News Kannada
Friday, October 07 2022

ಕರ್ನಾಟಕ

ಬರೆಗೆ ಗುದ್ದಿದ ಓಮ್ನಿ: ಚಾಲಕ ಸ್ಥಳದಲ್ಲೇ ಮೃತ್ಯು - 1 min read

Photo Credit :

ಬರೆಗೆ ಗುದ್ದಿದ ಓಮ್ನಿ: ಚಾಲಕ ಸ್ಥಳದಲ್ಲೇ ಮೃತ್ಯು

ಸೋಮವಾರಪೇಟೆ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ವ್ಯಾನ್ ಬರೆಗೆ ಗುದ್ದಿರುವ ಹಿನ್ನೆಲೆ ಚಾಲಕ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಪಟ್ಟಣಕ್ಕೆ ಸಮೀಪದ ಕುವೆಂಪು ಶಾಲೆಯ ಎದುರಿನ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದೆ.

ಪುತ್ತೂರು ತಾಲೂಕು ಎಡಮಂಗಲ ಗ್ರಾಮದ ಬೆಳ್ಯಪ್ಪಗೌಡ ಎಂಬವರ ಪುತ್ರ ತೇಜ್ ಪ್ರಕಾಶ್(32) ಮೃತಪಟ್ಟವರು. ಶನಿವಾರ ಸಂತೆಯಲ್ಲಿ ವರ್ಕ್ ಶಾಪ್ ಮಾಲೀಕರಾಗಿದ್ದ ತೇಜ್ ಪ್ರಕಾಶ್, ಅಲ್ಲಿಯೇ ವಾಸವಾಗಿದ್ದರು. ಮಂಗಳವಾರ ಗರಗಂದೂರಿನ ಪತ್ನಿ ಮನೆಯಿಂದ ಶನಿವಾರಸಂತೆಗೆ ತೆರಳುತ್ತಿರುವಾಗ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ದುರ್ಘಟನೆ ಸಂಭವಿಸಿದೆ.

ಸ್ಥಳದಲ್ಲಿದ್ದವರು ಅವರನ್ನು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿದ್ದಾರೆ. ಆದರೆ ಅದಾಗಲೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಮೃತರು ಪತ್ನಿ, ಒಂದು ತಿಂಗಳ ಮಗುವನ್ನು ಅಗಲಿದ್ದಾರೆ. ಬೆಳಿಗ್ಗೆ ಎದೆನೋವು ಎಂದು ಪತ್ನಿಯೊಂದಿಗೆ ಹೇಳಿದ್ದು, ವ್ಯಾನ್ ಚಾಲನೆ ಮಾಡುವಾಗಲೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

See also  ಉಳ್ಳಾಲ ತೀರಕ್ಕೆ ತೇಲಿಬಂದ ಲಂಗರು ಹಾಕಿದ್ದ ಬೋಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು