News Kannada
Thursday, October 06 2022

ಕರ್ನಾಟಕ

ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಆರೋಪಿಗಳು ಇಬ್ಬರು ತಪ್ಪಿತಸ್ಥರು: ತೀರ್ಪು ಪ್ರಕಟ - 1 min read

Photo Credit :

ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಆರೋಪಿಗಳು ಇಬ್ಬರು ತಪ್ಪಿತಸ್ಥರು: ತೀರ್ಪು ಪ್ರಕಟ

ಕಾಸರಗೋಡು: ಅಂತರ್ ಜಾತಿ ವಿಹಾಹಕ್ಕೆ ಸಂಬಂಧಪಟ್ಟಂತೆ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಬಾಲಕೃಷ್ಣ(೨೫) ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳು ತಪ್ಪಿತಸ್ಥರು ಎಂದು ಕೊಚ್ಚಿಯ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ಉಳಿದ ಆರೋಪಿಗಳನ್ನು ಖುಲಾಸೆ ಗೊಳಿಸಿದೆ.

ಶಿಕ್ಷೆ ಪ್ರಮಾಣ ಇಂದು ಪ್ರಕಟಗೊಳ್ಳಲಿದೆ. ಚಟ್ಟಂಚಾಲ್ ನ ಮುಹಮ್ಮದ್ ಇಕ್ಬಾಲ್ ಮತ್ತು ತಳಂಗರೆಯ ಮುಹಮ್ಮದ್ ಹನೀಫ್ ಆರೋಪಿಗಳು .

ಉಳಿದ ಆರೋಪಿಗಳಾದ ತಾಯಲ೦ಗಾಡಿಯ ಅಬ್ದುಲ್ ಗಫೂರ್ , ಮುಟ್ಟತ್ತೋಡಿಯ ಎ. ಎಂ ಮುಹಮ್ಮದ್ , ಉಪ್ಪಳ ಮಣ್ಣಂಗುಯಿಯ ಅಬೂಬಕ್ಕರ್ ರನ್ನು ಖುಲಾಸೆ ಗೊಳಿಸಿದೆ.

೨೦೦೧ ರ ಸೆಪ್ಟ೦ಬರ್ ೧೮ ರಂದು ಘಟನೆ ನಡೆದಿತ್ತು . ಕಾಸರಗೋಡಿನಲ್ಲಿ ಕೊರಿಯರ್ ಸಂಸ್ಥೆ ಮಾಲಕ ರಾಗಿದ್ದ ಬಾಲಕೃಷ್ಣ ರನ್ನು ಕಾರಿನಲ್ಲಿ ಅಪಹರಿಸಿದ್ದ ತಂಡವು ಚಂದ್ರಗಿರಿ ಹೊಳೆ ಬದಿ ಕೊಲೆಗೈದಿತ್ತು. ಕಾಸರಗೋಡು ಪೊಲೀಸರು ತನಿಖೆ ನಡೆಸಿದರೂ ಯಶಸ್ವಿಯಾಗದ ಹಿನ್ನಲೆಯಲ್ಲಿ ಬಾಲಕೃಷ್ಣರ ತಂದೆ ಉನ್ನತ ಮಟ್ಟದ ತನಿಖೆಗಾಗಿ ಹೈಕೋರ್ಟ್ ಮೊರೆ ಹೋಗಿತ್ತು . ಹೈಕೋರ್ಟ್ ಆದೇಶದಂತೆ ಸಿಬಿಐ ಗೆ ಒಪ್ಪಿಸಲಾಗಿತ್ತು,

 

See also  ಪ್ರತಿಯೊಬ್ಬರೂ ಆರೋಗ್ಯದತ್ತ ಕಾಳಜಿ ವಹಿಸುವುದು ಅಗತ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು