ಬಾಗಲಕೋಟೆ: ಶನಿವಾರ ಸಂಜೆ ತಾಲ್ಲೂಕಿನ ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ಬಾಲಕರು ಈಜುಬಾರದೇ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತ ಬಾಲಕರನ್ನು ಸುಹಾಸ್ ನೀಲಣ್ಣವರ (15), ಮೇಘರಾಜ ಪತ್ತಾರ (14) ಎಂದು ಗುರುತಿಸಲಾಗಿದೆ. ಸಂಜೆಯಾದರು ಮಕ್ಕಳು ಮನೆಗೆ ಬಂದಿಲ್ಲವೆಂದು ಪೋಷಕರು ಪೊಲೀಶರ ಮೊರೆ ಹೋಗಿದ್ದಾರೆ.
ತಡರಾತ್ರಿ ಹುಡುಕಾಟ ನಡೆಸಿ ಕೃಷಿ ಹೊಂಡದಿಂದ ಪೊಲೀಸರು ಶವ ಹೊರತೆಗೆದಿದ್ದಾರೆ.ಘಟನೆ ಸಂಬಂಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.