ಬೆಳ್ತಂಗಡಿ: ಧರ್ಮಸ್ಥಳದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಸಮೀಪ ಭಾನುವಾರ ಮುಂಜಾನೆ ರಸ್ತೆ ಬದಿಯ ಮರವೊಂದು ಕಾರಿನ ಮೇಲೆ ಬಿದ್ದು ಜಖಂ ಗೊಂಡಿದೆ.
ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಅನಿಲ್ ಮತ್ತು ಮೂರು ಜನರ ಕುಟುಂಬ ಧರ್ಮಸ್ಥಳಕ್ಕೆ ಬರುವಾಗ ಭಾನುವಾರ ಮುಂಜಾನೆ 5 ಗಂಟೆಗೆ ಧರ್ಮಸ್ಥಳ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬರುತ್ತಿದ್ದಾಗ ಕಾರಿನ ಮೇಲೆ ಮರ ಬಿದ್ದಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ತಕ್ಷಣ ಮರವನ್ನು ತೆರವುಗೊಳಿಸಿದ್ದಾರೆ. ಅಲ್ಲಿನ ಸ್ಥಿತಿಯನ್ನು ಗಮನಿಸಿದರೆ ಮರ ಮತ್ತು ವಿದ್ಯುತ್ ಲೈನ್ ಬಿದ್ದ ಪರಿಣಾಮ ಯಾರೂ ಬದುಕುಳಿಯುವ ಸ್ಥಿತಿ ಇಲ್ಲ. ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಆದರೆ ಅದೃಷ್ಟ ಪ್ರಯಾಣಿಕರ ಪರ ಇದ್ದುದರಿಂದ ಎಲ್ಲರೂ ಬದುಕುಳಿದಿದ್ದಾರೆ.