News Kannada
Sunday, November 27 2022

ಕರ್ನಾಟಕ

ಭತ್ತದ ನಾಟಿಯೊಂದಿಗೆ ವಿದ್ಯಾರ್ಥಿಗಳಿಗೆ ಕೃಷಿ ಅಧ್ಯಯನ - 1 min read

Photo Credit :

ಭತ್ತದ ನಾಟಿಯೊಂದಿಗೆ ವಿದ್ಯಾರ್ಥಿಗಳಿಗೆ ಕೃಷಿ ಅಧ್ಯಯನ

ಮಂಡ್ಯ: ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ವಿದ್ಯಾರ್ಥಿಗಳು ಭತ್ತದ ಪೈರುಗಳನ್ನು ರೈತರ ಮಾರ್ಗದರ್ಶನದಲ್ಲಿ ನಾಟಿ ಮಾಡುವ ಮೂಲಕ ಕೃಷಿ ಕುರಿತಂತೆ ತಮ್ಮ ಅಧ್ಯಯನವನ್ನು ಮಾಡುತ್ತಿದ್ದಾರೆ.

ವಿ.ಸಿ.ಫಾರಂ ಕೃಷಿ ಮಹಾ ವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಕೃಷಿಯ ಪ್ರಾಯೋಗಿಕ ಕಲಿಕೆಗಾಗಿ ಟಿ.ಎಂ. ಹೊಸೂರು ಗ್ರಾಮದಲ್ಲಿ 90 ದಿನಗಳ ಶಿಬಿರದಲ್ಲಿ ಪಾಲ್ಗೊಂಡಿದ್ದು, ಕೃಷಿಯ ಕುರಿತು ಮಾಹಿತಿ ಪಡೆಯುತ್ತಿರುವುದಲ್ಲದೆ, ತಾವೇ ಸ್ವತಃ ಕೃಷಿ ಕಾರ್ಯಗಳನ್ನು ಮಾಡಿ ಅದರ ಅನುಭವವನ್ನು ಪಡೆಯುತ್ತಿದ್ದಾರೆ.

ಪ್ರತಿ ದಿನ ವಿದ್ಯಾರ್ಥಿಗಳು ರೈತರ ಹೊಲ ಗದ್ದೆ ತೋಟಗಳಿಗೆ ರೈತರೊಡನೆ ತೆರಳಿ ಹಲವಾರು ಕೃಷಿ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳುತ್ತಿದ್ದು ಬೇಸಾಯ ಕ್ರಮಗಳನ್ನು ರೈತರಿಂದ ಪ್ರಾಯೋಗಿಕವಾಗಿ ಕಲಿಯುತ್ತಿದ್ದಾರೆ. ಜತೆಗೆ ಸುಧಾರಿತ ಕೃಷಿ ತಾಂತ್ರಿಕತೆಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಕೃಷಿ ಮಾಡಬೇಕು ಎಂಬುದರ ಬಗ್ಗೆಯೂ ರೈತರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಭತ್ತದ ಹೈಬ್ರಿಡ್ ಹಾಗೂ ಸುಧಾರಿತ ತಳಿಗಳಾದ ಕೆಆರ್ ಎಚ್ 4, ಎಮ್ಟಿಯು 1001, ಎಮ್ಟಿ 1010 ಮತ್ತು ರಾಶಿ ಬೀಜದ ಸಸಿ ಮಡಿ ತಯಾರಿಕೆ, ನಾಟಿ ಮಾಡುವ ಸಮಯ ಹಾಗೂ ವಿಧಾನವನ್ನು ವಿದ್ಯಾರ್ಥಿಗಳು ಕೃಷಿ ಮಹಾವಿದ್ಯಾಲಯದ ಬೀಜ ಶಾಸ್ತ್ರಜ್ಞ ಡಾ. ಶಶಿ ಭಾಸ್ಕರ್ ಮಾರ್ಗದರ್ಶನದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಭತ್ತದ ಸಸಿಮಡಿ ತಯಾರಿಸುವ ಮುನ್ನ ಜೈವಿಕ ಗೊಬ್ಬರವಾದ ಅಜೋಸ್ಪಿರುಲಮ್ 10 ಗ್ರಾಂ. ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ಲೇಪಿಸಿ ಬೀಜೋಪಚಾರ ಮಾಡಿ ಸಸಿ ಮಡಿಗಳನ್ನು ತಯಾರಿಸಿಕೊಳ್ಳಬೇಕು. 21 ದಿನಗಳ ಆರೋಗ್ಯವಾಗಿ ಬೆಳೆದ ಸಸಿಗಳನ್ನು ಸಸಿಮಡಿಯಿಂದ ಮುಖ್ಯ ಜಮೀನಿಗೆ ನಾಟಿ ಮಾಡಬೇಕು. ಮುಖ್ಯ ಜಮೀನಿ ನಲ್ಲಿ ನಾಟಿ ಮಾಡುವ ಭೂಮಿಯನ್ನು ಹದ ಮಾಡಿಕೊಳ್ಳುವುದರ ಜೊತೆಗೆ ಕೊಟ್ಟಿಗೆ ಗೊಬ್ಬರವನ್ನು ಕೂಡ ಹಾಕಬೇಕು. ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನಾಟಿ ಮಾಡುವುದರಿಂದ ರೋಗ ಮತ್ತು ಕೀಟಗಳ ಹಾವಳಿ ಕಡಿಮೆ ಮಾಡಬಹುದೆಂದು ಶಿಬಿರಾಥರ್ಿಗಳು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿ ಉಪಯೋಗವಾಗುತ್ತಿದ್ದರೆ, ರೈತರಿಗೆ ಸಾಂಪ್ರದಾಯಿಕ ಕೃಷಿಗಿಂತ ಮತ್ತು ಸುಧಾರಿತ ಕೃಷಿ ಕ್ರಮಗಳಿಂದ ಆಗುತ್ತಿರುವ ಲಾಭದ ಅರಿವಾಗುತ್ತಿದೆ. ಒಟ್ಟಾರೆ ಇದು ಉಪಯೋಗಕಾರಿಯಾಗುತ್ತಿರುವುದರಲ್ಲಿ ಎರಡು ಮಾತಿಲ್ಲ.

See also  ಕಾರಿನಲ್ಲಿ ಬೆಂಕಿ: ಮಹಿಳೆ ಸಜೀವ ದಹನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು