News Kannada
Thursday, September 29 2022

ಕರ್ನಾಟಕ

ಕಾಸರಗೋಡು: ಕಾಡುಹಂದಿ ದಾಳಿಗೆ ಕೃಷಿಕ ಬಲಿ - 1 min read

Photo Credit :

ಕಾಸರಗೋಡು: ಕಾಡುಹಂದಿ ದಾಳಿಗೆ ಕೃಷಿಕ ಬಲಿ

ಕಾಸರಗೋಡು: ಕಾಡು ಹಂದಿ ದಾಳಿಗೆ ಕೃಷಿಕರೋರ್ವ ಬಲಿಯಾದ ಘಟನೆ ಕಾಸರಗೋಡಿನ ವೆಳ್ಳರಿಕುಂಡು ಎಂಬಲ್ಲಿ ಮಂಗಳವಾರ ನಡೆದಿದೆ.

ಮೃತಪಟ್ಟವರನ್ನು ವೆಳ್ಳರಿಕುಂಡು ಮಾಡತ್ತನಿಯ ಜೋಸ್(58) ಎಂದು ಗುರುತಿಸಲಾಗಿದೆ. ರಬ್ಬರ್ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹಂದಿ ದಾಳಿ ನಡೆಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕಲ್ಲೆಸೆದು ಬೆನ್ನಟ್ಟಿದರು. ಗಂಭೀರ ಗಾಯಗೊಂಡ ಜೋಸ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟರು.

ಜೋಸ್ ಅವರು ಬಳಾಲ್ ಗ್ರಾಮ ಪಂಚಾಯತ್ ಸದಸ್ಯೆ ರೋಸಮ್ಮರ ಪತಿ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಕೊಡಗಿನಲ್ಲಿ ಮುಂದುವರಿದ ವರುಣನ ಅಬ್ಬರ: ರಸ್ತೆಗುರುಳಿದ ಮರಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು