News Kannada
Saturday, October 01 2022

ಕರ್ನಾಟಕ

ಮಲಯಾಳ ಕಲಿಕೆ ಕಡ್ಡಾಯ ವಿರೋಧಿಸಿ ಕನ್ನಡಿಗರ ಪ್ರತಿಭಟನೆ - 1 min read

Photo Credit :

ಮಲಯಾಳ ಕಲಿಕೆ ಕಡ್ಡಾಯ ವಿರೋಧಿಸಿ ಕನ್ನಡಿಗರ ಪ್ರತಿಭಟನೆ

ಕಾಸರಗೋಡು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದರಿಂದ ಹತ್ತನೇ ತರಗತಿ ತನಕ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಕೇರಳ ಸರಕಾರದ ತೀರ್ಮಾನದ ವಿರುದ್ಧ ಕನ್ನಡಿಗರು ಹೋರಾಟಕ್ಕೆ ಬುಧವಾರ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಚಾಲನೆ ನೀಡಲಾಗಿದ್ದು, 29ರ ತನಕ ಬೆಳಿಗ್ಗೆ 10 ರಿಂದ ಸಂಜೆ ಐದು ಗಂಟೆ ತನಕ ಧರಣಿ, ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.

ಧರಣಿಯನ್ನು ಬುಧವಾರ ಬೆಳಿಗ್ಗೆ ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಲಯಾಳ ಕೇರಳದ ಮಾತೃ ಭಾಷೆ ಆಗಿದ್ದು ಎಲ್ಲರಿಗೂ ಗೌರವವಿದೆ. ಆದರೆ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಬಲವಂತದ ಮಲಯಾಳ ಹೇರಿಕೆ ಬೇಡ. ಕನ್ನಡಿಗರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ಈಗಾಗಲೇ ತರಲಾಗಿದೆ. ಅಗತ್ಯ ಬಿದ್ದಲ್ಲಿ ಕನ್ನಡಿಗರ ಪರ ಹೋರಾಟಕ್ಕೂ ಸಿದ್ದ ಎಂದು ಹೇಳಿದರು.

ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳು ಕ್ಕರಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಅಧ್ಯಕ್ಷ ಎಸ್‌.ವಿ. ಭಟ್‌, ಗಮಕ ಪರಿಷತ್‌ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್‌, ವಿ.ಬಿ. ಕುಳಮರ್ವ, ಎಂ.ವಿ. ಮಹಾಲಿಂಗೇಶ್ವರ ಭಟ್‌, ತಾರಾನಾಥ ಮಧೂರು, ಅಡೂರು ಉಮೇಶ್ ನಾಯ್ಕ್, ಸತ್ಯನಾರಾಯಣ ಕಾಸರಗೋಡು, ಗುರುಪ್ರಸಾದ್‌ ಕೋಟೆಕಣಿ, ಕೂಡ್ಲು, ಡಾ. ಬೇ.ಸೀ. ಗೋಪಾಲಕೃಷ್ಣ ಭಟ್‌, ಸುಬ್ರಹ್ಮಣ್ಯ ಭಟ್‌, ಪ್ರದೀಪ್‌ ಕುಮಾರ್‌ ಪಿ.ವಿ., ಗೋವಿಂದ ಬಳ್ಳಮೂಲೆ, ಪ್ರಶಾಂತ್‌ ಹೊಳ್ಳ, ಡಾ. ರತ್ನಾಕರ ಮಲ್ಲಮೂಲೆ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

See also  ಕಾಸರಗೋಡಿನಲ್ಲಿ ಶುಕ್ರವಾರ ೧೬೮ ಮಂದಿಗೆ ಕೊರೊನಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು