ಕಾಸರಗೋಡು: ದೇಶ ಸೇವೆ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಬೇಕು. ಸತ್ಯ, ಧರ್ಮ, ನ್ಯಾಯ, ಸೌಹಾರ್ದತೆ ನಮ್ಮ ಗುರು ಹಿರಿಯರ ಕನಸಾಗಿತ್ತು. ಇದರಿಂದ ವಿದ್ಯಾರ್ಥಿಗಳು, ಯುವಕರ ಸೇವೆ ಸಮಾಜಕ್ಕೆ ಅಗತ್ಯ ಎಂದು ವಿಜೋರಾಂ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ವಿದ್ಯಾನಗರದ ಚಿನ್ಮಯಾನಂದ ವಿದ್ಯಾಲಯದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ದೇಶಕ್ಕಾಗಿ, ಜನರಿಗಾಗಿ, ಪರಂಪರೆಗಾಗಿ ತ್ಯಾಗ ಮಾಡಲು ಯುವ ಪೀಳಿಗೆ ಮುಂದೆ ಬರಲು ಪ್ರೇರೇಪಿಸಬೇಕು ಎಂದು ಹೇಳಿದರು.
ಚಿನ್ಮಯ ಮಿಶನ್ ರೀಜಿನಲ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಸಿಆರ್ ಐ ನಿರ್ದೇಶಕ ಡಾ. ಪಿ. ಚೌಡಪ್ಪ, ಚಿನ್ಮಯ ಮಿಷನ್ ಕಾರ್ಯದರ್ಶಿ ಕೆ. ಬಾಲಚಂದ್ರನ್, ಪ್ರಾಂಶುಪಾಲ ಬಿ. ಪುಷ್ಪರಾಜ ಮೊದಲಾದವರು ಮಾತನಾಡಿದರು.