News Kannada
Wednesday, October 05 2022

ಕರ್ನಾಟಕ

ಸಚಿವರು ಬರುವಾಗ ಶಾಸಕರು ಗೇಟು ಕಾಯೋದಕ್ಕೆ ಆಗೋದಿಲ್ಲ : ಬಿ.ಬಿ.ಭಾರತೀಶ್ - 1 min read

Photo Credit :

ಸಚಿವರು ಬರುವಾಗ ಶಾಸಕರು ಗೇಟು ಕಾಯೋದಕ್ಕೆ ಆಗೋದಿಲ್ಲ : ಬಿ.ಬಿ.ಭಾರತೀಶ್

ಮಡಿಕೇರಿ: ಜಿಲ್ಲೆಯ ಜನರಿಂದ ಆಯ್ಕೆಯಾದ ಶಾಸಕರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ನೀಡಬೇಕು ಹೊರತು ಉಸ್ತುವಾರಿ ಸಚಿವರು ಬರುವಾಗ ಶಾಸಕರುಗಳು ಗೇಟು ಕಾಯುವುದಕ್ಕೆ ಆಗುವುದಿಲ್ಲವೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲೆಯ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವಲ್ಲಿ ಇಬ್ಬರು ಶಾಸಕರುಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮತ್ತೊಂದೆಡೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಟೀಕಿಸಿದ್ದಾರೆ.

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎರಡು ಪಕ್ಷಗಳ ಅಧ್ಯಕ್ಷರು ಪತ್ರಕರ್ತರ ಪ್ರಶ್ನೆಗಳಿಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳ ನಡುವಿನ ಹೊಂದಾಣಿಕೆಯ ಕೊರತೆಯ ಬಗ್ಗೆ ಮಾತನಾಡಿದ ಬಿ.ಬಿ.ಭಾರತೀಶ್ ಜನರಿಂದ ಆಯ್ಕೆಯಾದ ಶಾಸಕರುಗಳಿಗೆ ಮೊದಲ ಗೌರವ ಸಲ್ಲಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವರು ಸಭೆಗಳನ್ನು ನಡೆಸುವ ಸಂದರ್ಭ ಶಾಸಕರ ಅಭಿಪ್ರಾಯವನ್ನು ಮತ್ತು ದಿನಾಂಕವನ್ನು ಪಡೆಯಬೇಕಾಗುತ್ತದೆ. ಶಾಸಕರಿಗೆ ಹೊಂದಾಣಿಕೆ ಆಗುವ ದಿನದಂದು ಉಸ್ತುವಾರಿ ಸಚಿವರು ಸಭೆ ನಡೆಸುವ ಅಗತ್ಯತೆ ಇದೆ ಎಂದು ಭಾರತೀಶ್ ಹೇಳಿದರು.

ಜಿಲ್ಲೆಯ ಜನರು ಶಾಸಕರನ್ನು ಆಯ್ಕೆ ಮಾಡಿರುವುದರಿಂದ ಉಸ್ತುವಾರಿ ಸಚಿವರು ಮೊದಲು ಶಾಸಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಚಾಲನೆ ನೀಡಬೇಕೇ ಹೊರತು ಉಸ್ತುವಾರಿ ಸಚಿವರ ಪಿಎ ಭೂಮಿ ಪೂಜೆ ನೆರೆವೇರಿಸುವುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರುಗಳಿಗೆ ಜನ ಬೆಂಬಲವಿದೆ, ಪಕ್ಷ ಹಾಗೂ ಕಾರ್ಯಕರ್ತರ ಸಂಘಟನೆ ಗಟ್ಟಿಯಾಗಿದೆ. ಆದ್ದರಿಂದ ಉಸ್ತುವಾರಿ ಸಚಿವರು ಬರುವಾಗ ಶಾಸಕರುಗಳು ಗೇಟ್ ಕಾಯಲು ಆಗುದಿಲ್ಲ ಎಂದರು.

ಶಾಸಕರು ನೀಡಿದ ಕಾಮಗಾರಿಗಳ ಪಟ್ಟಿಗೆ ಅನುದಾನ ಬಿಡುಗಡೆ ಮಾಡದ ಉಸ್ತುವಾರಿ ಸಚಿವರು ತಮ್ಮ ಆಪ್ತ ಕಾರ್ಯದರ್ಶಿ ನೀಡಿದ ಪಟ್ಟಿಗೆ ಅನುದಾನ ನೀಡುವ ಮೂಲಕ ಸ್ವಜನ ಪಕ್ಷಪಾತ ತೋರುತ್ತಿದ್ದಾರೆ ಎಂದು ಬಿ.ಬಿ.ಭಾರತೀಶ್ ಆರೋಪಿಸಿದರು.

ಇತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಕುಶಾಲನಗರದ ವರೆಗೆ ರೈಲು ಬರುವ ಅಗತ್ಯವಿದ್ದು, ಜಿಲ್ಲೆಯ ಇತರ ಭಾಗಕ್ಕೆ ರೈಲು ಮಾರ್ಗ ಬರುವುದಕ್ಕೆ ಯಾವುದೇ ಕಾರಣಕ್ಕೆ ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಡಾ.ಕಸ್ತೂರಿ ರಂಗನ್ ವರದಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಸರಿಯಾದ ವರದಿಯನ್ನು ಸಲ್ಲಿಸದೆ ಇರುವುದರಿಂದ ಸಮಸ್ಯೆ ಹಾಗೆ ಉಳಿದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಸೂಕ್ತ ವರದಿಯನ್ನು ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದೆಂದರು.

ಕೊಡಗಿನ ಕಡೆಗಣನೆ: ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಮುಖ್ಯಮಂತ್ರಿಗಳು ಹಾಗೂ ಸಂಸದರು ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಬೆಳೆಗಾರರ ಹಾಗೂ ಕಾರ್ಮಿಕರ ಸಂಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ, ಜಿಲ್ಲೆಯ ಶಾಸಕರುಗಳು ಸರ್ಕಾರದ ವೈಫಲ್ಯದ ವಿರುದ್ಧ ಪ್ರತಿಭಟಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಡಾ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸೂಕ್ಷ್ಮ ಪರಿಸರ ವಲಯದ ಬಗ್ಗೆ ವೈಜ್ಞಾನಿಕ ಅಭಿಪ್ರಾಯ ಸಂಗ್ರಹ ಅಗತ್ಯವೆಂದರು. ಟಿಪ್ಪು ಜಯಂತಿ ಬಗ್ಗೆ ಸ್ಪಷ್ಟ ಉತ್ತರ ನೀಡದ ಸಂಕೇತ್ ಪೂವಯ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯತೀತ ಸಮಾಜ ನಿಮರ್ಾಣಕ್ಕೆ ಆದ್ಯತೆ ನೀಡುವ ಅಗತ್ಯವಿದೆ ಎಂದರು. ಜಾತಿ, ಮತ, ಧರ್ಮಗಳ ಆಧಾರದಲ್ಲಿ ಮತ ಬೇಟೆ ಮಾಡಬಾರದೆಂದು ತಿಳಿಸಿದ ಅವರು ಭಾವನಾತ್ಮಕ ವಿಚಾರದಲ್ಲಿ ಸರ್ವಧರ್ಮಿಯರ ಅಭಿಪ್ರಾಯ ಸಂಗ್ರಹ ಅಗತ್ಯವೆಂದರು.

See also  ಈ ಊರಲ್ಲಿ ಶನಿವಾರ ಆಮ್ಲೇಟ್ ಜಾತ್ರೆ!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ವಿರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಪಕ್ಷ ಸಂಘಟನೆ ಪ್ರಬಲವಾಗಿದೆ ಎಂದರು. ಜಾತಿವಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಎಂದು ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವುಮಾದಪ್ಪ ಅವರಿಗೆ ಸಂವಾದಕ್ಕೆ ಆಹ್ವಾನವಿತ್ತಾದರೂ ಅವರು ಗೈರು ಹಾಜರಾಗಿದ್ದರು.

ಕೊಡಗು ಪ್ರೆಸ್ಕ್ಲಬ್ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಹಾಗೂ ಕಾರ್ಯದರ್ಶಿ ವಿಘ್ನೇಶ್ ಭೂತನಕಾಡು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು