News Kannada
Thursday, October 06 2022

ಕರ್ನಾಟಕ

ಹುತಾತ್ಮ ಪಿಎಸ್ ಐ ಮಲ್ಲಿಕಾರ್ಜುನ್ ಬಂಡೆ ಮಕ್ಕಳನ್ನು ದತ್ತು ಪಡೆದ ಅಮಿತ್ ಶಾ - 1 min read

Photo Credit :

ಹುತಾತ್ಮ ಪಿಎಸ್ ಐ ಮಲ್ಲಿಕಾರ್ಜುನ್ ಬಂಡೆ ಮಕ್ಕಳನ್ನು ದತ್ತು ಪಡೆದ ಅಮಿತ್ ಶಾ

ಕಲಬುರಗಿ: ಹುತಾತ್ಮ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಅವರ ಇಬ್ಬರು ಮಕ್ಕಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದತ್ತು ಪಡೆದಿದ್ದಾರೆ. ಬಂಡೆ ಅವರ ಶಿವಾನಿ ಮತ್ತು ಸಾಯಿರ ಎಂಬ ಇಬ್ಬರು ಮಕ್ಕಳ ಪೂರ್ಣ ಪ್ರಮಾಣದ ಶಿಕ್ಷಣದ ವೆಚ್ಚವನ್ನ ಬಿಜೆಪಿಯೇ ನೋಡಿಕೊಳ್ಳಲ್ಲಿದೆ ಅಂತಾ ಅವರು ಭರವಸೆ ನೀಡಿದ್ದಾರೆ.

ಸೋಮವಾರ ಸೇಡಂ ರಸ್ತೆಯ ಇಎಸ್ಐ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದಿದ್ದ ಬಿಜೆಪಿ ವಿಭಾಗೀಯ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಬಂಡೆ ಮಕ್ಕಳ ಪರಿಸ್ಥಿತಿಯ ಬಗ್ಗೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ಶಾ ಗಮನಕ್ಕೆ ತಂದಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಶಾ, ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಬಿಜೆಪಿ ಪಕ್ಷವೇ ಭರಿಸುವುದರ ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆಯುವುದಾಗಿ ಹೇಳಿದರು.

2014 ಜನವರಿ 8ರಂದು ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರು ಗುಂಡಿನ ಕಾಳಗದಲ್ಲಿ ಎದೆಗೆ ಗುಂಡು ಬಿದ್ದು ಸುಮಾರು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಹುತಾತ್ಮರಾಗಿದ್ದರು. ಆ ಬಳಿಕ ಮಕ್ಕಳ ಜವಬ್ದಾರಿ ಪತ್ನಿ ಮಲ್ಲಮ್ಮ ಬಂಡೆ ಹೆಗಲಿಗೆ ಬಿದ್ದಿತ್ತು. ಆದರೆ ಮಲ್ಲಮ್ಮ ಬಂಡೆ ಕೂಡ ಬ್ರೇನ್ ಟ್ಯೂಮರ್ನಿಂದ ಬಳಲಿ 2016 ಜುಲೈ 9ರಂದು ಮಲ್ಲಮ್ಮ ಕೊನೆಯುಸಿರೆಳೆದಿದ್ದರು.

 

See also  ಕೃಷಿಹೊಂಡಕ್ಕೆ ಕಾಲುಜಾರಿ ಬಿದ್ದು ವ್ಯಕಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು