದ್ದ ಭಾರತ ತಂಡ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದೆ.

ಪಂಜಾಬ್ ನ ಪಾಟಿಯಾಲದಲ್ಲಿರುವ ಇಂಡಿಯನ್ ನ್ಯಾಷನಲ್ ಕ್ಯಾಂಪ್ ನಲ್ಲಿರುವ ಜೀವನ್ ಸೇರಿದಂತೆ ಇತರ ಮೂವರು ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 4X400 ರಿಲೇ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರೊಂದಿಗೆ ಕೇರಳದ ಕುನ್ಹು ಮಹಮ್ಮದ್, ಜೀತು ಬೇಬಿ, ಉತ್ತರ ಪ್ರದೇಶದ ಸುಮಿತ್ ಕುಮಾರ್ ಅವರುಗಳು ತಂಡದಲ್ಲಿದ್ದು, ಅಮೆರಿಕಾದ ತರಬೇತುದಾರರಾದ ಪಿ.ಬಿ. ಗಲೀನಾ ಅವರು ಈ ನಾಲ್ವರಿಗೆ ತರಬೇತಿ ನೀಡಿದ್ದಾರೆ.

ಚಾಂಪಿಯನ್ ಶಿಪ್ ಕ್ರೀಡಾಕೂಟದ ರಿಲೇ ವಿಭಾಗದಲ್ಲಿ ಚೈನೀಸ್ ಟೈ ಫೈ ತಂಡ ದ್ವಿತೀಯ ಹಾಗೂ ಶ್ರೀಲಂಕಾ ತಂಡ ತೃತೀಯ ಸ್ಥಾನ ಪಡೆದಿದೆ.

ಕರ್ನಾಟಕದಿಂದ ಏಕೈಕ ಕ್ರೀಡಾಪಟುವಾಗಿ ಪಾಲ್ಗೊಂಡಿದ್ದ ಜೀವನ್, ಸೋಮವಾರಪೇಟೆ ಸಮೀಪದ ಕಾರೇಕೊಪ್ಪ ಗ್ರಾಮದ ಕೆ.ಪಿ. ಸುರೇಶ್ ಮತ್ತು ಶಕುಂತಲಾ ದಂಪತಿ ಪುತ್ರನಾಗಿದ್ದು, ಪ್ರಸ್ತುತ ಬೆಂಗಳೂರಿನ ಕೇಂದ್ರ ಅಂಚೆ ಇಲಾಖೆ ನೌಕರರಾಗಿದ್ದಾರೆ.

See also  ಭೂ ವಿಜ್ಞಾನ ಇಲಾಖೆ ಅಧಿಕಾರಿಯಿಂದ ಕಾನೂನು ದುರ್ಬಳಕೆ: ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು