News Kannada
Tuesday, September 27 2022

ಕರ್ನಾಟಕ

ರಾಜ್ಯ ಸರ್ಕಾರ ಕೊಡಗಿನ ಜನರೊಂದಿಗಿದೆ: ಸಚಿವ ಸಾ.ರಾ.ಮಹೇಶ್ ಅಭಯ - 1 min read

Photo Credit :

ರಾಜ್ಯ ಸರ್ಕಾರ ಕೊಡಗಿನ ಜನರೊಂದಿಗಿದೆ: ಸಚಿವ ಸಾ.ರಾ.ಮಹೇಶ್ ಅಭಯ

ಮಡಿಕೇರಿ: ಮಹಾಮಳೆಯ ಆರ್ಭಟದಿಂದ ನೆಲೆಯನ್ನೇ ಕಳೆದುಕೊಂಡು ಸಂತ್ರಸ್ತರಾದವರ ಬದುಕಿಗೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೊಡಗಿನ ಜನತೆಯೊಂದಿಗಿದ್ದು, ಇದಕ್ಕಾಗಿ ಸಾವಿರ ಇಲ್ಲವೆ ಎರಡು ಸಾವಿರ ಕೋಟಿ ವೆಚ್ಚವಾದರೂ ಚಿಂತೆ ಇಲ್ಲವೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಯ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಈಗಾಗಲೆ ಜಿಲ್ಲಾ ವ್ಯಾಪ್ತಿಯ 41 ಪುನರ್ವಸತಿ ಕೇಂದ್ರಗಳಲ್ಲಿ 4 ಸಾವಿರ ಸಂತ್ರಸ್ತರು ಆಶ್ರಯನ್ನು ಪಡೆದಿದ್ದಾರೆ ಎಂದರು. ಇವರೆಲ್ಲರಿಗೆ ಮತ್ತೆ ಉತ್ತಮ ಬದುಕನ್ನು ರೂಪಿಸಿಕೊಡುವುದರೊಂದಿಗೆ, ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಗೆ ಅಗತ್ಯ ಪರಿಹಾರವನ್ನು ಒದಗಿಸಿ ಸಂಕಷ್ಟದಲ್ಲಿ ಸಿಲುಕಿರುವವರೆಲ್ಲರಿಗೆ ನೆರವು ನೀಡಲು ಸರ್ಕಾರ ಸದಾ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಸ್ವತಃ ತಮ್ಮೊಂದಿಗೆ ಮಾತನಾಡಿ ಭರವಸೆ ನೀಡಿದ್ದಾರೆ ಎಂದರು.

ನೆರವು ಕಾರ್ಯ ಬಿರುಸು
ಜಿಲ್ಲಾ ವ್ಯಾಪ್ತಿಯ ಎಲ್ಲಾ 104 ಪಂಚಾಯ್ತಿಗಳಲ್ಲಿ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅಗತ್ಯ ನೆರವನ್ನು ಒದಗಿಸಲು ಆಯಾ ಪಂಚಾಯ್ತಿಗಳ ಕಂದಾಯ ಅಧಿಕಾರಿಗಳು, ಪಿಡಿಒಗಳಿಗೆ ಸೂಚಿಸಿ, ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಜಿಲ್ಲಾಧಿಕಾರಿಗಳು ಅತಿವೃಷ್ಟಿಯಿಂದ ಉಂಟಾಗಿರುವ ಸಂಕಷ್ಟಗಳಿಗೆ ಪರಿಹಾರ ಕಾರ್ಯಗಳನ್ನು ನಡೆಸಲು ವಿವಿಧ ಇಲಾಖೆಗಳಿಗೆ ಅಗತ್ಯ ಹಣಕಾಸನ್ನು ಒದಗಿಸಿರುವುದಾಗಿ ತಿಳಿಸಿದರು.

ಅಧಿಕಾರಿಗಳ ನಿಯುಕ್ತಿ
ಜಿಲ್ಲಾ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಪುನರ್ವಸತಿ ಕೇಂದ್ರಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವುದಕ್ಕೆ ಪೂರಕವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಈಗಾಗಲೆ ನಿಯುಕ್ತಿಗೊಳಿಸಲಾಗಿದೆ. ಅತೀ ಹೆಚ್ಚಿನ ಸಂತ್ರಸ್ತರು ಪುನರ್ವಸತಿ ಕೇಂದ್ರಗಳಲ್ಲಿ ಇರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉದ್ಭವಿಸಿರಬಹುದಾದರೂ ಅದನ್ನು ತಿಳಿದುಕೊಂಡು ಆಯಾ ಸಂದರ್ಭವೆ ಪರಿಹರಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಮಹಾಮಳೆಯಿಂದ ನಡೆದಿರುವ ಅನಾಹುತಗಳಲ್ಲಿ ಸಿಲುಕಿ ಯಾವುದೇ ವ್ಯಕ್ತಿ ನಾಪತ್ತೆಯಾಗಿದ್ದರೆ ಆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಕ್ಷಣ ಮಾಹಿತಿ ಒದಗಿಸುವಂತೆ ಸಚಿವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ರಾಜ್ಯ ಕಾರ್ಯದರ್ಶಿ ಅಂಬುದಾಸ್, ಸಿಇಒ ಪ್ರಶಾಂತ್ ಕುಮಾರ್ ಹಾಗೂ ಹಿರಿಯ ಅಧಿಕಾರಿ ಚಾರುಲತಾ ಸೋಮಲ್ ಉಪಸ್ಥಿತರಿದ್ದರು.

See also  ಸಂತ್ರಸ್ತರ ಗ್ರಾಮದಲ್ಲಿ “ಅಕ್ಕ” ಬಳಗದಿಂದ ಶಾಲೆ ನಿರ್ಮಾಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು