News Kannada
Friday, September 30 2022

ಕರ್ನಾಟಕ

ಮಅದನಿ ವಿಚಾರಣೆ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಪಿಡಿಪಿ ಉಪವಾಸ ಸತ್ಯಾಗ್ರಹ - 1 min read

Photo Credit :

ಮಅದನಿ ವಿಚಾರಣೆ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಪಿಡಿಪಿ ಉಪವಾಸ ಸತ್ಯಾಗ್ರಹ

ಕಾಸರಗೋಡು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸರ್ ಮಅದನಿ ಅವರ ಜೀವ ರಕ್ಷಿಸಬೇಕು, ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಸರಕಾರ ನೀಡಿದ ಭರವಸೆಯನ್ನು ಈಡೇರಿಸಬೇಕು, ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಿಡಿಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿತು.

ಧರಣಿಯನ್ನು ಐಎನ್ ಎಲ್ ಜಿಲ್ಲಾ ಕಾರ್ಯದರ್ಶಿ ಅಝೀಜ್ ಕಡಪ್ಪುರ ಉದ್ಘಾಟಿಸಿದರು. ಪಿಡಿಪಿ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ಲ ಕು೦ಞ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಯೂನಸ್ ತಳಂಗರೆ, ಗೋಪಿ ಕುದ್ರೆಕ್ಕಾಲ್, ಅಬ್ದುಲ್ ಖಾದರ್ ಚಟ್ಟಂಚಾಲ್, ಎಂ .ಕೆ .ಇ ಅಬ್ಬಾಸ್, ಅಬ್ದುಲ್ ರಹಮಾನ್ ಪುತ್ತಿಗೆ, ಸಯ್ಯಿದ್ ಉಮ್ಮರ್ ಫಾರೂಕ್ ತಂಘಳ್, ಮುಹಮ್ಮದ್ ಕು೦ಞ, ಹುಸೈನಾರ್ ಬೆಂಡಿಚಾಲ್, ತಾಜುದ್ದೀನ್ ಚೇರಂಗೈ, ಅಝೀಜ್, ಅಬ್ದುಲ್ ಊಜಾ೦ಪದವು ಮೊದಲಾದವರು ಮಾತನಾಡಿದರು.

See also  ಮಗನ ದುಶ್ಚಟಕ್ಕೆ ತಾಯಿ, ತಂಗಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು