News Kannada
Friday, September 30 2022

ಕರ್ನಾಟಕ

ಬರಪರಿಸ್ಥಿತಿಗೆ ದೀರ್ಘಕಾಲದ ಪರಿಹಾರ ಅಗತ್ಯ: ಕೃಷ್ಣ ಬೈರೇಗೌಡ - 1 min read

Photo Credit :

ಬರಪರಿಸ್ಥಿತಿಗೆ ದೀರ್ಘಕಾಲದ ಪರಿಹಾರ ಅಗತ್ಯ: ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯ ಕಳೆದ 17 ವರ್ಷಗಳಲ್ಲಿ ಸತತವಾಗಿ ಬರಗಾಲವನ್ನು ಎದುರಿಸುತ್ತಲೇ ಬಂದಿದ್ದು ಸಮರ್ಥವಾಗಿ ಎದುರಿಸಲು ನೆರೆ ರಾಜ್ಯಗಳು ಒಗ್ಗೂಡಿ ಅಲ್ಪ, ಮಧ್ಯಮ. ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯತೆಯಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬರ ನಿರ್ವಹಣೆ ಕಾರ್ಯತಂತ್ರ ಕುರಿತು ಏರ್ಪಡಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಕಳೆದ 17 ವರ್ಷಗಳಲ್ಲಿ ನಾಲ್ಕು ವರ್ಷಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ವರ್ಷಗಳು ಬರಪೀಡಿತವಾಗಿದ್ದು, ಶೇ 70 ರಿಂದ 80 ರಷ್ಟು ರಾಜ್ಯದ ಭೌಗೋಳಿಕ ಪ್ರದೇಶವು ಬರದಿಂದ ತತ್ತರಿಸಿದೆ. ಬರಗಾಲವು ಯಾವುದೇ ರಾಜ್ಯದ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಪರಿಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತದೆ ಎಂದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಕರ್ನಾಟಕ ರಾಜ್ಯವು ವಿಪರೀತ ಎನಿಸುವಷ್ಟು ಹವಾಮಾನ ವೈಪರೀತ್ಯಗಳನ್ನು ಕಂಡಿದೆ ಎಂದ ಅವರು, ಹವಾಮಾನದ ಈ ಬದಲಾವಣೆಯನ್ನು ನಾವುಗಳು ಪ್ರಸ್ತುತ ದಿನಗಳಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. 2017ನೇ ಸಾಲನ್ನು ಹೊರತುಪಡಿಸಿದರೆ ಕರ್ನಾಟಕ ರಾಜ್ಯಕ್ಕೆ ಬರಗಾಲ ತೀರ ಸಾಮಾನ್ಯವಾಗಿದೆ. ನಮ್ಮ ನೆರೆಹೊರೆಯ ರಾಜ್ಯಗಳ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಸತತ ಬರಗಾಲದಿಂದ ನೆರೆ ರಾಜ್ಯಗಳಲ್ಲಿ ನೀರಿಗಾಗಿ ವ್ಯಾಜ್ಯ, ಇದರಿಂದಾಗಿ ಕಾನೂನು ಸುವ್ಯವಸ್ಥೆ ತೊಂದರೆಗಳು ಸಾಕಷ್ಟು ತಲೆದೋರಿವೆ ಎಂದರು.

ಆರ್ಥಿಕ ಸಮೀಕ್ಷೆ ಅನುಸಾರ ಬರಗಾಲವು ಕೃಷಿ ಉತ್ಪಾದನೆಯ ಮೇಲೆ ಶೇ 25 ರಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಹವಾಮಾನ ವೈಪರೀತ್ಯವನ್ನು ಸಮರ್ಪಕವಾಗಿ ಎದುರಿಸಲು ಎಲ್ಲಾ ರಾಜ್ಯಗಳು ಒಗ್ಗೂಡಿ ಸುದೀರ್ಘವಾಗಿ ಚರ್ಚಿಸಿ ಅಲ್ಪ, ಮಧ್ಯಮ ಮತ್ತು ದೀರ್ಘಕಾಲದ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಪರಿಹಾರ ತಂತ್ರಾಂಶ ಮೂಲಕ ಇನ್ಪುಟ್ ಸಬ್ಸಿಡಿಯನ್ನು ಸಕಾಲದಲ್ಲಿ ರೈತರಿಗೆ ಅವರ ಖಾತೆ ನೇರವಾಗಿ ಖಜಾನೆಯಿಂದ ಜಮೆ ಮಾಡಲಾಗುತ್ತಿದ್ದು, ಇದರಿಂದಾಗಿ ರೈತರಿಗೆ ಬರಪರಿಸ್ಥಿಯನ್ನು ಎದುರಿಸಲು ಅನುಕೂಲವಾಗಿದೆ ಎಂದರು. 

ಸಂರಕ್ಷಣೆ ತಂತ್ರಾಂಶ ಮೂಲಕ ರಾಜ್ಯದ 2.2 ಕೋಟಿ ರೈತರ ಜಮೀನುಗಳ ಬೆಳೆ ಮಾಹಿತಿಯನ್ನು ಜಿಪಿಎಸ್ ಆಧಾರಿತ ಸಮೀಕ್ಷೆ ಮೂಲಕ ಕಂಡುಕೊಳ್ಳಲಾಗಿದ್ದು, ಇದರಿಂದಾಗಿ ಯಾವ ರೈತ ಯಾವ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆದಿದ್ದಾನೆ, ಯಾರು ಬೆಳೆ ಬೆಳೆದಿಲ್ಲ ಎಂಬುದು ನಿಖರವಾಗಿ ಪತ್ತೆಯಾಗಲಿದ್ದು, ಇದು ಬೆಳೆ ವಿಮೆ ವಿತರಿಸಲು ಅನುಕೂಲವಾಗಲಿದೆ ಎಂದ ಅವರು, 2016ರಲ್ಲಿ ಒಟ್ಟು 4600 ಕೋಟಿಯನ್ನು ಬೆಳೆವಿಮೆ ಪರಿಹಾರಕ್ಕಾಗಿ ರಬ್ಬಿ ಮತ್ತು ಖಾರಿಫ್ ಬೆಳೆವಿಮೆಗಾಗಿ ಖರ್ಚು ಮಾಡಲಾಗಿದೆ ಎಂದರು. 

ಬೇಸಿಗೆಯಲ್ಲಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಲು ರಾಜ್ಯಾದ್ಯಂತ 2 ಲಕ್ಷ ಕೃಷಿ ಹೊಂಡವನ್ನು ರೈತರ ಜಮೀನಿನಲ್ಲಿ ನಿರ್ಮಿಸಲಾಗಿದ್ದು, ಈ ಹೊಂಡಗಳು 3 ರಿಂದ 19 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದರು.

ರಾಜ್ಯದಲ್ಲಿ ಮಳೆ ತರಿಸಲು ಸುಮಾರು 30 ಕೋಟಿ ವೆಚ್ಚದಲ್ಲಿ ಮೋಡಬಿತ್ತನೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ ಎಂದ ಅವರು, ಬರ ಪರಿಸ್ಥಿತಿಯಲ್ಲಿ ಕಡಿಮೆ ನೀರನ್ನು ಬಳಸಿ ಉತ್ತಮ ಇಳುವರಿ ಪಡೆಯಲು ಸಿರಿಧಾನ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವಂತೆ ರೈತರನ್ನು ಉತ್ತೇಜಿಸಲಾಗುತ್ತಿದೆ ಮತ್ತು ಕಡಿಮೆ ನೀರಿನಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಹನಿ ನೀರಾವರಿ ಪದ್ದತಿಯನ್ನು ಬಳಸುವಂತೆ ರಾಜ್ಯದ ರೈತರನ್ನು ಉತ್ತೇಜಿಸಲಾಗುತ್ತಿದೆ ಎಂದರು.

See also  ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಆತಂಕದಲ್ಲಿ ಜನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು