News Kannada
Thursday, September 29 2022

ಕರ್ನಾಟಕ

ಮಾಗಡಿಯಲ್ಲಿ ಹಂದಿಗಳ ಹಾವಳಿಗೆ ಬೆಚ್ಚಿದ ಜನತೆ - 1 min read

Photo Credit :

ಮಾಗಡಿಯಲ್ಲಿ ಹಂದಿಗಳ ಹಾವಳಿಗೆ ಬೆಚ್ಚಿದ ಜನತೆ

ಮಾಗಡಿ: ಮಾಗಡಿ ಪಟ್ಟಣದಲ್ಲಿ ಬೀಡಾಡಿ ಹಂದಿಗಳಿಂದ ರೋಗದ ಭಯ ಆರಂಭವಾಗಿದೆ. ಜ್ಯೋತಿನಗರದಲ್ಲಿ ಎಲ್ಲೆಂದರಲ್ಲಿ ಹಂದಿಗಳು ಓಡಾಡುತ್ತಿದ್ದು ಪುರಸಭೆ ಇದರತ್ತ ಗಮನಹರಿಸದ ಕಾರಣದಿಂದ ಹಂದಿಗಳ ಕಾಟ ಹೆಚ್ಚಾಗುತ್ತಿದ್ದು, ಪರಿಸರ ಹಾಳಾಗುತ್ತಿರುವುದಲ್ಲದೆ ರೋಗದ ಭೀತಿಯೂ ಹೆಚ್ಚಾಗುತ್ತಿದೆ.

ಚರಂಡಿಗಳು, ತ್ಯಾಜ್ಯ ವಸ್ತುಗಳ ಸಂಗ್ರಹಣಾ ಸ್ಥಳಗಳಲ್ಲಿ ಹಂದಿಗಳು ಹೆಚ್ಚಾಗಿ ಹಾವಳಿ ಮಾಡುತ್ತಿದ್ದು, ಪರಿಸರವನ್ನು ಗಬ್ಬೆಬ್ಬಿಸುತ್ತಿವೆ. ಇಲ್ಲಿನ ಸೋಮೇಶ್ವರ ಬಡಾವಣೆ ಹತ್ತಿರ ರಾಜೀವ್ ಗಾಂಧಿ ಕಾಲೋನಿಯಿದ್ದು ಅಲ್ಲಿ ಹೆಚ್ಚಿನವರು ಹಂದಿಗಳನ್ನು ಸಾಕುತ್ತಿದ್ದಾರೆ. ಈ ಹಂದಿಗಳೆಲ್ಲವೂ ಆಹಾರಕ್ಕಾಗಿ ಎಲ್ಲೆಂದರಲ್ಲಿ ಅಲೆಯುತ್ತಾ ಗಲೀಜುಗಳಲ್ಲಿ ಉರುಳಾಡುತ್ತಾ ಓಡಾಡುತ್ತಿರುತ್ತವೆ.

ಇವು ಒಮ್ಮೊಮ್ಮೆ ಆಹಾರ ಹುಡುಕಿಕೊಂಡು ಜ್ಯೋತಿನಗರದತ್ತ ಬರುತ್ತಿವೆ. ಜತೆಗೆ ವಾರ್ಡಿನ ಸ್ವಚ್ಛತೆಯನ್ನು ಹಾಳುಗೆಡವುತ್ತಿರುತ್ತವೆ.

ಚರಂಡಿ, ಮೋರಿ ತಿಪ್ಪೆ ಹತ್ತಿರ ಹೋಗಿ ಗಲೀಜು ಮಾಡುತ್ತಿವೆ. ಇದರಿಂದ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮರಿಗಳ ಸಹಿತ ಹಂದಿಗಳ ಹಿಂಡು ಹಿಂಡಾಗಿ ಓಡಾಡುತ್ತಾ ಮನೆಗಳ ಬಳಿ ಅಡ್ಡಾಡುತ್ತಿರುವುದರಿಂದ ಈಗ ರೋಗದ ಭಯ ನಿವಾಸಿಗಳನ್ನು ಕಾಡುತ್ತಿದೆ. ಈ ಬಗ್ಗೆ ಹಿಂದೆ ಪುರಸಭೆಗೆ ದೂರು ನೀಡಿ ಹಂದಿಗಳನ್ನು ಹಿಡಿಯುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಈ ನಡುವೆ ಹಂದಿಗಳ ಹಾವಳಿ ಬಗ್ಗೆ ದೂರಿರುವ ಸ್ಥಳೀಯ ನಿವಾಸಿಗಳು ಪುರಸಭೆಯವರು ಹಂದಿ ಸಾಕುವ ಮಾಲೀಕರಿಗೆ ನೋಟಿಸ್ ನೀಡಿ ಹಂದಿಗಳನ್ನು ಮನೆಯಲ್ಲೇ ಗೂಡಿನಲ್ಲಿಡಬೇಕು. ಆಚೆ ಬಿಡದಂತೆ ಎಚ್ಚರಿಕೆ ನೀಡಬೇಕು, ತಪ್ಪಿದಲ್ಲಿ ಹಂದಿಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

See also  ಮಲೆ ಮಹದೇಶ್ವರ ಬೆಟ್ಟದ ಲಾಡು ಬೆಲೆ ಹೆಚ್ಚಳ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು